ಕಲಬುರಗಿ: ಜಿಲ್ಲೆಯ ಧಾರ್ಮಿಕ ಕಾರ್ಯಗಳೊಂದಿಗೆ ಸಮಾಮುಖಿ ಕಾರ್ಯಗಳನ್ನು ಕೈಗೊಂಡಿರುವ ಕಲಬುರಗಿ ತಾಲ್ಲೂಕಿನ ಶ್ರೀನಿವಾಸ ಸರಡಗಿಯ ಶ್ರೀ ಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯರ ಸಾಮಾಜಿಕ ಚಟುವಟಿಕೆಗಳನ್ನು ಗಮನಿಸಿ ಅಂತರಾಷ್ಟ್ರೀಯ ಶಾಂತಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ ಎಂದು ನಾಗಲಿಂಗಯ್ಯ ಮಠಪತಿ ಅವರು ತಿಳಸಿದ್ದಾರೆ.
ಪೂಜ್ಯ ಸೇವೆ ನಿಜಕ್ಕೂ ಅಮೋಘ ಮತ್ತು ಅಪ್ರತಿಮ ಎಂದು ಬಣ್ಣಿಸಿರುವ ವಿಶ್ವವಿದ್ಯಾಲಯ ಇದೇ 10 ರಂದು ಪಾಂಡಿಚೇರಿಯಲ್ಲಿ ನಡೆಯುವ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪೂಜ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದೆಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಸಿದೆ.