ನಾಗಾವಿ ಕ್ಷೇತ್ರ ಶೈಕ್ಷಣಿಕ, ಸಾಂಸ್ಕøತಿಕ ಸಾಹಿತ್ಯಿಕವಾಗಿ ಶ್ರೀಮಂತವಾಗಬೇಕಾಗಿದೆ

0
112

ಚಿತ್ತಾಪುರ: ನಾಗಾವಿ ಘಟಿಕ ಸ್ಥಾನವು ಅಳಿವಿನಂಚಿನಲ್ಲಿದ್ದು ಅಲ್ಲಿರುವ ಅವಶೇಷಗಳು ಹಾಳಾಗಿ ಹೊಗುತ್ತಿದ್ದು ಅವುಗಳನ್ನು ಸಂರಕ್ಷಿಸುವದಲ್ಲದೇ ಮುಂದಿನ ಪೀಳಿಗೆಗೆ ಪೋಶಿಸಿ ಶೈಕ್ಷಣಿಕವಾಗಿ ಸಾಂಸ್ಕøತಿಕವಾಗಿ, ಸಾಹಿತ್ಯಿಕವಾಗಿ, ಶ್ರೀಮಂತಗೊಳಿಸಬೇಕಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಶನಿವಾರ ನಡೆದ ನಾಗಾವಿ ಸಾಹಿತ್ಯ ಸಾಂಸ್ಕøತಿಕ ಪರಿಷತ್ ಉದ್ಘಾಟನೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರಕೂಟರ ಕಾಲದಲ್ಲಿಯೇ ನಾಗಾವಿ ಕ್ಷೇತ್ರವು ವಿಶ್ವವಿದ್ಯಾಲಯ ಕೇಂದ್ರವಾಗಿ ಪ್ರಸಿದ್ದಿ ಪಡೆದು ವಿಶ್ವದಲ್ಲಿಯೇ ಪ್ರಸಿದ್ದ ಕ್ಷೇತ್ರವಾಗಿದೆ. ಇಂತಹ ಐತಿಹಾಸಿಕ ಕ್ಷೇತ್ರದಲ್ಲಿ ಅಧ್ಯಯನ ಕೇಂದ್ರವಾಗಬೇಕು ಎನ್ನುವ ಬೇಡಿಕೆ ಈ ಭಾಗದಿಂದ ಕೇಳಿಬರುತ್ತಿದೆ ಗುಲಬರ್ಗಾ ವಿಶ್ವವಿದ್ಯಾಲಯವು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

Contact Your\'s Advertisement; 9902492681

ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ಈ ಭಾಗದ ಐತಿಹಾಸಿಕ ನಾಗಾವಿ ಕ್ಷೇತ್ರದ ಇತಿಹಾಸ ನಾಡಿನಾದ್ಯಂತ ಪರಿಚಯಿಸುವ ಉದ್ದೇಶದಿಂದ ನಾಗಾವಿ ಸಾಹಿತ್ಯ ಸಾಂಸ್ಕøತಿಕ ಪರಿಷತ್ ಹುಟ್ಟು ಹಾಕಿರುವ ಕಾರ್ಯ ಶ್ಲಾಘನೀಯ, ನಾಗಾವಿ ಉತ್ಸವ ಮಾಡುವುದು ಅವಶ್ಯಕವಾಗಿದ್ದು ಇದಕ್ಕೆ ಬೇಕಾದ ಸಹಕಾರ ನೀಡಲಾಗುವುದು ಉತ್ಸವದ ಮೂಲಕ ಇತಿಹಾಸದ ಬೆಳೆಕು ಚೆಲ್ಲಿದಂತಾಗುತ್ತದೆ, ಈ ಭಾಗದ ನಾಗಾವಿ ಇತಿಹಾಸದ ಸಂಶೋಧನೆಯಾಗಬೇಕಾಗಿದೆ, ನಶಿಸಿ ಹೋಗುತ್ತಿರುವ ಶಿಲಾಶಾಸನಗಳ ಉತ್ಖನನ ಸರಕಾರ ಮಾಡಿ ಸಂರಕ್ಷಣೆ ಮಾಡಬೇಕು ಇದರ ಕುರಿತು ನಾನು ಸರಕಾರದ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿ ಒತ್ತಾಯಿಸುತ್ತೇನೆ ಎಂದು ಹೇಳಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದ ಅವರು, ನಾಗಾವಿ ಪ್ರಾಧೀಕಾರ ರಚನೆ ಆಗಬೇಕು ಮತ್ತು ನಾಗಾವಿ ಉತ್ಸವ ಜರುಗಬೇಕು ಎನ್ನುವ ಬೇಡಿಕೆ ಇದೆ. ಅದಕ್ಕಾಗಿ ನಾನು ಇಲ್ಲಿನ ಮುಖಂಡರ ಹಾಗೂ ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ನಾಗಾವಿ ಕ್ಷೇತ್ರಕ್ಕೆ 5 ಕೋಟಿ ಹಾಗೂ ಸನ್ನತಿ ಅಭಿವೃದ್ದಿ ಪ್ರಾಧೀಕಾರ ರಚಿಸಿ ಇದಕ್ಕೆ 5 ಕೋಟಿ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಲಾಗುವುದು ಎಂದರು.

