`ಸಹಸ್ರಮಾನದ ಶರಣ’ ವಚನಾಂತರಂಗದ ಅವಲೋಕನ’ ವಿಶೇಷ ಕಾರ್ಯಕ್ರಮ

0
60

ಕಲಬುರಗಿ: ಬಸವಾದಿ ಶರಣರ ವಚನಗಳು ಬದುಕಿನ ಮೌಲ್ಯವನ್ನು ತಿಳಿಸಿಕೊಡುತ್ತದೆ. ವಚನದಲ್ಲಿರುವುದನ್ನು ನಾವು ಅಳವಡಿಸಿಕೊಳ್ಳಲು ರೂಢಿಸಿಕೊಂಡು, ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಆದರ್ಶ ಜೀವನ ನಡೆಸಬೇಕು ಎಂದು  ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ ಹೇಳಿದರು.

ಸಮೃದ್ಧಿ ತೇಗಲತಿಪ್ಪಿ ಸ್ಮರಣಾರ್ಥ ಜಿಲ್ಲಾ ಕಸಾಪ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಹಾಗೂ ಸಮೃದ್ಧಿ ಫೌಂಡೇಶನ್ ಸಹಯೋಗದೊಂದಿಗೆ ನಗರದ ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ `ಸಹಸ್ರಮಾನದ ಶರಣ’ ವಚನಾಂತರಂಗದ ಅವಲೋಕನ’ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆದರ್ಶ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಸವಾದಿ ಶರಣರ ವಚನ ಸಂದೇಶಗಳ ಪ್ರಸಾರ ಮತ್ತು ಅನುಷ್ಠಾನವಾಗಬೇಕಿದೆ ಎಂದ ಅವರು, ಕ್ರಿಯಾಶೀಲ ವ್ಯಕ್ತಿತ್ವದ ವಿಜಯಕುಮಾರ ತೇಗಲತಿಪ್ಪಿ ಅವರು ಕಸಾಪ ಜಿಲ್ಲಾಧ್ಯಕ್ಷರಾದ ನಂತರ ಜಿಲ್ಲೆಯಲ್ಲಿ ಪರಿಷತ್ತಿಗೆ ಹೊಸ ಸ್ಪರ್ಶ ಕೊಟ್ಟಿದ್ದಾರೆ ಎಂದು ಮನದುಂಬಿ ಮಾತನಾಡಿದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸ್ವಾರ್ಥ, ದ್ವೇಷ, ಅಸೂಯೆಗಳಿಂದ ತುಂಬಿ ತುಳುಕುತ್ತಿರುವ ಇಂದಿನ ಸಮಾಜದಲ್ಲಿ ಸಾಮಾಜಿಕ ಕಳಕಳಿ ಎಂಬ ಪದ ಕಳೆದು ಹೋಗುತ್ತಲಿದೆ. ಇಂಥ ಪರಿಸ್ಥಿತಿಯಲ್ಲಿ ಈ ತರಹದ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಎಲ್ಲರಲ್ಲಿ ಪ್ರೀತಿ, ವಿಶ್ವಾಸ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದ ಅವರು, ಶರಣರ ವಚನಗಳು ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶಿಯಾಗಿವೆ. ಅಂಥ ವಚನಗಳನ್ನು ನಮ್ಮ ಹೊಸ ಪೀಳಿಗೆಗೆ ಮುಟ್ಟಿಸುವ ಕಾರ್ಯ ಮಾಡಬೇಕಿದೆ ಎಂದರು.

ಭಾರತೀಯ ಬಸವ ಬಳಗದ ಅಮೃತರಾವ ಪಾಟೀಲ ಗುಡ್ಡೇವಾಡಿ, ವಚನ ಸಾಹಿತ್ಯವು ಮೆದುಳಿನ ಸಾಹಿತ್ಯಕ್ಕಿಂತ ಹೃದಯದ ಸಾಹಿತ್ಯವಾಗಿದೆ. ಪ್ರತಿಯೊಬ್ಬರು ವಚನಗಳ ತಿರುಳನ್ನು ಅರ್ಥ ಮಾಡಿಕೊಂಡು ಅನುಸರಿಸುವ ಪ್ರಯತ್ನ ಮಾಡೋಣ ಎಂದರು.

