ಸುರಪುರ: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಸಾಮಾಜಿಕ ನ್ಯಾಯಕ್ಕಾಗಿ ನ್ಯಾ. ಎ.ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ ಎಂದು ಮುಖಂಡ ಭೀಮಾಶಂಕರ ಬಿಲ್ಲವ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ,ಆದರೆ ಇದುವರೆಗೆ ಎಲ್ಲಾ ಸರಕಾರಗಳು ನಮ್ಮ ಬೇಡಿಕೆಯನ್ನು ಈಡೇರಿಸುತ್ತಿಲ್ಲ,ಆದ್ದರಿಂದ ಇದೇ ಭಾನುವಾರ 11ನೇ ತಾರೀಖು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡು ಬೇಡಿಕೆ ಈಡೇರಿಸುವವರೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಈ ಹೋರಾಟಕ್ಕೆ ನಮ್ಮ ತಾಲೂಕಿನಿಂದ ಸಾವಿರಾರು ಜನ ಈ ಹೋರಾಟದಲ್ಲಿ ಭಾಗವಹಿಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ನಾಗರಾಜ ಓಕಳಿ,ರಮೇಶ ಪೂಜಾರಿ,ಅಯ್ಯಪ್ಪ ದೇವಿಕೇರಿ,ರಾಮಪ್ಪ ಕೋರಿ,ಭಿಮಣ್ಣ ಅಡ್ಡೊಡಗಿ,ಅಯ್ಯಪ್ಪ ದೇವಾಪುರ,ಹಣಮಂತ ಬೋನಾಳ ಉಪಸ್ಥಿತರಿದ್ದರು.