ಕಾಳಗಿ: ತಾಲ್ಲೂಕು ಮಳಗಾ (ಕೆ) ಗ್ರಾಮದ ಹಿರಿಯ ಕಾಂಗ್ರೆಸ್ ರಾಜಕಾರಣಿ ರವಿ ಸೌವುಕಾರ ಯರಗೋಳ ಸಂಜೆ ಸಮಾರಿಗೆ ಹೃದಯ ಆಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ಹಿರಿಯ ಕಿರಿಯ ನಾಯಕರು ಸೇರಿ ಪಕ್ಷಾತೀತವಾಗಿ ವಿದಾಯದ ಕಂಬನಿ ಮಿಡಿದರು.
ಚಿಚೋಳಿ ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಅಗಲಿದ ನಾಯಕನನ್ನು ನೆನೆಸಿಕೊಂಡಿದರು. ರವಿಕುಮಾರ್ ಯರಗೋಳ ರವರು ಮಲ್ಲಿಕಾರ್ಜುನ ಖರ್ಗೆಜಿ ಸಾಹೇಬ್ರ ಜತೆ ಆತ್ಮೀಯತೆಯಿಂದ ಬೆಳೆದವರು. ಕಾಳಗಿ ತಾಲ್ಲೂಕಿನಲ್ಲಿಯೇ ಆದರ್ಶ ರಾಜಕಾರಣಿ. ಪಕ್ಷದಲ್ಲಿ ನಿμÉ್ಠಯನ್ನು ಮೆರದ ಅಗ್ರಗಣ್ಯರಾಗಿದ್ದವರು. ಹಿರಿಯರು ಕಿರಿಯರಿರಲ್ಲಿ ತಮ್ಮ ರಾಜಕೀಯ ಸುಧೀರ್ಘ ಜೀವನದಲ್ಲಿ ಪ್ರೀತಿಯಿಂದ ಕಾಣಿದವರು. ಪಕ್ಷದ ಸದಸ್ಯರು, ಕಾರ್ಯಕರ್ತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಳತ್ವ ವಹಿಸುವ ಮುಸ್ಥದಿ ರಾಜಕಾರಣಿ, ಕುತಂತ್ರ ರಾಜಕೀಯ ತಿಳಿದ ಇವರು ತಮ್ಮ ನೇರ-ನುಡಿಯಿಂದ ಯುವಕರನ್ನು ಆಕರ್ಷಿಸಿದ ಕಾಂಗ್ರೆಸ್ ನಾಯಕನನ್ನು ಕಳೆದುಕೊಂಡ ಕಾಂಗ್ರೆಸ್ ಪಕ್ಷಕ್ಕೆ ನೋವುಂಟು ಮಾಡಿದೆ. ಪತ್ನಿ, ಒಬ್ಬ ಪುತ್ರ, ಇಬ್ಬರು ಹೆಣ್ಣು ಮಕ್ಕಳಿಗೆ ದುಃಖ ಸಹಿಸುವ ಶಕ್ತಿ ದೇವರು ಕರುಣಿಅಸಲಿ ಎಂದು ಪ್ರಾರ್ಥಿಸಿದರು.
ಎಐಸಿಸಿ ಕಲಬುರಗಿ ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ, ಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವಿಂದ್ರಪ್ಪ ಹೆಬ್ಬಾಳ, ಬಿಜೆಪಿ ನಾಯಕ ರಾಮಚಂದ್ರ ಜಾಧವ್, ಮಾಜಿ ಜಿಪಂ ಸದಸ್ಯ ರಾಜಶೇಖರ ತಿಮ್ಮನಾಕ, ಅಮೀರಲಿ ಮಳಗಾ (ಕೆ), ಭೀಮರಾವ ತೇಗಲತಿಪ್ಪಿ, ರಮೇಶ ಮರಗೋಳ, ಸುನೀಲ ದೋಡ್ಡಮನಿ ಗುಂಡಗುರ್ತಿ, ಅಪ್ಪರಾವ ಈಶ್ವರಗೊಂಡ, ಡಾ.ಶಿವಾನಂದ ಮಜ್ಜಿಗೆ, ಕಾಂಗ್ರೆಸ ವಕ್ತಾರ ರಾಘವೇಂದ್ರ ಗುತ್ತೇದಾರ, ವಿಶ್ವನಾಥ ವನಮಾಲಿ, ಸಿದ್ಧಲಿಂಗ ರಾಜಾಪೂರ, ಸಂತೋಷ ಪಾಟೀಲ ಮಂಗಲಗಿ, ಪ್ರಶಾಂತ ರಾಜಾಪೂರ, ಬಂಡು ಗದ್ದಿ, ಮಡಿವಾಳಪ್ಪ ಗುಂಡಗುರ್ತಿ, ನೀಲಕಂಠ ಪಾಟೀಲ ಕೋಡದೂರ, ಗಣಪತಿ ಹಾಳಕಾಯಿ, ಗಂಗಾಧರ ಮೈಲಾರ, ಕಾಳಗಿ-ಕೋಡ್ಲಿ ಯುತ ಕಾಂಗ್ರೆಸ್ ಅಧ್ಯಕ್ಷ ಶರಣು ಮಜ್ಜಿಗಿ ಸೇರಿ ಅನೇರಿದ್ದರು.