ನಗರಸಭೆಯ ಪೌರಾಯುಕ್ತರ ವರ್ಗಾವಣೆಗೆ ಮಲ್ಲಿಕಾರ್ಜುನ ವಾಲಿ ಆಕ್ರೋಶ

0
111

ಶಹಾಬಾದ: ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ ಅವರನ್ನು ವರ್ಗಾವಣೆಗೊಳಿಸುವುದಕ್ಕೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಡಳಿತ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಸಂಪೂರ್ಣ ಹದಗೆಟ್ಟಿದೆ. ನಗರಸಭೆಯ ಆಡಳಿತದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ನಿರಂತರ ಮೂಗು ತೂರಿಸುತ್ತಿರುವ ಪ್ರವೃತ್ತಿಯೇ ಕಾರಣ. ಈಗಾಗಲೇ ಕಾನೂನು ಬಾಹಿರ ಕೆಲಸಕ್ಕೆ ಕಡಿವಾಣ ಹಾಕಿದಲ್ಲದೇ, ಮುಖಂಡರ ಕಾನೂನು ಬಾಹಿರ ಕೆಲಸ ಮಾಡಲು ಒಪ್ಪದಿರುವುದೇ ಅವರಿಗೆ ವರ್ಗಾವಣೆಯ ಬಿಸಿ ಮುಟ್ಟಿದೆ. ನಿμÁ್ಠವಂತ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಖಂಡನೀಯ. ನಗರಸಭೆಯಲ್ಲಿ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಿದ ಅಧಿಕಾರಿಯನ್ನು ಶಾಸಕ ಬಸವರಾಜ ಮತ್ತಿಮಡು ವರ್ಗಾವಣೆಗೊಳಿಸಿ, ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

Contact Your\'s Advertisement; 9902492681

ಈಗಾಗಲೇ ನಗರಸಭೆಯಲ್ಲಿ ಜೆಇ,ಎಇ ಯಾಗಿ ಕೆಲಸ ನಿರ್ವಹಿಸಿದ ಬಸವರಾಜ ಅವರನ್ನು ಪೌರಾಯುಕ್ತರನ್ನಾಗಿ ಮಾಡಲು ಮುಂದಾಗಿದ್ದಾರೆ.ಬಸವರಾಜ ಅವರ ಕಾರ್ಯ ವೈಖರಿ ಬಗ್ಗೆ ಇಡೀ ಶಹಾಬಾದ ನಗರದ ನಿವಾಸಿಗಳು ಶಾಸಕರ ಮುಂದೆ ಈ ಹಿಂದೆ ಸಾಕಷ್ಟು ದೂರು ಸಲ್ಲಿಸಿದ್ದಾರೆ. ಆದರೂ ಅವರನ್ನೇ ಪೌರಾಯುಕ್ತರನ್ನಾಗಿ ಮಾಡುವ ಹಟ ಯಾವ ಪುರುಷಾರ್ಥಕ್ಕಾಗಿ ಎಂಬುದೇ ಗೊತ್ತಾಗುತ್ತಿಲ್ಲ. ಯಾರ ಮಾತಿಗೆ ಕಿವಿಗೊಟ್ಟು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆಗೊಳಿಸುತ್ತಿರುವ ರೀತಿ ಹಾಗೂ ಇಡೀ ಆಡಳಿತ ವ್ಯವಸ್ಥೆಯನ್ನು ಭ್ರμÁ್ಟಚಾರ ಹಾಗೂ ಅಪ್ರಾಮಾಣಿಕತೆ ಹಾಗೂ ಒಲೈಸುವಿಕೆಯ ಮೂಲಕ ನಿಷ್ಕ್ರಿಯಗೊಳಿಸುತ್ತಿರುವ ಹುನ್ನಾರ ಆಡಳಿತ ವಿಫಲತೆಗೆ ಹಿಡಿದ ಕೈಗನ್ನಡಿಯಾಗಿದೆ.

ಅಶೋಕ ಬಿಲಗುಂದಿಯವರು ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.ಏಕಾಏಕಿ ಎತ್ತಂಗಡಿ ಮಾಡಿರುವುದು ಉತ್ತಮ ಸೇವೆ ನೀಡುತ್ತಿರುವ ಅಧಿಕಾರಿಗಳ ಧಮನಿಸುವ ನೀತಿಯಾಗಿದೆ. ಇದರಿಂದಾಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಹನೆಯ ಮಿತಿ ಮೀರಲು ಬಹಳ ಸಮಯದ ಅಗತ್ಯವಿಲ್ಲವೆಂಬುದನ್ನು ತೋರಿಸುತ್ತದೆ. ಸಾರ್ವಜನಿಕರ ಸಹನೆಯನ್ನು ಪರೀಕ್ಷಿಸದೆ ಮೊದಲಿದ್ದ ಜವಬ್ದಾರಿಯಲ್ಲಿಯೇ ಮುಂದುವರೆಸುವ ಮೂಲಕ ಜನತೆಯ ಭಾವನೆ ಹಾಗೂ ಪ್ರಾಮಾಣಿಕತೆ ಮತ್ತು ಧಕ್ಷತೆಯನ್ನು ಗೌರವಿಸುವಂತೆ ಶಾಸಕ ಬಸವರಾಜ ಮತ್ತಿಮಡು ಅವರನ್ನು ಒತ್ತಾಯಿಸುತ್ತೇನೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here