ಕಲಬುರಗಿ: ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನದ ಅಂಶಗಳನ್ನು ಪ್ರತಿದಿನ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ದಿನಚರಿಯ ಬರೆಯುವ ಹವ್ಯಾಸ ವೃದ್ಧಿಸಿಕೊಳ್ಳುವುದರ ಮೂಲಕ ತಮ್ಮ ಜೀವನದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ಕಾರ್ಪೊರೇಟ್ ಟ್ರೇನರ್ ಪ್ರಸಾದರಾವ ತಿಳಿಸಿದರು.
ನಗರದ ಶತಮಾನೋತ್ಸವ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಇಂಡಕ್ಷನ್ (ದೀಕ್ಷಾರಂಭ-೨೦೧೯) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿಯಬೇಕು. ವೈಯಕ್ತಿಕ ಜೀವನದಲ್ಲಿ ತಾಯಿಯಾಗಿ, ತಂದೆಯಾಗಿ, ಅಣ್ಣನಾಗಿ, ಅಕ್ಕನಾಗಿ, ವೃತ್ತಿ ಜೀವನದಲ್ಲಿ ಶಿಕ್ಷಕರಾಗಿ, ತರಬೇತುದಾರರಾಗಿ ಮುಂತಾದ ಪಾತ್ರಗಳನ್ನು ಸರಿಯಾಗಿ ನಿಭಾಯಿಸಿದಾಗ ಮಾತ್ರ ಒಬ್ಬ ವ್ಯಕ್ತಿ ಪರಿಪೂರ್ಣ ವ್ಯಕ್ತಿಯಾಗುತ್ತಾನೆ ಎಂದು ಹೇಳಿದರು.
ಭಗವದ್ಗೀತೆ, ಖುರಾನ್, ಬೈಬಲ್ ಯಾವದೇ ಗ್ರಂಥ ಆಗಲಿ, ಹಿಂದೂ, ಮುಸ್ಲಿಂ, ಬೌಧ್ಧ, ಕ್ರೈಸ್ತ ಯಾವದೇ ಧರ್ಮದವರಾಗಲಿ ಎಲ್ಲರೂ ಎಲ್ಲ ಮಾಹಾನ್ ಗ್ರಂಥಗಳನ್ನು ಓದಬೇಕು. ಎಲ್ಲ ಧರ್ಮದ ಸಾರ ಒಂದೇ ಆಗಿರುತ್ತದೆ. ಮಾನವ ಪರಿಪೂರ್ಣತೆಯನ್ನು ಸಾಧಿಸುವ ಉದ್ದೇಶ ಹೊಂದಿರುತ್ತದೆ ಎಂದು ವಿವರಿಸಿದರು.
ತಾಯಿ ಜನ್ಮ ಕೋಡುತ್ತಾಳೆ, ಶಿಕ್ಷಕಿ ಭವಿಷ್ಯ ರೂಪಿಸುತ್ತಾಳೆ. ಹೀಗೆ ಸ್ತ್ರೀ ದೇವತಾ ಸ್ವರೂಪಿಯಾಗಿದ್ದಾಳೆ. ನಮ್ಮನೆಲ್ಲ ಹೆತ್ತ ತಾಯಿ, ಹೊತ್ತ ಭೂಮಿ, ನಮ್ಮ ದೇಶದಲ್ಲಿನ ಪ್ರತಿ ನದಿಯನ್ನು ಹೆಣ್ಣಿನ ಹೆಸರಿನಿಂದ ಗುರುತಿಸಲಾಗಿದೆ. ನಮ್ಮ ದೇಶದ ಮಹಿಳೆಯರು ಎಷ್ಟು ಗೌರವ ಗಂಭೀರದಿಂದ ಬದಕುತ್ತಿದ್ದಾರೆ ಎಂಬುವುದಕ್ಕೆ ವಿದೇಶಾಂಗ ಮಾಜಿ ಸಚೀವೆ ಸುಷ್ಮಾ ಸ್ವರಾಜ್ ಅವರ ವ್ಯಕ್ತಿತ್ವದಿಂದ ಅರಿತುಕೊಳ್ಳಬಹಾಗಿದೆ ಎಂದರು.
ವಿವಿ ಸಮ ಕುಲಪತಿ ಡಾ. ವಿ.ಡಿ.ಮೈತ್ರಿ, ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡವೆ ಇತರರು ಉಪಸ್ಥಿತರಿದ್ದರು.
ಪ್ರೊ. ಚಂದ್ರಶೇಖರ ನಿರೂಪಿಸಿದರು. ಪ್ರೊ. ಶರಣಮ್ಮ ಪಾಟೀಲ ಸ್ವಾಗತಿಸಿದರು. ಪ್ರೋ. ಪ್ರದೀಪ ಕುಮಾರ ಅತಿಥಿಯನ್ನು ಪರಿಚಯಿಸಿದರು.