ಸಕಾಲಕ್ಕೆ ಸಾಲ ವಿತರಿಸಲು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ

0
16

ಸುರಪುರ: ಡಿಸಿಸಿ ಬ್ಯಾಂಕ್ ವ್ಯಾಪ್ತಿಗೆ ಬರುವ ಸುರಪುರ ಮತ್ತು ಹುಣಸಗಿ ತಾಲೂಕುಗಳ ರೈತರಿಗೆ ಬ್ಯಾಂಕಿನಲ್ಲಿ ಸಕಾಲಕ್ಕೆ ಸಾಲ ಸೌಲಭ್ಯ ದೊರೆಯದೇ ತೊಂದರೆ ಅನುಭವಿಸುತ್ತಿದ್ದು ಸಾಲಕ್ಕಾಗಿ ಪ್ರತಿನಿತ್ಯ ಬ್ಯಾಂಕಿಗೆ ರೈತರು ಅಲೆದಾಡುವಂತಾಗಿದೆ ಕೂಡಲೇ ಎರಡೂ ತಾಲೂಕುಗಳ ರೈತರಿಗೆ ಸಮಯಕ್ಕೆ ಸರಿಯಾಗಿ ಸಾಲ ನೀಡಬೇಕು ಎಂದು ಕಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿರುವ ಅವರು ರೈತರು ತಮ್ಮ ಜಮೀನುಗಳ ಮೇಲೆ ಬೆಳೆ ಸಾಲ ಹಾಗೂ ಇತರೆ ಸಾಲಕ್ಕಾಗಿ ಬ್ಯಾಂಕಿಗೆ ಹಲವಾರು ಸಲ ಅಲೆದಾಡುತ್ತಿದ್ದು ಸರಿಯಾದ ಸಮಯಕ್ಕೆ ಸಾಲ ನೀಡುತ್ತಿಲ್ಲ ಅಲ್ಲದೆ ಬ್ಯಾಂಕಿನಿಂದ ಹಿಂದೆ ಸಾಲ ಪಡೆದು ಮರು ಪಾವತಿಸಿದ ರೈತರಿಗೆ ಪುನ: ಸಾಲ ನೀಡದೇ ಯಾವದಾದರೂ ಒಂದು ಕುಂಟು ನೆಪ ಹೇಳುತ್ತಾ ಬ್ಯಾಂಕಿನ ಆಡಳಿತ ಮಂಡಳಿಯವರು ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Contact Your\'s Advertisement; 9902492681

ಹುಣಸಗಿ ತಾಲೂಕಿನಿಂದ 60-70ಕಿಮೀ ದೂರದ ಗ್ರಾಮಗಳಿಂದ ಬ್ಯಾಂಕಿಗೆ ರೈತರು ಬಂದು ಮುಂಜಾನೆಯಿಂದ ಸಾಯಂಕಾಲವರೆಗೆ ಕುಳಿತು ಸಾಲಕ್ಕಾಗಿ ಅಧಿಕಾರಿಗಳಿಗೆ ಮನವಿ ಮಾಡಿದರೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ 5-6ಬಾರಿ ಬ್ಯಾಂಕಿಗೆ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಅಧಿಕಾರಿಗಳು ರೈತರನ್ನು ಸತಾಯಿಸಿ ಅಲೆದಾಡಿಸುತ್ತಿದ್ದಾರೆ ಎಂದು ದೂರಿರುವ ಅವರು ಸರಕಾರ 3ಲಕ್ಷ ರೂ ವರೆಗೆ ಬಡ್ಡಿ ರಹಿತ ಸಾಲ ಸಾಲ ನೀಡಲು ಅವಕಾಶ ನೀಡಿದ್ದು ಬ್ಯಾಂಕಿನವರು ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಸತಾಯಿಸುತ್ತಿದ್ದಾರೆ.

ಇದುವರೆಗೂ ಯಾವುದೇ ರೈತರಿಗೆ ಮಧ್ಯಮಾವಧಿ ಸಾಲ ಕೊಟ್ಟಿಲ್ಲ ರೈತರಿಗೆ ಜೀವನಾಡಿಯಾಗಬೇಕಾದ ಬ್ಯಾಂಕು ರೈತ ಜೀವವನ್ನು ಹಿಂಡುತ್ತಿದ್ದು ರೈತರ ಜೀವನ ಜೊತೆ ಚೆಲ್ಲಾಟವಾಡುತ್ತಿದೆ ರೈತರನ್ನು ಶೋಷಿಸುತ್ತಿದೆ ಎಂದು ಅವರು ಹೇಳಿದ್ದಾರೆ ಅಲ್ಲದೆ ಬ್ಯಾಂಕಿನಲ್ಲಿ ಮಧ್ಯವರ್ತಿಗಳ ಕಾಟ ಜಾಸ್ತಿಯಾಗಿದ್ದು ರೈತರು ನೇರವಾಗಿ ಬ್ಯಾಂಕಿಗೆ ಬಂದು ಸಾಲ ಪಡೆಯಲು ಆಗದ ಪರಿಸ್ಥಿತಿ ಉಂಟಾಗಿದೆ.

ಮಧ್ಯವರ್ತಿಗಳು ಹೇಳಿದಂತೆ ಬ್ಯಾಂಕಿನವರು ವರ್ತಿಸುತ್ತಿದ್ದು ರೈತರಿಗೆ ಅನ್ಯಾಯವಾಗುತ್ತಿದೆ ಮಧ್ಯವರ್ತಿಗಳು ಇದರ ಲಾಭ ಪಡೆದು ಪರ್ಸೆಂಟೇಜ್ ಹಣವನ್ನು ಪಡೆದು ಸಾಲ ಕೊಡಿಸುವ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿರುವ ಅವರು ಕೂಡಲೇ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ರೈತರ ಬಗ್ಗೆ ಕಾಳಜಿ ವಹಿಸಿ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸಿ ಸಕಾಲದಲ್ಲಿ ರೈತರಿಗೆ ಸಾಲ ಸೌಲಭ್ಯ ದೊರಕಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಒಂದು ವಾರದೊಳಗಾಗಿ ಕ್ರಮ ವಹಿಸದಿದ್ದಲ್ಲಿ ಸಂಘಟನೆ ನೇತೃತ್ವದಲ್ಲಿ ರೈತರೊಂದಿಗೆ ಬ್ಯಾಂಕಿನ ಮುಂದೆ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬ್ಯಾಂಕಿನ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಗುರುನಾಥರೆಡ್ಡಿ ಹದನೂರು ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here