ಕಲಬುರಗಿ: ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಎಸ್.ಡಿ.ಪಿ.ಐ ಕಾರ್ಯಕರ್ತರು ವಕ್ಫ್, ಆಸ್ತಿ ಆಕ್ರಮವಾಗಿ ಮಾರಾಟ ಮತ್ತು ಬಳಸಿಕೊಳುತ್ತಿರುವ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಆಸ್ತಿ ತೆರವುಗೊಳಿಸಬೇಕೆಂದು ಪ್ರತಿಭಟನೆ ನಡೆಸಿ ಆಗ್ರಹಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮಹ್ಮದ್ ಮೋಹಸಿನ್ ಮಾತನಾಡಿ, ಪಕ್ಷ ಕಳೆದ 6 ತಿಂಗಳಿಮದ ವಕ್ಫ್ ಬಚಾವೋ ಆಂದೋಲನ ಹಮ್ಮಿಕೊಂಡಿದ್ದು, ಈ ಮೂಲಕ ಸಭೆ ಸಮಾರಂಭ, ಜನ ಜಾಗೃತಿ, ಜಿಲ್ಲಾಡಳಿತ ಕಚೇರಿಗೆ ಮನವಿ, ಪತ್ರಿಕಾಗೋಷ್ಠಿ ಹಾಗೂ ಪ್ರತಿಭಟನೆಗಳು ನಡೆಸುತ್ತಿದೆ ಎಂದು ಮಾಹಿತಿ ನೀಡಿ, ದೇಶದಲ್ಲಿ ರೈಲ್ವೆ ಮತ್ತು ಶಿಕ್ಷಣ ಇಲಾಖೆ ಬಳಿಕ ಅತೀ ಹೆಚ್ಚು ಆಸ್ತಿ ವಕ್ಫ್ ಇಲಾಖೆಯಲ್ಲಿದೆ. ಆದರೆ ಭೂಗಳ್ಳರು 40% ಆಸ್ತಿಯಾನ್ನು ಆಕ್ರಮವಾಗಿ ಮಾರಟ ಹಾಗೂ ಒತ್ತುವರಿ ಮಾಡಿಕೊಂಡಿದ್ದು, ಈ ಅವ್ಯವಹಾರದಲ್ಲಿ ಮುತವಲ್ಲಿಗಳು, ರಾಜಕಾರಣಿಗಳ ಹಾಗೂ ಸರಕಾರಿ ಅಧಿಖಾರಿಗಳು ಶಾಮೀಲಾಗಿದ್ದಾರೆಂದು ಅವರು ಆರೋಪಿಸಿದರು.
ರಾಜ್ಯಕೀಯ ಪಕ್ಷಗಳು ತಮ್ಮ ಆಡಳಿತ ಅವಧಿಯಲ್ಲಿ ವಕ್ಫ ಒತ್ತುವರಿಯಾದ ಆಸ್ತಿಯನ್ನು ತೆರೆವುಗೊಳಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುಡಲೇ ಜಿಲ್ಲಾಡಳಿತ ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿರು ಬಗ್ಗೆ ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಗೊಂಡು ವಕ್ಫ್ ಆಸ್ತಿಯ ಲಾಭವನ್ನು ಸಮುದಾಯದ ಅಭಿವೃದ್ಧಿ, ಬಡತನ ನಿವಾರಣೆಗೆ ಹಾಗೂ ಶೈಕ್ಷಣಿಕ ಬೇಡಿಕೆ ಈಡೇರಿಕೆಗೆ ನೀಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಸದಸ್ಯ ಅಕ್ರಮ್ ಹುಸೈನ್, ಅಫ್ಸರ್ ಕೊಡ್ಲಿಪೇಟೆ, ಅಬ್ದುಲ್ ರಹೀಮ್ ಪಟೇಲ್ ಸೇರಿದಂತೆ ಮುಂತಾದವರು ಇದ್ದರು.