3 ರಂದು ಜೇವರ್ಗಿಯಲ್ಲಿ 6 ನೇ ತಾಲೂಕಾ ಸಾಹಿತ್ಯ ಸಮ್ಮೇಳನ

0
21

ಕಲಬುರಗಿ: ಇದೇ ಡಿ. 3 ರ ಶನಿವಾರ ಜೇವರ್ಗಿ ತಾಲೂಕಿನಲ್ಲಿ 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಜೇವರ್ಗಿ ಪಟ್ಟಣ ಹಾಗೂ ತಲೂಕಿನ ಸಾಹಿತ್ಯ ಆಸಕ್ತರು, ಸಾರ್ವಜನಿಕರು, ಕವಿ, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜೇವರ್ಗಿ ಶಾಸಕರು ಹಾಗೂ ವಿದಾನಸಭೆ ವಿರೋಧ ಪಕ್ಷ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯ್ ಸಿಂಗ್ ಸರ್ವರಿಗೂ ಮನವಿ ಮಾಡಿದ್ದಾರೆ.

ಸಮ್ಮೇಳನ ಸ್ವಾಗತಿಯ ಅಧ್ಯಕ್ಷರೂ ಆಗಿರುವ ಡಾ. ಅಜಯ್ ಸಿಂಗ್ ಬಸ್ ನಿಲ್ದಾಣ ಬಳಿಯ ಅಂಬೇಡ್ಕರ್ ಸಬಾ ಭವನದಲ್ಲಿ ಇಡೀ ದಿನ ನಡೆಯುವ ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಹೃದಯರೆಲ್ಲರೂ ಪಾಲ್ಗೊಳ್ಳುವಂತೆ ಕೋರಿದ್ದಾರೆ.

Contact Your\'s Advertisement; 9902492681

ಪ್ರತಿಕಾ ಹೇಳಿಕೆ ನೀಡಿರುವ ಅವರು ನಿವೃತ್ತ ಪ್ರಾಚಾರ್ಯ ಕೆಎಸ್ ನಾಯಕ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಮಿನಿ ವಿಧಾನಸೌಧದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ತಮ್ಮ ನೇತೃತ್ವದಲ್ಲಿ ಅಭಾ ವೀರಶೈವ ಮಹಾಸಭಾ ತಾಲೂಕು ಅದ್ಯಕ್ಷರಾಆದ ರಾಜಶೇಖರ ಸಿರಿ ಉದ್ಘಾಟಿಸಲಿದ್ದಾರೆ, ಈ ಮೆರವಣಿಗೆ ಭವ್ಯವಾಗಿ ನಡೆಸಲಾಗುತ್ತಿದೆ. ಕೋಲಾಟ, ಡೋಳ್ಳು, ಭಜನಾ ಮೇಳ, ಕರಡಿ ಮಜಲು, ಚೌಡಕಿ ನೃತ್ಯ, ವೇಷಗಾರರು, ಪುರವಂತಿಕೆ, ರಣ ಹಲಿಗೆ, ನಂದಿಕೋಲು, ಪೂಜಜಾ ಕುಣಿತ, ಲಂಬಾಣಿ ನೃತ್ಯ, ಎನ್‍ಸಿಸಿ, ಗೃಹ ರಕ್ಷಕ ದಳದವರೆಲ್ಲರೂ ಮೆರವಣಿಗೆಯಲ್ಲಿ ಪಾಲ್ಗಂಡು ಶೋಭೆ ತರಲಿದ್ದಾರೆ.

