ಕಾರ್ಮಿಕ ಇಲಾಖೆಯಲ್ಲಿ ಹಗರಣ | ತನಿಖೆಗೆ ಒತ್ತಾಯಿಸಿ ಕಚೇರಿ ಮುಂದೆ ಪ್ರತಿಭಟನೆ

0
122

ಕಲಬುರಗಿ: ಇಂಡಿಯನ್ ಭಾರತೀಯ ಕಾಂಗ್ರೇಸ ಟ್ರೇಡ್ ಯುನಿಯ ವತಿಯಿಂದ ಜಿಲ್ಲಾ ಕಾರ್ಮಿಕ ಕಛೇರಿ ಅಧಿಕಾರಿಗಳ ಮುಂದೆ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.

ಪರಿಷ್ಠಗೊಂಡಿರು ಪಿಂಚಣಿ ಮದುವೆ ಹಾಗೂ ಹೆರಿಗೆ ಸಹಾಯಧನವನ್ನು ಕೂಡಲೇ ಜಾರಿಗೊಳಿಸಬೇಕು, ಬಾಕಿರುವ ಎಲ್ಲ ಅರ್ಜಿಗಳನ್ನು ಕೂಡಲೇ ಇತ್ಯರ್ಥಗೊಳಿಸಲು ಅಗತ್ಯ ಕ್ರಮವಹಿಸಬೇಕು ಕೂಡಲೇ ವಿದ್ಯಾರ್ಥಿ ವೇತನ ಅರ್ಜಿಗಳನ್ನು ವಿಳಂಬ ವಿಲ್ಲದೆ ಸಲ್ಲಿಸಲು ಆನಲೈನ್ ವ್ಯವಸ್ಥೆ ಸರಿಪಡಿಸಬೇಕು. ಎಲ್ಲಾ ಕಾರ್ಮಿಕ ಅಧಿಕಾರಿ ಮತ್ತು ಕಾರ್ಮಿಕ ನಿರೀಕ್ಷಕರ ಕಛೇರಿಗಳಲ್ಲಿ ಕಾರ್ಮಿಕರ ಅರ್ಜಿಗಳನ್ನು ಕೂಡಲೆ ವಿಲೇವಾರಿ ಮಾಡಬೇಕು ಮದುವೆ, ಹೇರಿಗೆ ಅಂತ್ಯಸಂಸ್ಕಾರ ಮತ್ತು ಪಿಂಚಣಿ ಅರ್ಜಿಗಳ ವಿಷಯದಲ್ಲಿ ಕಾರ್ಮಿಕ ನಿರೀಕ್ಷಕರು ನಿಲಕ್ಷ ಮಾಡುತ್ತಿರುತ್ತಾರೆ. ಅದನ್ನ ಸರಿಪಡಿಸಬೇಕು,ಜಿಲ್ಲಾವಾರು ಅಥವಾ ತಾಲೂಕವಾರು, ಕಾರ್ಮಿಕ ಮುಖಂಡರು ಮತ್ತು ಕಾರ್ಮಿಕ ಅಧಿಕಾರಿಗಳ ಸಭೆ ನಡೆಯಬೇಕು.

Contact Your\'s Advertisement; 9902492681

ಕಟ್ಟಡ ಕಾರ್ಮಿಕರ “ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಖರೀದಿಗಳ ಅವ್ಯವಹಾರಗಳು ತನಿಖೆಯಾಗಬೇಕು.ಮನೆ ನಿರ್ಮಾಣಕ್ಕೆ 5 ಲಕ್ಷ ರೂ ಸಹಾಯಧನ ಸೇರಿ ಎಲ್ಲ ಘೋಷಿತ ಯೋಜನೆಗೆ ಅನುದಾನ ನೀಡಬೇಕು ಎಲ್ಲ ಕಟ್ಟಡ ಕಾರ್ಮಿಕರು ಹಾಗೂ ಆವಲಂಭಿಕರಿಗೆ ನಗದುರಹಿತ ವೈದ್ಯಕೀಯ ವೆಚ್ಚ ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗುವ ರೋಗಗಲಿಗೆ ಮಂಡಳಿಯಿಂದ ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸಬೇಕು ಹಾಗೂ ಚಿಕಿತ್ಸೆಗೊಳಪಡುವ ಕಾರ್ಮಿಕರ ದಿನಗಳ ವೇತನ ದಿನಕ್ಕೆ ಕನಿಷ್ಠ ರೂ 500 ಪಾವತಿ ಮಾಡಬೇಕು.

