ಕಲಬುರಗಿ: ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮೂಡ ಅವರ ಮೇಲೆ ಬಿಜೆಪಿ ಮುಖಂಡ ರವಿ ಬಿರಾದಾರ ಮಾಡಿರುವ ಆಪಾದನೆಗೆ ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ಕಿಳ್ಳಿ ಅವರು ಖಂಡಿಸಿದರು, ಬಸವಕಲ್ಯಾಣ ಉಪಚುನಾವಣೆಯಲ್ಲಿ ಸಲಗರ್ ವಿರುದ್ದ ಸ್ಪರ್ಧಿಸಲು ಅಭ್ಯರ್ಥಿ ತಯಾರು ಮಾಡಿದ್ದಾರೆ ಅಂತ ಸುಖಾ ಸುಮ್ಮನೆ ಶಾಸಕರ ಮೇಲೆ ಆರೋಪ ಮಾಡುತ್ತಿದ್ದಾರೆ.
ಶಾಸಕರು ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದಿಲ್ಲ, ಒಬ್ಬ ದಲಿತ ಶಾಸಕರ ಅಭಿವೃದ್ಧಿ ಸಹಿಸಲಾಗದೆ ಅಸೂಯೆ ಪಟ್ಟುಕೊಂಡು ಶಾಸಕರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.
ಬಿರಾದಾರ ಅವರು ಜಾತಿ ವಿರೋಧಿ ರಾಜಕೀಯ ಮಾಡುತ್ತಿದ್ದಾರೆ. ನಿಮ್ಮ ಈ ದಲಿತ ವಿರೋಧಿ ನೀತಿಗೆ ನಮ್ಮ ಸಂಘಟನೆಯ ವತಿಯಿಂದ ಮುಂದಿನ ದಿನಗಳಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಎಸ್ ಕಿಳ್ಳಿ ಅವರು ಆಕ್ರೋಶ ವ್ಯಕ್ತಪಡಿಸಿದರು.