ಸಮ್ಮೇಳನದ ಸಮಾರಂಭಲ್ಲಿ ಚಲನ ಚಿತ್ರ ನಟ, ನಟಿಯರಾದ ಮಿಂಚು, ಡಾ. ಪಂಕಜಾ, ಲಲಿತಾ, ನೀಲಾ ಜೇವರ್ಗಿ, ಹಾಸ್ಯ ಕಲಾವಿದರಾದ ಜೇವರ್ಗಿ ರಾಜಣ್ಣ, ಉಲ್ಲಾಸ ಗುರುಮಠ, ಗುಂಡಣ್ಣ ಡಿಗ್ಗಿ, ಶರಣು ದೇಸಾಯಿ ಪಾಲ್ಗೊಂಡು ಅಂದಿನ ಹಾಸ್ಯ ಸಂಜೆ ನಡೆಸಿಕೊಡುತ್ತಿದ್ದಾರೆ. ಷಣ್ಮುಖ ಶಿವಯೋಗಿಗಳ ವೇದಿಕೆಯಲ್ಲಿ ನಡೆಯುವ ಉದ್ಘಾಟನೆಯಲ್ಲಿ ಶಾಶ್ಲತಸ್ವಾಮಿ ಮುಕುಂದಿಮಠ, ಮಾಜಿ ಶಾಸಕ ದೊಡ್ಡಪಗೌಡ ಪಾಟೀಲ್, ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕರು ಪಾಲ್ಗೊಳ್ಳುತ್ತಿದ್ದಾರೆ. ಸಮ್ಮೇಳನಾಧ್ಯಕ್ಷ ಕೆಎಸ್ ನಾಯಕರ ಸಮ್ಮೇಳನ ಬಾಷಣವೂ ನಡೆಯುತ್ತದೆ. ತಾಲೂಕು ಕಸಾಪ ಅಧ್ಯಕ್ಷ ಎಸ್‍ಕೆ ಬಿರಾದಾರ್ ಪ್ರಸ್ತಾವಿಕ ಮಾತನ್ನಾಡಲಿದ್ದಾರೆಂದು ಸಮ್ಮೇಳನದ ಮಾಹಿತಿ ನೀಡಿದ್ದಾರೆ.

ಸಮ್ಮೇಳನದಲ್ಲಿ ಜೇವರ್ಗಿ ಸಾಹಿತ್ಯ ಪರಂಪರೆ, ಜೇರಟಗಿ ಸಿದ್ದಲಿಂಗ ಕವಿಗಳ ಪುರಾಣ, ಸಮ್ಮೇಳಾಧ್ಯಕ್ಷರ ಬದುಕು- ಬರಹ, ಜನಮಾನಸದಲ್ಲಿ ಜಾನಪದ , ತತ್ವಪದ, ಶರಣಗೌಡ ಪಾಟೀಲ್ ಜೈನಾಪೂರ  ಸಾಹಿತ್ಯ ಅವಲೋಕನ ಚರ್ಚೆಗಳು ಹಾಗೂ ಮ. 3 ಗಂಟೆಗೆ  ಅಮೃತ ದೊಡ್ಮನಿ, ಪ್ರಕಾಶ ಅಂಗಡಿ, ಗೌವಿಂದರಾಜ ಅಲ್ದಾಳರ ಉಪಸ್ಥಿತಿಯಲ್ಲಿ ಕವಿಗೋಷ್ಠಿ ನಡೆಯಲಿದೆ. ಇದಲ್ಲದೆ ವಿವಿಧ ಕಲಾ ತಂಡಗಳವರು ಪಾಲ್ಗೊಂಡು ಗಾಯನ ಪ್ರಸ್ತುತ ಪಡಿಸುತ್ತಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ನೆಲೋಗಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ, ಗುರುಬಸವ ಸ್ವಾಮಿಗಳು ಸೇರಿದಂತೆ ಅನೇಕರು ಪಾಲ್ಗೊಳ್ಳುತ್ತಿದ್ದಾರೆ. ಡಾ. ಕರಿಗೋಳೇಶ್ವರ ಸಮಾರೋಪ ಮಾತುಗಳನ್ನಾಡಲಿದ್ದಾರೆ. ಡಿಬಿ ಪಾಟೀಲ್, ಬಾಬೂರಾವ ಯಡ್ರಾಮಿ, ಕಮಲಾಬಾಯಿ, ಭಾಸ್ಕರರಾವ್, ಸೇರಿದಂತೆ 15 ಕ್ಕೂ ಹೆಚ್ಚು ಸಾಧಕರಿಗೆ ಸನ್ಮಾನಿಸಲಾಗುತ್ತಿದೆ.

ಬಂದವರಿಗೆಲ್ಲರಿಗೂ ಭೋಜನ, ಕುಡಿಯುವ ನೀರು ಸೇರಿದಂತೆ ಸಕಲ ಸವಲತ್ತುಗಳನ್ನು ಕಲ್ಪಿಸಲಾಗಿದ್ದು ಸಹೃದಯಿ ಜನತೆ, ಸಾಹಿತಿಗಳು, ಸಾಹಿತ್ಯಪ್ರೀಯರು, ಶಾಲಾ ಮಕ್ಕಳು, ಕಾಲೇಜು ಯುವಕರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಸಮೇಳನದಲ್ಲಿ ಪಾಲ್ಗೊಂಡು ಸಾಹ್ಯಿದ ರಸದೌತಣ ಸವಿಯುವಂತೆ ಶಾಸಕರು ಹಾಗೂ ಸಮ್ಮೇಳನ ಸ್ವಾಗತ ಸಮೀತಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here