ಕರ್ನಾಟಕ ಅಲೆಮಾರಿ ಹಾಗೂ ಅರೆಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ್ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಚಿತ್ತಾಪುರ ತಾಲೂಕಿನಲ್ಲಿ ರಾಷ್ಟ್ರಕೂಟದ ಅವಧಿಯಲ್ಲಿ ನಾಗಾವಿ, ಸನ್ನತಿ, ದಂಡೋತಿ, ಅಲ್ಲೂರ ಸೇರಿದಂತೆ ಇತಿಹಾಸ ಪ್ರಸಿದ್ದ ಕ್ಷೇೀತ್ರಗಳಿದ್ದು ಅವುಗಳ ಅಭಿವೃದ್ದಿಗೆ ಸರಕಾರದ ವತಿಯಿಂದ ಅನುದಾನ ಒದಗಿಸಿ ಅಭಿವೃದ್ದಿಪಡಿಸಿ ಇಲ್ಲಿನ ಗತವೈಭವವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.

ಸಾಹಿತಿಗಳಾದ ಡಾ.ಶಿವರಂಜನ್ ಸತ್ಯಂಪೇಟ್, ಮುಡುಬಿ ಗುಂಡೇರಾವ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ ಮಾತನಾಡಿದರು. ಅಧ್ಯಾಪಕ ಡಾ.ಮಲ್ಲಿಕಾರ್ಜುನ ಭಾಗೋಡಿ ನಾಗಾವಿ ಸಾಂಸ್ಕøತಿ ಪರಿಸರ ಕುರಿತು ಉಪನ್ಯಾಸ ನೀಡಿದರು. ನಾಗಾವಿ ಸಾಹಿತ್ಯ ಸಾಂಸ್ಕøತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೆದಾರ ಪ್ರಾಸ್ತಾವಿಕ ಮಾತನಾಡಿದರು.

ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಉಪಾಧ್ಯಕ್ಷೆ ಶೃತಿ ಪೂಜಾರಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆನಂದ ಪಾಟೀಲ ನರಬೋಳ, ಭೀಮಣ್ಣ ಸಾಲಿ, ಬಸವರಾಜ ಬೆಣ್ಣೂರಕರ್, ಸಿಪಿಐ ಪ್ರಕಾಶ ಯಾತನೂರ, ಬಸವರಾಜ ಬಳೂಂಡಗಿ, ಚಂದ್ರಶೇಖರ ಕಾಶಿ, ನಾಗರಾಜ ಬಂಕಲಗಿ, ಮುಕ್ತಾರ ಪಟೇಲ್ ವೇದಿಕೆಯಲ್ಲಿದ್ದರು. ಪದಾಧಿಕಾರಿಗಳಾದ ರವೀಂದ್ರ ಇವಣಿ, ಶಾಂತಕುಮಾರ ಮಳಖೇಡ, ರಾಜಶೇಖರ ಬಳ್ಳಾ, ದೇವಪ್ಪ ನಂದೂರಕರ್, ರವಿಶಂಕರ ಬುರ್ಲಿ, ಮಹ್ಮದ ಮಶಾಕ್, ಜಗದೇವ ಕುಂಬಾರ, ಭಾರತಿ ಸಿಂಪಿ, ಪ್ರದೀಪ ಕುಲಕರ್ಣಿ, ದೇವಿಂದ್ರಪ್ಪ ಇಮಾಡಪೂರ, ಮೋನಯ್ಯ ಪಂಚಾಳ, ನಟರಾಜ ಶಿಲ್ಪಿ, ಯಲ್ಲಯ್ಯ ಕಲಾಲ್, ವಿಷ್ಣುವರ್ಧನರೆಡ್ಡಿ ಇತರರು ಇದ್ದರು.

ಇದೇ ಸಂದರ್ಭದಲ್ಲಿ 6 ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಸಾಹಿತ್ಯ ಕ್ಷೇತ್ರದ ವೀರಯ್ಯ ಸ್ವಾಮಿ ಸ್ಥಾವರಮಠ, ಶಿಕ್ಷಣ ಕ್ಷೇತ್ರದ ಬಸಪ್ಪ ಮುಗಳಖೋಡ, ಕೃಷಿ ಕ್ಷೇತ್ರದ ಡಿ.ನರಸಯ್ಯಗೌಡ, ರಂಗಭೂಮಿ ಕ್ಷೇತ್ರದ ಸಿದ್ದಲಿಂಗಯ್ಯಸ್ವಾಮಿ ಕೋಡಗಿಮಠ, ಕಲಾ ಕ್ಷೇತ್ರದ ನರಸೀಂಹ ಅಲಮೇಲಕರ್, ಸಮಾಜ ಸೇವಾ ಕ್ಷೇತ್ರದ ಮಹ್ಮದ ಇಬ್ರಾಹಿಂ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್ ಅವರು ರಾಜ್ಯೊತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ವಿರಸಂಗಪ್ಪ ಸುಲೇಗಾಂವ ಸ್ವಾಗತಿಸಿದರು, ನರಸಪ್ಪ ಚಿನ್ನಕಟ್ಟಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here