ಗುರೂಜಿ ಡಿಗ್ರಿ ಕಾಲೇಜಿನ ಸಂಸ್ಥಾಪಕ ಕಲ್ಯಾಣಕುಮಾರ ಶೀಲವಂತ. ಜಿಲ್ಲಾ ಕಸಾಪ ಕಾಂiÀರ್iದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ರವೀಂದ್ರಕುಮಾರ ಭಂಟನಳ್ಳಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಮೃದ್ಧಿ ಫೌಂಡೇಶನ್ ಸಂಚಾಲಕ ಶ್ರೀಕಾಂತ ಪಾಟೀಲ ತಿಳಗೂಳ, ವಚನ ಸಾಹಿತ್ಯ ಅಕಾಡೆಮಿ ಗೌರವಾಧ್ಯಕ್ಷ ಎಸ್.ಎಂ.ಪಟ್ಟಣಕರ್ ವೇದಿಕೆ ಮೇಲಿದ್ದರು.

ಬಾಲ್ಯದಿಂದಲೇ ವಿಶಿಷ್ಟ ಪ್ರತಿಭೆಯಿಂದ ಗಮನ ಸೆಳೆದಿರುವ ಸುಕನ್ಯಾ ಚಿದ್ರಿ ಹುಳಗೇರಾ, ಸೌಜನ್ಯ ರಟಕಲ್, ಈಶ್ವರಿ ನಿಪ್ಪಾಣಿ, ಶಬರಿ ಉಡಬಾಳಕರ್, ಭಕ್ತಿ ಬಾಬುಗೌಡ ಪಾಟೀಲ, ಹಿಮಾಂಶು ಬಜಾಜ್, ಸಂಗಮೇಶ ಶ್ರೀಮಂತ ಆವಂಟಿ ಅವರನ್ನು `ಕಲೆ ಸಮೃದ್ಧಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವಿವಿಧ ಕ್ಷೇತ್ರದ ಪ್ರಮುಖರಾದ ಚನಮಲ್ಲಯ್ಯ ಹಿರೇಮಠ ಹುಲ್ಲೂರ, ಮಲ್ಲಮ್ಮ ಎನ್ ಏವೂರ, ಡಾ. ವಿಶಾಲಾಕ್ಷಿ ಕರೆಡ್ಡಿ, ದೌಲತರಾಯ ಮಾಲಿಪಾಟೀಲ, ಮಲ್ಲಿಕಾರ್ಜುನ ಘಾಲಿ ಭಂಕೂರ ಅವರನ್ನು `ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ನೀಡಿ ಸತ್ಕರಿಸಲಾಯಿತು.

ಮಕ್ಕಳಿಗಾಗಿ ಆಯೋಜಿಸಿದ್ದ ವಚನಾಧಾರಿತ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ, ಪ್ರಮಾಣ ಪತ್ರಗಳನ್ನು ನಿಡಿ ಪ್ರೋತ್ಸಾಹಿಸಲಾಯಿತು.

ಪ್ರಮುಖರಾದ ಸಂಶೋಧಕ ಮುಡುಬಿ ಗುಂಡೇರಾವ, ಡಾ. ಕೆ.ಗಿರಿಮಲ್ಲ, ಪ್ರಭುಲಿಂಗ ಮೂಲಗೆ, ಸಂತೋಷ ಕುಡಳ್ಳಿ, ಎಸ್.ಕೆ.ಬಿರಾದಾರ,  ಸೋಮಶೇಖರ ನಂದಿಧ್ವಜ, ಪ್ರಕಾಶ ಗೋಣಗಿ, ಹೆಚ್.ಎಸ್.ಬರಗಾಲಿ, ಜಗದೀಶ ಮರಪಳ್ಳಿ, ಬಿ.ಎಂ.ಪಾಟೀಲ ಕಲ್ಲೂರ, ಎಂ.ಎಸ್.ಪಾಟೀಲ ನರಿಬೋಳ, ಭಾಗ್ಯ ಶಿಲ್ಪಾ ಆಲೇಗಾಂವ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಲತಾ ಬಿಲಗುಂದಿ, ಮಂಜುಳಾ ಸುತಾರ, ಮಂಜುನಾಥ ಕಂಬಾಳಿಮಠ, ಗಣೇಶ ಚಿನ್ನಾಕಾರ, ಸಿದ್ಧಾರಾಮ ಯಳವಂತಗಿ, ಸದಾಶಿವ ಮೇತ್ರೆ, ಸಿ.ಎಸ್.ಆನಂದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here