ಕಲಬುರಗಿ ಜಿಲ್ಲೆಯ ಚಿಂಚೋಳಿ ಮತಕ್ಷೇತ್ರದ ಚೆಂಗಟಾ ಗ್ರಾಮದಿಂದ ಧುತ್ತರಗ ಗ್ರಾಮಕ್ಕೆ ತೆರಳುವ ಮಾರ್ಗವು ಡಾಂಬರಿಕರಣ ಮಾಡಿದ ಐದು ದಿನದಲ್ಲಿಯೇ ಕಿತ್ತು ಹೋಗುತ್ತಿದೆ. ಈ ಕುರಿತು ರಾಜ್ಯದ ಎಲ್ಲಾ ಕನ್ನಡ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗಿದ್ದು ಚಿಂಚೋಳಿ ಮತಕ್ಷೇತ್ರದ ಮಾನ ರಾಜ್ಯದಲ್ಲಿ ಮತ್ತೊಮ್ಮೆ ಹಾರಾಜಾಗಿದೆ.
ಚಿಂಚೋಳಿ ಮತಕ್ಷೇತ್ರವು ಉಮೇಶ್ ಜಾಧವ್, ಅವಿನಾಶ್ ಜಾಧವ್ ಅವಧಿಯಲ್ಲಿ ಯಾವ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದೆ ಎನ್ನುವದಕ್ಕೆ ಇದೊಂದು ತಾಜಾ ಉದಾಹಣೆಯಾಗಿದೆ.
ಐವತ್ತು ಲಕ್ಷದ ಕಾಮಗಾರಿ ಇದಾಗಿದ್ದು ಟೆಂಡರ್ ರಾಜಶೇಖರ್ ಜಾಧವ್ ಎನ್ನುವವರು ಪಡೆದುಕೊಂಡಿದ್ದು ಉಪ ಗುತ್ತಿಗೆದಾರರಾಗಿ ಉಮೇಶ್ ಜಾಧವ್ ಸಹೋದರ ರಾಜು ಜಾಧವ್ ರವರು ಈ ಕಾಮಗಾರಿಯನ್ನು ಕಳಪೆಯಾಗಿ ಪೂರ್ಣಗೋಳಿಸಿದ್ದಾರೆ.
ಪಂಚಾಯತ್ ರಾಜ್ ಇಲಾಖೆಗೆ ಒಳಪಡುವ ಈ ಕಾಮಗಾರಿಯು ಸಂಪೂರ್ಣ ಕಳಪೆಯಾಗಿರುವ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗಿದ್ದು ಇಲ್ಲಿಯವರೆಗೂ ಸಂಬಂಧಪಟ್ಟ ಯಾವ ಅಧಿಕಾರಿಯು ಭೇಟಿ ಕೊಡದೇ ಇರುವುದು ಆಶ್ಚರ್ಯವಾಗಿದೆ. ಶಾಸಕ ಅವಿನಾಶ್ ಜಾಧವ್ ಒಂದೇ ಒಂದು ಹೇಳಿಕೆದೊಡದಿರುವುದು ಯಾಕೆ ಅನ್ನುವುದು ರಹಸ್ಯವಾಗಿದೆ.
ಅಧಿಕಾರಿಗಳು ಕೇಳಿದರೆ ಉಡಾಫೆ ಉತ್ತರ ಕೊಡುತ್ತಾರೆ. ಕೂಡಲೇ ಈ ಕಳಪೆ ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಈ ಕಳಪೆ ಕಾಮಗಾರಿಯಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು. ಕಾಮಗಾರಿಯು ಕಳಪೆಯಾಗಿರುವುದಕ್ಕೆ ತನಿಖೆಯಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಆಗ್ರಹ. – ಶರಣು ಪಾಟೀಲ ಮೋತಕಪಲ್ಲಿ, ವಕ್ತಾರರು ಬ್ಲಾಕ್ ಕಾಂಗ್ರೆಸ್ ಸಮಿತಿ ಚಿಂಚೋಳಿ.