8 ರಂದು ಕ್ಯಾಂಪಸ್ ಸಂದರ್ಶನ

0
63

ಕಲಬುರಗಿ: ರಾಮನಗರ ಜಿಲ್ಲೆಯ ಬಿಡದಿಯ ಮೆ. ಟೋಯೋಟೊ ಕೀರ್ಲೋಸ್ಕರ್ ಮೋಟಾರ್ಸ್ ಪ್ರೈ ಲಿಮಿಟೆಡ್‍ದಲ್ಲಿ ಐ.ಟಿ.ಐ ವೃತ್ತಿಯಲ್ಲಿ ಫಿಟ್ಟರ್, ಇಲೆಕ್ಟ್ರಿಷಿಯನ್ ಎಂ.ಎಂ.ವ್ಹಿ, ಎಂ.ಡಿ, ಟರ್ನರ್, ವೆಲ್ಡರ್ ಮತ್ತು ಟೂಲ್ ಆಂಡ ಡೈ ಮೇಕರ್ ಟ್ರೇಡ್‍ಗಳಲ್ಲಿ ಪಾಸಾದ ಹಾಗೂ ಪೂರಕ ಪರೀಕ್ಷೆಗೆ ಹಾಜರಾಗಿರುವ ವಯೋಮಿತಿ 18 ರಿಂದ 25 ವರ್ಷದೊಳಗಿನ ತರಬೇತಿದಾರರಿಗೆ ಇದೇ ಡಿಸೆಂಬರ್ 8 ರಂದು ಬೆಳಿಗ್ಗೆ 9 ಗಂಟೆಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ)ಯಲ್ಲಿ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ (ಪುರುಷ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಅರ್ಹ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಭಾವಚಿತ್ರ-2, ಆಧಾರ ಕಾರ್ಡ್, ಹಾಗೂ ಇತರೆ ದಾಖಲಾತಿಗಳೊಂದಿಗೆ ಕಲಬುರಗಿ ಎಂ.ಎಸ್.ಕೆ.ಮಿಲ್ ರಸ್ತೆಯಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಇಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸೂಚನಾ ಫಲಕವನ್ನು ಹಾಗೂ ಮೊಬೈಲ್ ಸಂಖ್ಯೆ 7259272146 ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here