ಅಧಿವೇಶನದಲ್ಲಿ ಗ್ರಾಮೀಣ ಪತ್ರಕರ್ತಗೆ ಸೌಕರ್ಯ ಒದಗಿಸುವ ಕುರಿತು ಚರ್ಚೆ: ಶಾಸಕ ಡಾ. ಅಜಯಸಿಂಗ್

0
31
ದೇಶದಲ್ಲಿ ಪತ್ರಕರ್ತರ ರಕ್ಷಣೆ ಇಲ್ಲ, ಪತ್ರಿಕಾ ಸಂಸ್ಥೆ ಹಾಗೂ ಪತ್ರಕರ್ತರ ರಕ್ಷಣೆ ಅತ್ಯವಶ್ಯಕವಾಗಿದ್ದು, ಅವರ ಸುರಕ್ಷಿತವಾಗಿ ಕಾಯ್ದೆ ಹೊರತರಬೇಕು. ಓದುಗರ ಸಂಖ್ಯೆ ಕಡಿಮೆ ಆಗುತ್ತಿಲ್ಲ, ಇದಕ್ಕೆ  ಓದುವ ವೇದಿಕೆ ಬೇರೆ ಬೇರೆ ಆಗಿದೆ. ನಿಯಮ ಸರಳೀಕರಣ ಮಾಡಲಿ. = -ಬಾಬುರಾವ ಯಡ್ರಾಮಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ, ಕಲಬುರಗಿ.

ಕಲಬುರಗಿ: ಗ್ರಾಮೀಣ ಭಾಗದ ಪತ್ರಕರ್ತರಿಗೆ ಸೌಕರ್ಯ ಒದಗಿಸುವ ಕುರಿತು ಕಾಂಗ್ರೆಸ್‍ನ ಎಲ್ಲ ಶಾಸಕರು ಜತೆಗೂಡಿ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್ ಹೇಳಿದರು.

ಇಲ್ಲಿನ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ನಡೆದ ಕಲಾ ಚೇತನ ರಾಜ್ಯಮಟ್ಟದ ಕನ್ನಡ ದೈಮಾಸ ಪತ್ರಿಕೆ ಬಿಡುಗಡೆ ಹಾಗೂ ಮಾಧ್ಯಮ ಕ್ಷೇತ್ರದ ಸಾಧಕರಿಗೆ  ಗೌರವ ಸನ್ಮಾನಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಹತ್ತಾರು ಯೋಜನೆ ಜಾರಿ ತರಲು ಶ್ರಮಿಸುತ್ತೇವೆ.  ಗ್ರಾಮೀಣ ಪತ್ರಕರ್ತರು ಬಸ್ ಪಾಸ್, ಮಾಸಾಶನ ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು. ಇದೇವೇಳೆಯಲ್ಲಿ ಕೋಬಾಳ ಅವರ ಕಲಾ ಸಾಧನೆಯನ್ನು ಪ್ರಶಂಸಿಸದರು.

Contact Your\'s Advertisement; 9902492681

ಖಜೂರಿಯ ಕೋರಣೇಶ್ವರ ವಿರುಕ್ತ ಮಠದ ಪೀಠಾಧಿಪತಿ  ಮುರುಘೇಂದ್ರ ಕೋರಣೇಶ್ವರ ಶಿವಯೋಗಿ ಸಾನ್ನಿಧ್ಯ ವಹಿಸಿದ್ದರು. ಕೆಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್ ಪತ್ರಿಕೆ ಬಿಡುಗಡೆ ಮಾಡುವರು. ದಕ್ಷಿಣ ಬ್ಲಾಕ್ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಅಧ್ಯಕ್ಷತೆ ವಹಿಸಿದ್ದರು.  ಕೆಪಿಎಸ್ ಸಿ ಮಾಜಿ ಸದಸ್ಯೆ ಡಾ. ನಾಗಾಬಾಯಿ ಬುಳ್ಳಾ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಮಹಾಜನ್  ಫೌಂಡೇಶನ್ ಅಧ್ಯಕ್ಷ ಶಿವಕಾಂತ ಮಹಾಜನ್,  ವಾರ್ತಾ ಇಲಾಖೆಯ ಉಮಾಶಂಕರ ಚಿನಮಳ್ಳಿ, ಹಿರಿಯ ಕಾಂಗ್ರೆಸ್ ಮುಖಂಡ ಶಿವಶರಣಪ್ಪ ಕೋಬಾಳ, ಉದ್ದಿಮೆದಾರ ಅಂಬಯ್ಯ ಗುತ್ತೇದಾರ, ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಶರಣು ಬಿಲ್ಲಾಡ, ಕಾಂಗ್ರೆಸ್ ಮುಖಂಡರಾದ ರಾಜಶೇಖರ ಸಿರಿ, ಮಲ್ಲಿಕಾರ್ಜುನ ಸಾಹು, ಸಿದ್ದಲಿಂಗರೆಡ್ಡಿ, ರುಕ್ಕುಂಪಟೇಲ್ ವೇದಿಕೆಯಲ್ಲಿದ್ದರು.

ಇದೇ ವೇಳೆಗೆ ಪತ್ರಕರ್ತರ ಸಂಘದ ಸರ್ವ ಪದಾಧಿಕಾರಿಗಳು , ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯರು, ಮಾಧ್ಯಮ ಅಕಾಡಮಿ ಸದಸ್ಯರು ಹಾಗೂ ರಾಷ್ಟಿಯ ಕೌನ್ಸಿಲ್ ಸದಸ್ಯರಿಗೆ ಗೌರವಯುತವಾಗಿ ಸನ್ಮಾನಿಸಿದರು. ಯಲ್ಲಾಲಿಂಗ ಕೋಬಾಳ ನಿರೂಪಿಸಿದರು. ಶಿವರುದ್ರಯ್ಯ್ ಗೌಡಗಾಂವ ಪ್ರಾರ್ಥನೆ ಗೀತೆ ಹಾಡಿದರು, ಸುರೇಶ ಬಡಿಗೇರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇತನ್ ಬಿ ಕೋಬಾಳ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here