ಕನ್ನಡ ಜ್ಯೋತಿ ರಥ ಯಾತ್ರೆ ಅದ್ಧೂರಿಯಾಗಿ ಸ್ವಾಗತಿಸೋಣ

0
10

ಸುರಪುರ : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಲಾಗುತ್ತಿರುವ ಕನ್ನಡ ಜ್ಯೋತಿ ರಥ ಯಾತ್ರೆ ಸುರಪುರ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರು ಮಾತನಾಡಿ, ನಾಳೆ(ಬುಧವಾರ) ಬೆಳಗ್ಗೆ 11.30 ಗಂಟೆಗೆ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಜಾಥಾ ಆಗಮಿಸಲಿದ್ದು ಸಮೀಪದ ಹಸನಾಪುರ ನಿಷ್ಠಿ ಎಂಜನಿಯರಿಂಗ್ ಕಾಲೇಜಿನಲ್ಲಿ ಜಾಥಾವನ್ನು ಬರಮಾಡಿಕೊಳ್ಳಲಾಗುವುದು ನಂತರ ಆದಿತಿ ಹೊಟೇಲ್ ವರೆಗೆ ಮೆರವಣಿಗೆಯಲ್ಲಿ ಜಾಥಾವನ್ನು ತೆಗೆದುಕೊಂಡು ಹೋಗಿ ಬೀಳ್ಕೊಡಲಾಗುವುದು ಎಂದು ಹೇಳಿದರು.

Contact Your\'s Advertisement; 9902492681

ಕನ್ನಡ ಜ್ಯೋತಿ ರಥ ಜಾಥಾಕ್ಕೆ ಶಾಲಾ ಮಕ್ಕಳು ಲೇಜಿಮ್ ಮತ್ತು ಡ್ರಮ್ ಮೂಲಕ ಮೆರವಣಿಗೆಯಲ್ಲಿ ಕೊಂಡೊಯುವರು. ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು, ಸಾಹಿತಿಗಳು, ಕನ್ನಡಪರ, ರೈತಪರ, ಪ್ರಗತಿಪರ ಸಂಘಟನೆಗಳ ಮುಖಂಡರು, ನಿಷ್ಠಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಇತರೆ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಜನವರಿ 6,7,8 ರಂದು ಹಾವೇರಿಯಲ್ಲಿ ವಿಶಿಷ್ಟವಾಗಿ ಆಚರಿಸಲು ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥ ಜಾಥಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಏರ್ಪಡಿಸಲಾಗಿರುತ್ತದೆ. ರಥ ಜಾಥಾವು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವಗಿರಿಯಿಂದ ಮೊದಲ್ಗೊಂಡು ತದನಂತರ ನಾಡಿನಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಸಮ್ಮೇಳನದ ಉದ್ಘಾಟನೆ ವೇಳೆಗೆ ಹಾವೇರಿ ತಲುಪಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರಣ ಜಾಥಾದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಶರಣಬಸವ ಯಾಳವಾರ ಮಾತನಾಡಿದರು. ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ, ನಿವೃತ್ತ ಎಸ್‍ಪಿ ಚಂದ್ರಕಾಂತ ಭಂಡಾರೆ, ಯುವ ಸಾಹಿತಿ ರಾಘವೇಂದ್ರ ಭಕ್ರಿ, ತಾಪಂ ಇಒ ಚಂದ್ರಶೇಖರ ಪವಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಪೂಜಾರ್, ಟಿಹೆಚ್‍ಒ ಡಾ.ಆರ್.ವಿ.ನಾಯಕ, ಸಬ್ ರೆಜಿಸ್ಟ್ರಾರ್ ಗುರುರಾಜ್ ಸಜ್ಜನ್, ಸಿಡಿಪಿಒ ಅನಿಲಕುಮಾರ, ಅಕ್ಷರ ದಾಸೋಹ ಎಡಿ ಅಮರೇಶ ಕಂಬಾರ್, ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ, ಎಸ್‍ಟಿ ಇಲಾಖೆ ಎಡಿ ಎಂ.ಸಲೀಂ, ಬಿಸಿಎಂ ಅಧಿಕಾರಿ ತಿಪ್ಪಾರೆಡ್ಡಿ, ಅಬಕಾರಿ ಇನ್ಸ್‍ಪೆಕ್ಟರ್ ಜಾಫರ್ ಪಟೇಲ್, ನಗರಸಭೆಯ ಗುರುಸ್ವಾಮಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here