ಭೋವಿ ನಿಗಮದ ಅವ್ಯವಹಾರ ತನಿಖೆಗೆ ಮಣಿವಣ್ಣನ್ ಗೆ ಮನವಿ

0
415

ಕಲಬುರಗಿ: ಕರ್ನಾಟಕ ಭೋವಿ ಅಭಿವ್ರದ್ಧಿ ನಿಗಮದ ಉದ್ಯಮಶೀಲತಾ ಯೋಜನೆಯಡಿಯಲ್ಲಿ ಸುಮಾರು 12 ಕೋಟಿ ರೂ. ಅಕ್ರಮವಾಗಿ ಸಾಲ ಸೌಲಭ್ಯ ಮಂಜೂರು ಮಾಡಲು ಸಹಕರಿಸಿದ ಉಪ ಪ್ರಧಾನ ವ್ಯವಸ್ಥಾಪಕ ಹರ್ಷ ಡಿ ಗಾಂವಕರ್ ಹಾಗೂ ಜಿಲ್ಲಾ ವ್ಯವಸ್ಥಾಪಕ ನಾಗಮೂರ್ತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರಿಗೆ ಕಲ್ಯಾಣ ಕರ್ನಾಟಕ ಜನಜಾಗ್ರತಿ ವೇದಿಕೆಯ ವತಿಯಿಂದ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಕರ್ನಾಟಕ ಭೋವಿ ಅಭಿವ್ರದ್ಧಿ ನಿಗಮದ 2019-20ನೇ ಸಾಲಿನಲ್ಲಿ ಉದ್ಯಮಶೀಲತಾ ಯೋಜನೆಯಡಿಯಲ್ಲಿ 118 ಫಲಾನುಭವಿಗಳಿಗೆ 11.80 ಕೋಟಿ ರೂ. ಅವ್ಯವಹಾರ ಮಾಡಲಾಗಿದೆ. ಕಲಬುರಗಿಯ ಫಲಾನುಭವಿಗಳ ಬ್ಯಾಂಕ್ ಖಾತೆಗಳನ್ನು ಯಾದಗಿರಿˌ ರಾಯಚೂರ ಹಾಗೆ ಛತ್ರಪತಿ ಶಿವಾಜಿ ಸಹಕಾರಿ ಪತ್ತಿನ ಸಹಕಾರಿ ಪತ್ತಿನ ಬ್ಯಾಂಕ್ ಮೂಲಕ ಹಣ ಡ್ರಾ ಮಾಡಲಾಗಿದೆ.

Contact Your\'s Advertisement; 9902492681

ಜಿಲ್ಲೆಯ ಬ್ಯಾಂಕ್ ಗಳಲ್ಲಿ 4 ಟಾರ್ಗೆಟ್ ಇದ್ದರೂ ಸಹ ಮನಸ್ಸಿಗೆ ಬಂದಂತೆ ಫಲಾನುಭವಿಗಳನ್ನು ಆಯ್ಕೆ ಮಾಡಿ ತಾವೇ ಹಣ ಡ್ರಾ ಮಾಡಿಕೊಂಡಿದ್ದಾರೆ.

ಫಲಾನುಭವಿಗಳ ಬ್ಯಾಂಕ್ ಪಾಸ್ ಬುಕ್ˌ ಚಕ್ ಬುಕ್ ಹಾಗೂ ಡ್ರಾ ಫಾರಂಗಳನ್ನು ಪಡೆದುಕೊಂಡು ಮಧ್ಯವರ್ತಿಗಳಿಂದ ಹಣ ಡ್ರಾ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಎಂ ಬಡಿಗೇರˌ ಜಿ. ಶಿವಶಂಕರ್ˌ ಚಂದ್ರಶೇಖರ್ ಚಿತ್ತಾಪುರˌ ಶ್ರೀ ಕ್ರಷ್ಣಾ ಬೇಲೂರˌ ಅರ್ಜುನ ಬೇಲೂರˌ ನಾಗೇಶ ಗೊಬ್ಬೂರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here