ಬೆಂಗಳೂರು: ನಾಳೆ ಲೋಕಸಭಾ ಚುನಾವಣೆಗೆ 2ನೇ ಹಂತದ ಮತದಾನ ನಡೆಯಲಿದ್ದು, ಕರ್ನಾಟಕದ ರಾಜ್ಯದ 14 ಲೋಕಸಭಾ ಮತಕ್ಷೇತ್ರದಲ್ಲಿ ನಾಳೆ ಬೆಳಿಗ್ಗೆ 7ಗಂಟೆಯಿಂದ ಮತದಾನ ಪ್ರಾರಂಭವಾಗಲಿದೆ. ಕರ್ನಾಟಕ ಸೇರಿ 13 ರಾಜ್ಯ, ಒಂದು ಕೇಂದ್ರ ಆಡಳಿತ ಒಳಗೊಂಡು ಒಟ್ಟು ದೇಶದ 97 ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
13 ರಾಜ್ಯದ 97 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 1,644 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇವರಲ್ಲಿ ರಾಷ್ಟ್ರೀಯ ಪಕ್ಷ 209 ಅಭ್ಯರ್ಥಿಗಳು, ಪ್ರಾದೇಶಿಕ ಪಕ್ಷ 107 ಅಭ್ಯರ್ಥಿಗಳು,ಹಾಗೂ ಸ್ವತಂತ್ರ್ಯ888 ಅಭ್ಯರ್ಥಿಗಳಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಪ್ರದೇಶ ಮತ್ತು ರಾಜ್ಯಗಳಲ್ಲಿ ನಡೆಯುತ್ತಿರು ಮತದಾನದ ಕ್ಷೇತ್ರಗಳ ಸಂಖ್ಯೆ:
ಅಸ್ಸಾಂ(05), ಬಿಹಾರ(05), ಛತ್ತೀಸ್ಘಡ್(03), ಜಮ್ಮು-ಕಾಶ್ಮೀರ(02), ಕರ್ನಾಟಕ(14), ಮಹಾರಾಷ್ಟ್ರ(10), ಮಣಿಪುರ್(01), ಓದಿಶಾ(05), ತಮಿಳುನಾಡು(39), ತ್ರಿಪುರ(01), ಉತ್ತರಪ್ರದೇಶ(08), ಪಶ್ಚಿಮ ಬಂಗಾಳ(03), ಕೇಂದ್ರಾಡಳಿತ ಪ್ರದೇಶ ಪುದುಚೇರಿ(01) ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.