ಜೇವರ್ಗಿ: ಭೀಮಾ ನದಿಯ ನೆರೆ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಯನ್ನು ತಿಳಿಯಲು ಸಂಸದ ಡಾ.ಉಮೇಶ್ ಜಾಧವ್ ಜೊತೆಗೆ ಡಾ.ಅಜಯಸಿಂಗ್ ಸಾಥ್ ನೀಡಿದರು.
ಜೇವರ್ಗಿ ಹಾಗೂ ಅಫಜಲಪುರ ತಾಲೂಕಿನ ಕೆಲವು ಹಳ್ಳಿಗಳಿಗೆ ಪ್ರವಾಹ ಭೀತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಡಾ.ಅಜಯಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.
ಅಫಜಲಪುರ ತಾಲೂಕಿನ ಗಾಣಗಾಪೂರˌ ಘತ್ತರಗಾ ಸೇತುವೆಯನ್ನು ವೀಕ್ಷಿಸಿ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಂತರ ಮಾತನಾಡಿದ ಶಾಸಕರುˌ ಪ್ರವಾಹಕ್ಕೆ ಒಳಪಡುವ ಗ್ರಾಮಗಳ ಜನರಿಗೆ ಸುರಕ್ಷತೆ ದ್ರಷ್ಟಿಯಿಂದ ಬೇರೆ ಕಡೆ ವ್ಶವಸ್ಥೆ ಮಾಡಲಾಗುತ್ತದೆ. ಜನ ಜಾನುವಾರಗಳು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗುವಂತೆ ನೆರೆಪೀಡಿತ ಗ್ರಾಮಗಳಲ್ಲಿ ಡಂಗುರ ಭಾರಿಸುವುದರ ಮೂಲಕ ಎಚ್ಚರಿಸಲಾಗಿದೆ ಎಂದರು. ಶಾಸಕ ಎಮ್ ವೈ ಪಾಟೀಲ್ˌ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ˌ ಅರುಣಕುಮಾರ್ ಪಾಟೀಲ್ ಸೇರಿದಂತೆ ಇತರರು ಇದ್ದರು.