ಖರ್ಗೆ ಅವರನ್ನು ಗೆಲ್ಲಿಸಿ ಕಲಬುರಗಿ ಗೌರವ ಹೆಚ್ಚಿಸಿ: ಮಾಜಿ ಸಿಎಂ ಸಿದ್ದರಾಮಯ್ಯ

0
129

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಂಡರೇ ಹೆದರಿಕೆ ಹಾಗಾಗಿ ಅವರನ್ನು ಸೋಲಿಸಲು ಮೋದಿ ಹಾಗೂ ಅಮಿತ್ ಷಾ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಆದ್ದರಿಂದ ಅವರನ್ನು ಗೆಲ್ಲಿಸಿಕಳಿಸುವ ಮೂಲಕ ಈ ಭಾಗದ ಗೌರವ ಎತ್ತಿಹಿಡಿಯಬೇಕು ಎಂದು ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.

ಜಿಲ್ಲೆಯ  ಅಫಜಲಪೂರ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಮೇಶ್ ಜಾಧವ್ ಅವರನ್ನು ಹಿಗ್ಗಾ ಮುಗ್ಗಾ ಟೀಕಿಸಿದ ಸಿದ್ದರಾಮಯ್ಯ, ಅವನೇನೋ ಒಳ್ಳೆಯನಿರಬಹುದು ಎಂದು ಎಲ್ಲ ಅನುಕೂಲ ಮಾಡಿಕೊಟ್ಟೆ.‌ಸಂಸದೀಯ ಕಾರ್ಯದರ್ಶಿಯನ್ನಾಗಿ ಮಾಡಿದೆ. ಅವನು ಆಗಾಗ ನನ್ನ ಬಳಿ ಬಂದು ಖರ್ಗೆ ಹಾಗೂ ಅವರ ಮಗನನ್ನು ಬೈದುಕೊಂಡು ಬರೋನು. ನೀನ್ಯಾಕೆ ಅವರನ್ನ ಬೈತಿಯಾ ಹೋಗಯ್ಯಾ ಮುಂದಿನ ಸಲ ಕ್ಯಾಬಿನೆಟ್ ವಿಸ್ತರಣೆ ಮಾಡುವಾಗ ಮಂತ್ರಿ ಮಾಡುತ್ತೇನೆ ಹೋಗು ಎಂದು ಹೇಳಿ ಕಳಿಸಿದ್ದೆ ಆದರೆ, ಗೋಮುಖವ್ಯಾಘ್ರ ಜಾಧವ್ ನಮ್ಮ ಬೆನ್ನಿಗೆ ಚೂರಿ ಹಾಕಿ ಬಿಜೆಪಿಯವರ ಆಮಿಷಕ್ಕೆ ಒಳಗಾಗಿ ಈಗ ಖರ್ಗೆ ವಿರುದ್ದ ಓಟು ಕೇಳಲು ಬರುತ್ತಿದ್ದಾನೆ. ಅಂತವನಿಗೆ ಮತ ಹಾಕ್ತೀರಾ ? ಎಂದು ಪ್ರಶ್ನಿಸಿದರು.

Contact Your\'s Advertisement; 9902492681

ಬಾಬುರಾವ್ ಚಿಂಚನಸೂರು ಹಾಗೂ ಮಾಲೀಕಯ್ಯ ಗುತ್ತೇದಾರ ಅವರನ್ನೂ ಕೂಡಾ ಕಟುವಾಗಿ ಟೀಕಿಸಿದ ಸಿದ್ದರಾಮಯ್ಯ ಚಿಂಚನಸೂರು ಒಂತರಾ ಲೂಸು ಇದ್ದಂಗೆ. ಕೋಲಿ ಸಮಾಜವನ್ನ ಎಸ್ ಟಿಗೆ ಸೇರಿಸಬೇಕು ಅದಕ್ಕೆ ಬಿಜೆಪಿಗೆ ಹೋಗುತ್ತಿದ್ದೇನೆ ಎಂದ ಈಗ ಹೋಗಿದ್ದಾನಲ್ಲ ಗಂಗಾಮತಸ್ಥರನ್ನ ಎಸ್ ಟಿ ಸೇರಿಸಿದನಾ? ಅಂತವನಿಗೆ ಓಟು ಹಾಕಬೇಕಾ ಎಂದರು. ಈ ಸಲ ಚುನಾವಣೆಯಲ್ಲಿ ಹಿಂದುಳಿದವರಿಗೆ ಮುಸಲ್ಮಾನರಿಗೆ ಟಿಕೇಟ್ ಕೊಟ್ಟಿದ್ದೇವೆ. ಬಿಜೆಪಿಯವರು ಕೊಟ್ಟಿದ್ದಾರಾ? ಗುತ್ತೇದಾರ ಹಾಗೂ ಚಿಂಚನಸೂರು ಯಾರಿಗೆ ಟಿಕೇಟು ಕೊಡಿಸಿದ್ದಾರಾ? ಇವರಿಗೆ ಮಾನ ಮರ್ಯಾದೆ ಇದೆಯಾ? ಸಾಮಾಜಿಕ ನ್ಯಾಯದ ಪರಿಕಲ್ಪನೆಯ ವಿರುದ್ದವಿರುವ ಬಿಜೆಪಿಯಿಂದ ಹೊರಬರಲಿ. ಹಿಂದುಳಿದವರನ್ನ ಕೇವಲ ಮತಬ್ಯಾಂಕ್ ಎಂದು ಬಿಜೆಪಿಯವರು ತಿಳಿದಿದ್ದಾರಾ? ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಈಶ್ವರಪ್ಪ ಅಂತ ಒಬ್ಬ ಇದಾನೆ ಒಬ್ಬರೆ ಒಬ್ಬ ಕುರುಬರಿಗೆ ಟಿಕೇಟು ಕೊಡಿಸಕ್ಕಾಗಿಲ್ಲ‌.‌ನಾವು ಮೂವರಿಗೆ ಕೊಟ್ಟು ಸಮಾಜಿಕ ನ್ಯಾಯ ಎತ್ತಿಹಿಡಿದಿದ್ದೇವೆ ಎಂದು ಹೇಳಿದರು.

