ನೆರೆ ಸಂತ್ರಸ್ತರಿಗೆ ಸಂಘಟನೆಗಳಿಂದ ಹಾಲು ಹಣ್ಣು ವಿತರಣೆ

0
69

ಸುರಪುರ: ಕೃಷ್ಣಾ ನದಿ ಪ್ರವಾಹದಿಂದ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ನಿರಾಶ್ರಿತರಾಗಿ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು.ನೆರೆ ಸಂತ್ರಸ್ತರಿಗೆ ಸಂಘಟನೆಗಳಿಂದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ಹೆಚ್.ಡಿ.ಕುಮಾರಸ್ವಾಮಿ ಸೇನೆಯಿಂದ ನಗರದ ಎಪಿಎಂಸಿ ಗಂಜಿನಲ್ಲಿ ತೆರೆಯಲಾದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದ ಶೆಳ್ಳಿಗಿ ಗ್ರಾಮದ ನಿರಾಶ್ರಿತರಿಗೆ ಹಣ್ಣು ಹಾಲು,ಬ್ರೇಡ್ ಮತ್ತಿತರೆ ವಸ್ತುಗಳ ವಿತರಿಸಿದ ಸೇನೆಯ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ,ಇಂದು ತಾಲ್ಲೂಕಿನ ಅನೇಕ ಗ್ರಾಮಗಳು ನೆರೆಯ ಬರೆಯಿಂದ ನಲುಗುತ್ತಿವೆ.ಅವರೆಲ್ಲ ನಮ್ಮ ಅಣ್ಣ ತಮ್ಮಂದಿರಾಗಿದ್ದು ಎಲ್ಲರು ಅವರ ನೆರವಿಗೆ ನಿಲ್ಲಬೇಕಿದೆ ಎಂದರು.ಈ ಸಂದರ್ಭದಲ್ಲಿ ಉಸ್ತಾದ ವಜಾಹತ್ ಹುಸೇನ,ರಾಮಕೃಷ್ಣಾ,ಅಟೋಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ,ಭೀಮರಾಯ,ತಿರುಪತಿ,ಮಾನಯ್ಯ ದೊರೆ,ದೇವಪ್ಪ,ಕೃಷ್ಣಾ ಕಕ್ಕೇರಾ ಹಾಗು ಗಂಜಿ ಕೇಂದ್ರದ ನಿರ್ವಾಹಕ ಅಶೋಕ ಸುರಪುರಕರ್ ಇದ್ದರು.

Contact Your\'s Advertisement; 9902492681

ಅದೇರೀತಿಯಾಗಿ ಗಂಜೀ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದಿಂದ ಅಗತ್ಯ ವಸ್ತುಗಳಾದ ಬಟ್ಟೆ,ಹಾಲು,ಹಣ್ಣು,ಬ್ರೇಡ್ ಮತ್ತು ಹಾಸಿಗಗಳನ್ನು ವಿತರಿಸಲಾಯಿತು.

ಸಂತ್ರಸ್ತರಿಗೆ ನೆರವಾಗಿ ಜಯಕರ್ನಾಟಕ ಸಂಘಟನೆ ತಾಲ್ಲೂಕಾಧ್ಯಕ್ಷ ರವಿ ನಾಯಕ ಮಾತನಾಡಿ,ನೆರೆ ಸಂತ್ರಸ್ತರಿಗೆ ಸಂಘಘಟನೆಯಿಂದ ಇನ್ನೂ ಹೆಚ್ಚಿನ ನೆರವು ನೀಡಲಾಗುವುದು.ಅಲ್ಲದೆ ಅವರಿಗೆ ಸರಕಾರ ಪರಿಹಾರ ನೀಡುವಂತೆ ಒತ್ತಾಯಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ನಿಂಗಪ್ಪ ನಾಯಕ ಬಿಜಾಸಪುರ,ಶರಣು,ಮಲ್ಲು ಕಬಾಡಗೇರಾ, ಬಸವರಾಜ ಶಖಾಪುರ,ರಾಮದೇವ ನಾಯಕ,ಹಣಮಂತ್ರಾಯ ಮೇಟಿಗೌಡ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here