ಕಲಬುರಗಿ: ರಾಜ್ಯದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕಲಬುರಗಿ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕಿ ಸಲ್ಮಾ ಕೆ. ಫಹೀಂ ಅವರು ಡಿ.22ರಂದು ಹೈದ್ರಾಬಾದಿನಿಂದ ರಸ್ತೆ ಮಾರ್ಗವಾಗಿ ಕಲಬುರಗಿಗೆ ಅಗಮಿಸಿ ವಾಸ್ತವ್ಯ ಮಾಡುವರು.
ಡಿ. 23 ರಂದು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕುರಿತು ಪ್ರಗತಿ ಪರಿಶೀಲನೆ ನಡೆಸುವ ಅವರು ಮಧ್ಯಾಹ್ನ 1.30 ಗಂಟೆಗೆ ಇಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.