ಸಂವಿಧಾನ ಬದಲಾಯಿಸ ಹೊರಟಿದ್ದವರಿಗೆ ಮೀಸಲಾತಿ ರದ್ದು ಮಾಡಲು ಸುಪ್ರೀಂ ಕೋರ್ಟ್ಗೆ ಹೋದ ಬಿಜೆಪಿಯವರ ಪರ ಓಟು ಹಾಕಬೇಕಾ? ಅನಂತಕುಮಾರ ಹೆಗಡೆ, ಮೋಹನ್ ಭಾಗವತ್, ತೇಜಸ್ವಿ ಸೂರ್ಯನಂತವರು ಸಂವಿಧಾನ ವಿರೋಧಿಗಳು. ಸಂವಿಧಾನ ವಿರೋಧಿಸುವವರು ರಾಜಕಾರಣಿಗಳಾಗಲು ನಾಲಾಯಕ್ ಎಂದು ಟೀಕಿಸಿ, ಜಾಧವ್ ನಂತವನ ಡೆಪಾಸಿಟ್ ಜಪ್ತಿ ಆಗಬೇಕು ಹಾಗೆ ಸೋಲಿಸಿ ಎಂದು ಮನವಿ ಮಾಡಿದರು. ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಸನ್ಮಾನ್ಯ ಎಂ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಸಂವಿಧಾನ ರಕ್ಷಣೆ ಮಾಡುವ ಅಗತ್ಯವಿದೆ‌.ಹಾಗಾಗಿ ಇದು ಕೇವಲ ನನಗೆ ಸೀಮಿತವಾದ ಚುನಾವಣೆಯಲ್ಲ. ನೀವು ಮಾಡುವ ಒಂದೊಂದು ಮತ ದೇಶದ ಭವಿಷ್ಯವನ್ನು ರೂಪಿಸುತ್ತದೆ ಎಂದು ಹೇಳಿದರು. ನಾನು ಸಂಸದನಾಗಿ‌ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಕಲಬುರಗಿ ಯ ಹೆಸರು ದಿಲ್ಲಿಯಲ್ಲಿ ಹಸಿರಾಗಿಸಿದ್ದೇನೆ ಹೊರತು ನಿಮ್ಮ ಹೆಸರು ಕೆಡಿಸಿಲ್ಲ ಎಂದರು‌.

ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ, ಮಾಡನಾಡಿ ಪ್ರಧಾನಿ ಮೋದಿ ಎಲ್ಲ ಹಂತದಲ್ಲೂ ವಿಫಲರಾಗಿದ್ದಾರೆ. ಅವರನ್ನು ಸೋಲಿಸುವ ಮೂಲಕ ಅಭಿವೃದ್ದಿಪರವಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಮುಸಲ್ಮಾನರು ಬಿಜೆಪಿ ಕಚೇರಿಯಲ್ಲಿ ಕಸ ಬಳಿಯಲಿ ಆಮೇಲೆ ಅವರನ್ನು ಪಕ್ಷಕ್ಕೆ ಸೇರಿಸಲು ಯೋಚಿಸುವುದಾಗಿ ಎಂದು ಈಶ್ವರಪ್ಪ ಹೇಳುತ್ತಾರೆ. ಕಳೆದ ನಲವತ್ತು ವರ್ಷದಿಂದ ಕೇಶವ ಕೃಪದಲ್ಲಿ ಕಸ ಬಳಿಯುತ್ತಿರುವ ಈಶ್ವರಪ್ಪ ಒಬ್ಬನೇ ಒಬ್ಬ ಕುರುಬರಿಗೆ ಟಿಕೇಟ್ ಕೊಡಿಸಿಕ್ಕಾಗಿಲ್ಲ ಎಂದು ಕುಟುಕಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸಚಿವ ಎಂಸಿ ಮನಗೂಳಿ, ಶಾಸಕ ಎಂ ವೈ ಪಾಟೀಲ್, ಎಂಎಲ್ಸಿಗಳಾದ ಶರಣಪ್ಪ ಮಟ್ಟೂರು  ಹಾಗೂ ಚಂದು ಪಾಟೀಲ್, ರಾಜೇಂದ್ರ ಪಾಟೀಲ್, ಜಗದೇವ ಗುತ್ತೇದಾರ್ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here