ಇಬ್ಬರು ಕಳ್ಳಿಯರ ಬಂಧನ

0
26

ಕಲಬುರಗಿ: ಇಬ್ಬರು ಕಳ್ಳಿಯರನ್ನು ಬಂಧಿಸಿರುವ ಬ್ರಹ್ಮಪುರ ಪೊಲೀಸರು 3 ಲಕ್ಷ ರೂ. ಮೌಲ್ಯದ 60 ಗ್ರಾಂ. ಬಂಗಾರದ ಆಭರಣ ಜಪ್ತಿ ಮಾಡಿದ್ದಾರೆ.

ಮಿಲ್ಲತ್ ನಗರದ ತಾಹಿರಾ ಬೇಗಂ (46) ಹಾಗೂ ಶಹಾಬಾದ ಲೋಹಾರಗಲ್ಲಿಯ ಫರ್ವಿನ್ ಬೇಗಂ (29) ಎಂಬುವವರನ್ನು ಬಂಧಿಸಿ 1 ಲಕ್ಷ ರೂ. ಮೌಲ್ಯದ 20 ಗ್ರಾಂ. ಬಂಗಾರದ ಸರ, 1.50 ಲಕ್ಷ ರೂ. ಮೌಲ್ಯದ 30 ಗ್ರಾಂ. ಬಂಗಾರದ ಸಿಂಗಾರ ಸರ ಹಾಗೂ 50 ಸಾವಿರ ರೂ. ಮೌಲ್ಯದ 10 ಗ್ರಾಂ. ಬಂಗಾರದ ಚೈನ್ ಸೇರಿದಂತೆ ಒಟ್ಟು 3 ಲಕ್ಷ ರೂ. ಮೌಲ್ಯದ 60 ಗ್ರಾಂ. ಬಂಗಾರದ ಆಭರಣಗಳನ್ನು ಜಪ್ತಿ ಮಾಡಿ ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here