- ದಯಾನಂದ ಹೊಸಮನಿ ಕಾಳಗಿ
ಕಲಬುರಗಿ: ಜಿಲ್ಲೆ ಕಾಳಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ತಾಲೂಕ ಪಂಚಾಯತ ವತಿಯಿಂದ, ಶಾಸಕರಾದ ಡಾಕ್ಟರ್ ಅವಿನಾಶ ಜಾದವ ಅವರ ಅಧ್ಯಕ್ಷತೆಯಲ್ಲಿ ತ್ರೈ ಮಾಸಿಕ ಕೆ.ಡಿ.ಪಿ ಸಭೆ ಯಶಸ್ವಿಯಾಗಿ ಜರುಗಿತು.
ಈ ಸಭೆಯನ್ನು ತಾಲೂಕ ಪಂಚಾಯತ ವತಿಯಿಂದ ಶಾಸಕರಿಗೆ ಹೂಗುಚ್ಚ ಕೊಡುವುದರ ಮೂಲಕ ಚಾಲನೆ ನೀಡಲಾಯಿತು. ಸಭೆಯನ್ನು ಉದ್ದೇಶಿಸಿ ಶಾಸಕರದ ಅವಿನಾಶ ಜಾಧವ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ತಹಸಿಲ್ದಾರರಾದ ನಾಗನಾಥ್ ತರಗೆ, ತಾಲೂಕ ಪಂಚಾಯತ ಅಭಿವೃದ್ಧಿ ಅಧಿಕಾರಿ ರೇವಣಸಿದ್ದಪ್ಪ ಗೌಡರ್, ಸಿಪಿಐ ವಿನಾಯಕ್.ಎ ಡಿ ಗಂಗಾಧರ್ ಹಾಗೂ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.