ಆಳಂದ : ಪೋಲಿಸ್ ಬಗ್ಗೆ ಭಯ ಬೇಡ

0
77

ಆಳಂದ : ಪೊಲೀಸರನ್ನು ನೋಡಿದರೆ ಭಯಪಡಬೇಡಿ, ನಾವು ನಿಮ್ಮ ರಕ್ಷಕ, ನಿಮಗೆ ನ್ಯಾಯ ಒದಗಿಸಿ, ರಕ್ಷಣೆ ನೀಡುವುದೇ ನಮ್ಮ ಜವಾಬ್ದಾರಿ ಎಂದು ಸಿಪಿಐ ಬಾಸು ಚೌಹಾನ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಆಳಂದ ಪೋಲಿಸ್ ಠಾಣೆಯ ವತಿಯಿಂದ ಸರ್ಕಾರಿ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ “ಸ್ಟುಡೆಂಟ್ ಪೋಲಿಸ್ ಕೆಡಿಟ್ ” ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತಾನಾಡಿದ ಅವರು, ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಬಹುದು.ಈ.ಆರ್.ಎಸ್.ಎಸ್. 112ಕ್ಕೆ ಕರೆ ಮಾಡಿ,ದೂರು ಸಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Contact Your\'s Advertisement; 9902492681

ಪಿಎಸ್ಐ ತಿರುಮಲೇಶ್ ಮಾತನಾಡಿ, ಈ ಯೋಜನೆ ಎರಡು ವರ್ಷಗಳ ತರಬೇತಿ ಇದ್ದು, ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯಗಳ ಸಂಪೂರ್ಣ ಠಾಣೆಯಲ್ಲಿ ತರಬೇತಿ ನೀಡಲಿದೆ. ಪರೀಕ್ಷೆಯಲ್ಲಿ ಪಾಸಾದದವರಿಗೆ ಪ್ರಮಾಣ ಪತ್ರ ಸಿಗಲಿದೆ ಎಂದು ವಿವರಿಸಿದರು.

ಶಿಕ್ಷಕ ಮಲ್ಲೇಶ್ ಭಂಡಾರಿ ಮಾತನಾಡಿ ಈ ಯೋಜನೆಯ ಬಗ್ಗೆ ಪ್ರಸ್ತಾಪಿಕವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು ಈ ಯೋಜನೆ ಜಿಲ್ಲೆಯ ನಮ್ಮ ಶಾಲೆ ಆಯ್ಕೆ ಹಿನ್ನೆಲೆ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯಗುರು ಮಚೇಂದ್ರ ಪಂಚಾಳೆ, ಪಿಯು ಪ್ರಾಂಶುಪಾಲೆ ಜಹೀರಾ ಫಾತೀಮಾ ವಿದ್ಯಾರ್ಥಿಗಳಾದ  ಎಂ.ಡಿ.ಮಕಬುಲ್,ಅಬ್ಬಸ್ ,ವಿಕಾಸ ಸರ್ಕಾರಿ ಬಾಲಕ – ಬಾಲಕಿಯರ,ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪೋಲಿಸರಾದ ನಿಂಗೂ ,ಸಿದ್ದು ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here