ಭಾಲ್ಕಿ: ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ 133ನೇ ಜಯಂತ್ಯುತ್ಸವ ಭಾಗವಾಗಿ ಬಸವಾದಿ ಶರಣರ ವಿಷಯ ಕುರಿತಾದ ಲಿಂಗೈಕ್ಯ ಎಸ್.ಎಸ್.ತರಡಿ ಪ್ರಾಯೋಜಿತ ಜಾನಪದ ಗಾಯನ ಸ್ಪರ್ಧೆ ಮತ್ತು ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಜೀವನ ಸಾಧನೆ ಕುರಿತಾದ ಭಾಷಣ ಸ್ಪರ್ಧೆ ರವಿವಾರರಂದು ಹಿರೇಮಠ ಸಂಸ್ಥಾನ ಭಾಲ್ಕಿಯಲ್ಲಿ ಏರ್ಪಡಿಸಲಾಗಿತ್ತು. ಸ್ಪರ್ಧೆಯ ಉದ್ಘಾಟನಾ ಸಮಾರಂಭದ ದಿವ್ಯಸನ್ನಿಧಾನ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ವಹಿಸಿ, ಜಾನಪದ ನಮ್ಮ ನೆಲಮೂಲ ಸಂಸ್ಕøತಿಯ ಕನ್ನಡಿಯಾಗಿದೆ.
ಮಕ್ಕಳಲ್ಲಿ ಜಾನಪದ ಸಂಸ್ಕøತಿಯ ಪ್ರಜ್ಞೆ ಹೆಚ್ಚಾಗಬೇಕು. ಈ ವಯಸ್ಸಿನಲ್ಲಿ ನಾವು ಯಾವ ಚಿಂತನೆಗಳನ್ನು ಮಾಡುತ್ತೇವೆಯೊ ಅದನ್ನೆ ನಮ್ಮ ಜೀವನದುದ್ದಗಲಕ್ಕೂ ಇರುತ್ತವೆ. ಅದಕ್ಕಾಗಿ ನಮ್ಮ ವ್ಯಕ್ತಿತ್ವದ ಸರ್ವಾಂಗೀಣ ವಿಕಸನಕ್ಕೆ ಇಂತಹ ಸ್ಪರ್ಧೆಗಳು ಪೂರಕವಾಗಿರುತ್ತವೆ ಎಂದು ಆಶೀರ್ವದಿಸಿದರು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಮಕ್ಕಳಲ್ಲಿ ಸಂಸ್ಕಾರ ತಂದೆ ತಾಯಿಯ ಕುರಿತು ಗೌರವ ಹೆಚ್ಚಾಗಬೇಕು. ಶಿಕ್ಷಣದ ಜೊತೆ ಸಂಸ್ಕಾರವು ಬಹಳ ಪ್ರಮುಖ ಎನಿಸುತ್ತದೆ. ಮಾನವೀಯ ಮೌಲ್ಯಗಳು ಅಳವಡಿಸಿಕೊಂಡರೆ ನಮ್ಮ ಜೀವನ ಸುಖಿಯಾಗುತ್ತದೆ. ಅದಕ್ಕಾಗಿಯೇ ಇಂತಹ ಸ್ಪರ್ಧೆಗಳು ಆಯೋಜಿಸಲಾಗುತ್ತವೆ ಎಂದು ನುಡಿದರು. ಪೂಜ್ಯ ಶ್ರೀ ಶ್ರೀದೇವಿತಾಯಿ ಜಮಖಂಡಿ ಅವರು ಸಮ್ಮುಖ ವಹಿಸಿದ್ದರು.
ಡಾ.ಸಂಜುಕುಮಾರ ಜುಮ್ಮಾ ಅವರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಶರಣ ಬಂಡೆಪ್ಪ ಎಂ. ಅಧ್ಯಕ್ಷತೆ ವಹಿಸಿದ್ದರು. ಶರಣ ಸಿಖರೇಶ್ವರ ಶೆಟಕಾರ ಅವರಿಂದ ಬಸವಗುರುಪೂಜೆ ನೆರವೇರಿಯಿತು. ವಸಂತ ಹುಣಸನಾಳೆ, ಡಾ.ಎಂ.ಮಕ್ತಂಬಿ, ಶ್ರೀದೇವಿ ವಿಜಯಕುಮಾರ ಪಾಟೀಲ, ವೀರಣ್ಣ ಕುಂಬಾರ, ಹಣಮಂತಪ್ಪ ಚಿದ್ರಿ, ಶಾಂತಯ್ಯ ಸ್ವಾಮಿ, ರಾಮಚಂದ್ರ ಯರನಾಳೆ ಮುಂತಾದವರು ನಿರ್ಣಾಯಕರಾಗಿದ್ದರು. ಶರಣ ಕಿರಣ ಖಂಡ್ರೆ, ವಿಶ್ವನಾಥ ಹುಗ್ಗೆ, ಮುಂತಾದವರು ಉಪಸ್ಥತರಿದ್ದರು. ದೀಪಕ ಥಮಕೆ ನಿರೂಪಿಸಿದರು. ಯಲ್ಲನಗೌಡ ಬಾಗಲಕೋಟ ವಚನ ಸಂಗೀತ ನಡೆಸಿದರು.