ಶಹಾಬಾದ: 12ನೇ ಶತಮಾನದ ವಚನಕಾರ ಶಿವಶರಣ ಮಾದರ ಚೆನ್ನಯ್ಯನವರ ವಚನಗಳನ್ನು ರಾಜ್ಯ ಸರ್ಕಾರ ಮುದ್ರಣ ಮಾಡಿ ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು. ರಾಜ್ಯಾದ್ಯಂತ ಅವರ ಜಯಂತಿಯನ್ನು ಸರಕಾರದಿಂದಲೇ ಆಚರಿಸಬೇಕು ಎಂದು ಶಹಾಬಾದ ಮಾದಿಗ ಸಮಾಜದ ಮುಖಂಡ ರವಿ ಬೆಳಮಗಿ ಆಗ್ರಹಿದ್ದಾರೆ.
ರಾಜ್ಯದಲ್ಲಿ ಹಲವು ಮಹನೀಯರ ಜಯಂತಿಗಳನ್ನು ಆಚರಣೆ ಮಾಡಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಆದರೆ 12ನೇ ಶತಮಾನದ ಮೊಟ್ಟ ಮೊದಲ ದಲಿತ ವಚನಕಾರ ಶಿವಶರಣ ಮಾದಾರ ಚೆನ್ನಯ್ಯನವರ ಜಯಂತಿ ಆಚರಿಸುವಲ್ಲಿ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಸುಮಾರು 80 ಲಕ್ಷದಿಂದ 90 ಲಕ್ಷದವರೆಗೆ ಮಾದಿಗ ಸಮಾಜದ ಜನಸಂಖ್ಯೆ ಇದ್ದರೂ ಕೂಡ ಈವರೆಗೂ ರಾಜ್ಯ ಸರ್ಕಾರವು ನಮ್ಮನ್ನು ಕಡೆಗಣಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದರಿ ಮಹಾ ಶರಣರ ಜಯಂತಿ ಇದೇ ಡಿಸೆಂಬರ್ ತಿಂಗಳಲ್ಲಿ ಸರ್ಕಾರದಿಂದಲೇ ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು.