ಸೇಡಂ ಪಟ್ಟಣದಲ್ಲಿ ಶರಣ- ಮಹಾಪುರುಷರ ಪುತ್ಥಳಿ ಪ್ರತಿಷ್ಠಾಪನೆ

0
22

ಸೇಡಂ: ಕಲೆ, ಸಾಂಸ್ಕøತಿಕ ನೆಲೆಬೀಡು, ಶರಣರ ನಾಡಾಗಿರುವ ಸೇಡಂ ಪಟ್ಟಣದಲ್ಲಿ ಬಸವಾದಿ ಶರಣರ ಹಾಗೂ ರಾಷ್ಟ್ರ ಮಹಾಪುರುಷರ ಪುತ್ಥಳಿ ಗಳನ್ನು ಸ್ಥಾಪಿಸಲಾಗುವುದು ಎಂದು ಕೆಕೆಆರ್ ಟಿಸಿ – ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು.

ಪಟ್ಟಣದಲ್ಲಿ ಆಶ್ವಾರೂಢ ಬಸವೇಶ್ವರ ಪುತ್ಥಳಿ ಪ್ರತಿμÁ್ಠಪನೆ ಭೂಮಿಪೂಜೆ ಸ್ವಾಮೀಜಿ ಹಾಗೂ ಗಣ್ಯರೊಂದಿಗೆ ನೆರವೇರಿಸಿ ಮಾತನಾಡಿದ ಅವರು, ಬಸವೇಶ್ವರ ನಂತರ ನಿಜಶರಣ ಅಂಬಿಗರ ಚೌಡಯ್ಯ, ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ, ಮಡಿವಾಳ ಮಾಚಿದೇವ ಸೇರಿದಂತೆ ಇತರ ಶರಣರ ಹಾಗೂ ರಾಷ್ಟ್ರ ನಾಯಕರು ಸೇಡಂಗೆ ಬರಲಿದ್ದಾರೆ. ಈಗ ಶಂಕುಸ್ಥಾಪನೆ ನೆರವೇರಿಸಲಾಗಿರುವ ಬಸವೇಶ್ವರ ಪುತ್ಥಳಿ ಬರುವ ಮೇ ತಿಂಗಳ ಮುಂಚೆಯೇ ಅನಾವರಣಗೊಳ್ಳಲಿದೆ ಎಂದರು.

Contact Your\'s Advertisement; 9902492681

ಬಿಜನಳ್ಳಿಯಲ್ಲಿ ಹರಳಯ್ಯ ಸಮಾಜದವರೊಂದಿಗೆ ಚರ್ಚಿಸಿ ಐದು ಎಕರೆ ಜಾಗದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ಇವತ್ತಿನ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮಾಜಿ ಉಪಸಭಾಪತಿ ಚಂದ್ರಶೇಖರ್ ರೆಡ್ಡಿ ಮದನಾ, ಮಾಜಿ ಸಂಸದ ಡಾ. ಬಸವರಾಜ ಪಾಟೀಲ್ ಸೇಡಂ ಮಾಜಿ ಶಾಸಕ ನಾಗರೆಡ್ಡಿ ಪಾಟೀಲ್, ಮಾಜಿ ಸಚಿವ ಡಾ. ಶರಣ ಪ್ರಕಾಶ ಅವರು ಬರಬೇಕಿತ್ತು. ಆದರೆ ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಬರಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಬಸವೇಶ್ವರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಹಾಜರಿರುವುದಾಗಿ ತಿಳಿಸಿದ್ದಾರೆ ಎಂದು ಶಾಸಕರು ಸಭಿಕರಿಗೆ ತಿಳಿಸಿದರು.

ಇವತ್ತು ಜೀವನದ ಸಂತಸದ ದಿನ. ಪರಿವರ್ತನೆಗೆ ಬುನಾದಿ ಹಾಕಿದ್ದೇ ಅಣ್ಣ ಬಸವಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದು ಖುಷಿ ತಂದಿದೆ. ಇದಿರುವುದು ತಸ ನವರು. ತಾವು ಧರ್ಮದಲ್ಲಿ ಬೇಧ ಕಂಡಿಲ್ಲ. ತಾವು ಸನ್ಯಾಸಿಯಾಗಲು ಹೊರಟ್ಟಿದ್ದೇ, ಆದರೆ ಸೇಡಂ ಜನರ ಸೇವೆ ಮಾಡುವ ಅವಕಾಶ ಹಿನ್ನೆಲೆಯಲ್ಲಿ ಕೂಡಲಿಲ್ಲ ಏನಿಸುತ್ತದೆ. ತಾವಂತು ಶರಣರ ತತ್ವಗಳ ಹಾದಿಯಲ್ಲಿ ಕಟಿ ಬದ್ದನಾಗಿ ನಡೆಯುತ್ತೇನೆ. ನಮ್ಮ ಮನೆಯಲ್ಲಿ ತಾತನವರು ದಲಿತರನ್ನು ನೀರು ತರಲು ಇಟ್ಟು ಕೊಂಡಿದ್ದರು. ಅಡುಗೆ ಮನೆ ತುಂಬೆಲ್ಲ ಓಡಾಡುತ್ತಿದ್ದರು. ಹೀಗಾಗಿ ನಡೆ- ನುಡಿಯಲ್ಲಿ ಏಕತೆವಿದೆ ಎಂದು ತೇಲ್ಕೂರ ಭಾವುಕರಾಗಿ ನುಡಿದರು.

ಜೀವನದ ಉಸಿರಿರುವರೆಗೂ ಸಮಾಜ ಸೇವೆ ಮುಂದುವರೆಸುತ್ತೇನೆ. ತಾವು ಲಿಂಗಾಯತರ ನಾಯಕ ಮಾತ್ರ ಅಲ್ಲ. ಎಲ್ಲರ ಧರ್ಮಗಳ ನಾಯಕ ಎನ್ನಿ .ಸರ್ವ ಸಮಾಜ ಜತೆಗೆ ತೆಗೆದು ಕೊಂಡು ಹೋಗಲಾಗುವುದು. ಹುಟ್ಟಿದ ದಿನವೇ ತನಗೆ ರಾಜಕುಮಾರ ಎಂಬುದಾಗಿ ಹೆಸರು ಇಟ್ಟಿದ್ದಾರೆ. ಹೀಗಾಗಿ ತಾವು ಸದಾ ರಾಜಕುಮಾರ. ತಾವು ರಾಜಕೀಯಕ್ಕೆ ಬರುವ ಮುಂಚೆಯೇ 25 ದೇಶ ಸುತ್ತಿದ್ದೇನೆ ಎಂದು ಹೇಳಿದರು.

ಸೇಡಂ ಆಧುನಿಕ ಬಸವ ಕಲ್ಯಾಣ ಮಾಡಲಾಗುವುದು. ಎಲ್ಲ ಶರಣರನ್ನು ಕರೆ ತರಲಾಗುವುದು. ಮೇ ಒಳಗೆ ಮೂರ್ತಿ ಅನಾವರಣಗೊಳ್ಳಲಿದೆ ಎಂದು ಪ್ರಕಟಿಸಿದರು. ಜನ ಭರವಸೆಯನ್ನು ಇಟ್ಟು ಆಯ್ಕೆಗೊಳಿಸಿದ್ದಕ್ಕೆ ಕೆಲಸ ಸಂಪೂರ್ಣ ತೃಪ್ತಿ ಇದೆ. ಮುಳುಗುತ್ತಿದ್ದ ಡಿಸಿಸಿ ಬ್ಯಾಂಕ್ ಮೇಲೆತ್ತಲಾಗಿದೆ. ಜನರ ಋಣ ಮುಟ್ಟಿಸಲಾಗಿದೆ ಎಂಬ ತೃಪ್ತಿ ಇದೆ ಎಂದರು.

ಕೊತ್ತಲ ಬಸವೇಶ್ವರ ದೇವಸ್ಥಾನದ ಸದಾಶಿವ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿ, ಬಸವೇಶ್ವರ ಮೂರ್ತಿ ಸ್ಥಾಪನೆ ಸರಳವಾದುದ್ದಲ್ಲ. ತಾಲೂಕಿನ ಎಲ್ಲ ದೇವಸ್ಥಾನಗಳಿಗೆ ಅನುದಾನ ನೀಡಲಾಗಿದೆ. ಪಾದುಕೆಗಳುಳ್ಳ ಬಿಜನಳ್ಳಿ, ಉರಿಲಿಂಗ ಪೆದ್ದಿ ಶರಣರ ನಾಡಾಗಿರುವ ಅದರಲ್ಲೂ ಕಲ್ಯಾಣದ ಕ್ರಾಂತಿ ನಡೆಯುವಾಗ ಸೇಡಂ ತಾಲೂಕಿನ ಕಾಗಿಣಾ ನದಿಯಲ್ಲಿ ತಂಗಿ ಪೂಜಾ ವಿಧಿಗಳನ್ನು ಪೂರೈಸುತ್ತಿದ್ದರು. ಇಂತಹ ನೆಲದಲ್ಲಿ ಬಸವ ಪುತ್ಥಳಿ ಇಲ್ಲ ಎಂಬ ಕೊರಗಿನ ಭಾವನೆಯನ್ನು ಶಾಸಕರು ನೆರವೇರಿಸಿದ್ದಾರೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ಸ್ವಾಮಿಗಳು, ರೈತರಿಗೆ, ಬಡವರು, ಬಗ್ಗರು ಸಹಾಯ ಕಲ್ಪಿಸುವ ಶಾಸಕರ ಕಾರ್ಯ ಬಂಗಾರದ ಅಕ್ಷರದಲ್ಲಿ ಬರೆದಿಡುವಂತಾಗಿದೆ ಶ್ಲಾಘಿಸಿದರು.

ಎರಡು ಕೋ ರೂ ವೆಚ್ಚದಲ್ಲಿ ಬಸವೇಶ್ವರ ವೃತ್ತ ಹಾಗೂ ಬಾಣಂತಿ ಕಂಬ ಅಭಿವೃದ್ಧಿ ಪಡಿಸಲಾಗುತ್ತಿರುವುದಕ್ಕೆ ನಾವೆಲ್ಲರೂ ಕೈ ಜೋಡಿಸೊಣ ಎಂದು ಸ್ವಾಮಿಜಿ ಹೇಳಿದರು.

ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮಿಗಳು ಸಾನ್ನಿಧ್ಯ ವಹಿಸಿ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಸದಾಶಿವ ಸ್ವಾಮಿಗಳು ಹೇಳಿರುವಂತೆ ಈ ದಿನ ಸುರ್ವರ್ಣ ಅಕ್ಷರದಲ್ಲಿ ಬರೆದಿಡುವಂತಾಗಿದೆ ಧ್ವನಿ ಗೂಡಿಸಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮಾತನಾಡಿ, ನುಡಿದಂತೆ ನಡೆದವರು ಬಸವಣ್ಣನವರು ಎಂದು ಹೇಳಿದರು.

ಮಳಖೇಡದ ವೀರೂಪಾಕ್ಷಯ್ಯ ದೇವರು ಸೇರಿದಂತೆ ಇತರ ಹರ ಗುರು ಚರಮೂರ್ತಿಗಳವರು ಸಹ ಮಾತನಾಡಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಮಾತನಾಡಿ, ಬಸವಣ್ಣನವರ ವಿಚಾರ ತತ್ವ ಗಳು ಎಂದಿಗೂ ಪ್ರಚಲಿತ. ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ರೈತರ ಹಾಗೂ ಸಮಾಜದ ಏಳ್ಗೆಗೆ ಸದಾ ಶ್ರಮಿಸುತ್ತಿರುವುದು ಅಭಿನಂದನಾರ್ಹ. ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಲು ಅವರ ಮನೆಗೆ ಹೋಗಿ ಸಾಲ ನೀಡಿದ್ದಲ್ಲದೇ ದಶಕಗಳ ಕಾಲ ಬೇಡಿಕೆಯಾಗಿ ಉಳಿದಿದ್ದ ಕಾಗಿಣಾ ಏತ ನೀರಾವರಿ ಸಾಕಾರಗೊಳ್ಳುತ್ತಿರುವುದು ಸೇರಿದಂತೆ ಹತ್ತಾರು ಕಾರ್ಯಗಳು ನಡೆಯುತ್ತಿರುವುದರಿಂದ ಜತೆಗೆ ಇನ್ನಷ್ಟು ಅಭಿವೃದ್ಧಿ ಯಾಗಲು ತೇಲ್ಕೂರ ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡಬೇಕೆಂದು ಜನರಲ್ಲಿ ಕೋರಿದರು.

ಶಿವಶಂಕರ ಶಿವಾಚಾರ್ಯರು, ಕೊಟ್ಟುರೇಶ್ವರ ಶಿವಾಚಾರ್ಯರು, ಅಭಿನವ ಗವಿಸಿದ್ದಲಿಂಗ ಶಿವಾಚಾರ್ಯ ರು, ಪಂಪಾಪತಿ ಶಿವಾಚಾರ್ಯ ರು, ಸಿದ್ದರಾಮ ಸ್ವಾಮಿಗಳು, ದೊಡ್ಡೇಂದ್ರ ಸ್ವಾಮಿಗಳು, ಕೇದಾರಲಿಂಗೇಶ್ವರ ಮಹಾಸ್ವಾಮಿಗಳು ಮುಂತಾದವರಿದ್ದರು. ಮಹಾತ್ಮ ಬಸವೇಶ್ವರ ಸೇವಾ ಬಳಗ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ (ರಿ) ಸೇಡಂ* ಅಧ್ಯಕ್ಷರಾದ ಶಿವಕುಮಾರ ಪಾಟೀಲ್ ತೆಲ್ಕೂರ ಶಾಸ್ತ್ರೋಕ್ತವಾಗಿ ಭೂಮಿ ಪೂಜೆ ನೆರವೇರಿಸಿದರು.

ಸನ್ಮಾನ: ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಪುರಸಭೆ ಅಧ್ಯಕ್ಷೆ ಶೋಭಾದೇವಿ ಹೂಗಾರ ಅವರನ್ನು ಸನ್ಮಾನಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗರೆಡ್ಡಿ ದೇಶಮುಖ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here