ಕ್ರಮವಹಿಸುವದು. ನಿರ್ಮಾಣ ಸ್ಥಳಗಳಲ್ಲಿ ಸಂಭವಿಸುವ ಸಾವು ನೋವುಗಳ ತಡೆಗಟ್ಟಬೇಕು ಮತ್ತು ಸುರಕ್ಷತೆಗೆ ಆಗತ್ಯ ಕ್ರಮವಹಿಸಬೇಕು. ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ನಿಯಂತ್ರಣ ಮಾಡಬೇಕು. ಬಿಲ್ಡರ್ ಗಳಿಂದ ಸಣ್ಣ ಗುತ್ತಿಗೆದಾರ ಮೆಸ್ತ್ರಿಗಳಿಗೆ ಆಗುತ್ತಿರುವ ಹಣಕಾಸಿನ ವಂಚನೆ ಹಾಗೂ ಕಾರ್ಮಿಕರಿಗೆ ಆಗುತ್ತಿರುವ ಕೂಲಿ ವಂಚನೆ ತಡೆಗಟ್ಟಲು ವಿಶೇಷ ಕಾನೂನು ಜಾರಿಗೊಳಿಸಬೇಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾನೂನು -1996 ಮತ್ತು ಸೆಸ್ ಕಾನೂನು-1996 ಈ ಎರಡೂ ಕಾನೂನು ಗಳನ್ನು ಮನರ್ ಸ್ಥಾಪಿಸಬೇಕು.ಕೋವಿಡ್ ನಂತರದಲ್ಲಿ ನಿರ್ಮಾಣ ಚಟುವಟಿಕೆಗಳು ಮತ್ತೆ ತೀವ್ರಗೊಳ್ಳುತ್ತಿವೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿಯುತ ಬದುಕಿಗೆ ಸರ್ಕಾರ ಅವಕಾಶ ಕಲ್ಪಿಸಿ ಕಟ್ಟಡ ಕಾರ್ಮಿಕರ ಜೀವ ಮತ್ತು ಜೀವನವನ್ನು ಸಂರಕ್ಷಿಸಬೇಕು. ಎಲ್ಲಾ ಸೌಲಭ್ಯಗಳು ದುಪ್ಪಟ್ಟು ಆಗಬೇಕು.ಹೆರಿಗೆ ಸೌಲಭ್ಯ ಛಾಂಡ್ ಬದಲು ನಗದು ರೂಪದಲ್ಲಿ ನೀಡಬೇಕು, ಎಲ್ಲಾ ಕಾರ್ಮಿಕ ಸಂಘಟನೆಗೆ ಪೆÇ್ರೀತ್ಸಾಹ ನೀಡಬೇಕು, (1 ಅರ್ಜಿಗೆ 50 ರೂ. ನೀಡಬೇಕು), ಜಿಲ್ಲೆಯಲ್ಲಿ ಬಹುತೇಕ ಬಹು ದೊಡ್ಡ ದೊಡ್ಡ ಸಿಮೆಂಟ ಕಾರ್ಖಾನೆಗಳಿದ್ದು ಅಲ್ಲಿ ಸ್ಥಳಿಯರಿಗೆ ಕೆಲಸ ನೀಡದೆ ಹೊರಗಿನ ಜನರಿಗೆ ಅತಿ ಹೆಚ್ಚಾಗಿ ಪ್ರಾಮುಖ್ಯತೆ ನೀಡುತ್ತಿರುವದನ್ನು ತಡೆಗಟ್ಟಬೇಕು. ಜಿಲ್ಲೆಯ ಎಲ್ಲಾ ಸೋಲಾರ ಪವರ ಪ್ಲಾಂಟಿನಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನವು ಕೂಡಾ ನೀಡುತ್ತಿಲ್ಲ.

ಪ್ರತಿಭಟನೆಯಲ್ಲಿ ಇಂಡಿಯನ್ ಭಾರತೀಯ ಕಾಂಗ್ರೇಸ ಟ್ರೇಡ್ ಯುನಿಯ ಜಿಲ್ಲಾಧ್ಯಕ್ಷ ಅಶೋಕ ಗುಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದು ಜಾಧವ, ಕಾಂಗ್ರೇಸ್ ಕಾರ್ಯಕರ್ತ ಮಿರಾಜ್ ಶಲ್ಯಾಟಿವಾಲಾ, ಸೇಡಂ ತಾಲೂಕ ಯುತ್ ಕ್ರಾಂಗ್ರೇಸ್ ಅಧ್ಯಕ್ಷ ಭೀಮಾಶಂಕರ, ಕಾಂಗ್ರೇಸ್ ಯುವ ಮುಖಂಡರಾದ ಬಸವಂತರಾವ ಮಾಲಿಪಾಟೀಲ, ಅಭೀಷೇಕ್ ಭಾಗೋಡಿ, ಸತೀಶ ದುದನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here