ಜೇವರ್ಗಿ: ಇಲ್ಲಿನ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಿಗೆ ಖಾಯಂ ಆಗಿ ತಹಶೀಲ್ದಾರರನ್ನು ನೇಮಿಸುವಂತೆ ಒತ್ತಾಯಿಸಿ ಜಿಲ್ಲಾ ಸಾಹಾಯಕ ಆಯುಕ್ತರು ಕಲಬುರ್ಗಿ ಮಮತಾ ಕುಮಾರಿ ಇವರಿಗೆ ವಕೀಲರಾದ ಮೋಹಿನೋದ್ದೀನ್ ಇನಾಮ್ದಾರ್ ಮನವಿಮಾಡಿದ್ದಾರೆ.
ಅವಳಿ ತಾಲೂಕಿನ ಜನರಿಗೆ ಅರಳಿತಾತ್ಮಕವಾಗಿ ತೊಂದರೆ ಆಗುತ್ತಿದ್ದು ಕೂಡಲೇ ತಸಿಲ್ದಾರರನ್ನು ನೇಮಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಸಕಾಲದಲ್ಲಿ ರೈತರು ಸೇರಿದಂತೆ ಸಾರ್ವಜನಿಕರ ಕೆಲಸ ಕಾರ್ಯ ಸುಗಮಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದರು.