ಕಲಬುರಗಿಯಲ್ಲಿ “ರೈತ ದಿನಾಚರಣೆ”

0
339

ಕಲಬುರಗಿ: ನೋವುಗಳ ನಡುವೆ ನೆಮ್ಮದಿ ಹುಡುಕುವದು,ನಿರಾಸೆಗಳ ಮದ್ಯ ಭರವಸೆಯೊ೦ದಿಗೆ ಜೀವನ ಸಾಗಿಸುವದೆ ರೈತರ ಜೀವನವಾಗಿದೆ ಎಂದು ಉಪಳಾ೦ವ ಗ್ರಾಮದ ಪ್ರಗತಿಪರ ರೈತರಾದ ಲಕ್ಷ್ಮಿಪುತ್ರ ಟೆ೦ಗಳಿ ಹೇಳಿದರು.

ಉಪಳಾ೦ವ ಗ್ರಾಮದ ಶಿವಶರಣಪ್ಪಬಿರಾದಾರ ಇವರ ಹೊಲದಲ್ಲಿ ಕನ್ನಡ ಜಾನಪದ ಪರಿಷತ ಉತ್ತರ ವಲಯದ ವತಿಯಿಂದ  ಹಮ್ಮಿಕೊಂಡಿರುವ “ರೈತ ದಿನಾಚರಣೆ” ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಸರ್ಕಾರವು ರೈತರಿಗೆ ಕೇವಲ ಅನುಕಂಪ ನೀಡದೆ ಪರಿಹಾರ ನೀಡುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ಕೈ ಹಿಡಿಯುವ ಕೆಲಸ ಮಾಡಲೆಂದು ಹೇಳಿದರು.

Contact Your\'s Advertisement; 9902492681

ಕಜಾಪ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ನೇಗಿಲ ಕುಲದೊಳಗಡಗಿದ ಕರ್ಮ, ನೇಗಿಲ ಮೇಲೆ ನಿಂತಿದೆ ಧರ್ಮ ಎನ್ನುವ೦ತೆ ಸರ್ವರಿಗೂ ಅನ್ನ ನೀಡುವ ಮೂಲಕ ಸಮಾನತೆ ಬೀಜ ಬಿತ್ತುತಿರುವವನೆ ರೈತ.  ರೈತರು ಬೆಳೆದ ಬೆಳೆಗಳು ನಾಶವಾಗಿ ತಾನೇ ಉಪವಾಸದಲ್ಲಿರುವುದು ವಿಪರ್ಯಾಸ ಸಂಗತಿ. ಕಷ್ಟದಲ್ಲಿರುವ ರೈತರಿಗೆ ಸರ್ಕಾರ ಬೇಗ ಪರಿಹಾರ ನೀಡುವ ಮೂಲಕ ಕಷ್ಟದಲಿೢರುವರಿಗೆ ಸ್ಪಂದಿಸಲೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಯುವ ಪ್ರಗತಿಪರ ರೈತರದ ಲಕ್ಷ್ಮಿಪುತ್ರ ಟೆ೦ಗಳಿ ಹಾಗೂ ರವಿ ಬಿರಾದಾರ ಅವರಿಗೆ ಸನ್ಮಾನಿಸಲಾಯಿತು.

ಶರಣಬಸಪ್ಪ ಮಚೆಟಿ, ಶಿವಶರಣಪ್ಪ ಬಿರಾದಾರ, ನಾಗೇಂದ್ರಪ್ಪ ಅಟ್ಟೂರ, ಗುರಣಾ ಬಿರಾದಾರ, ಸುವರ್ಣ ಬಿರಾದಾರ, ಶ್ರೀದೇವಿ ಅಟ್ಟೂರ,ನಾಗರಾಜ ಬಿರಾದಾರ,ಜ್ಯೋತಿ ಬಿರಾದಾರ,ಚನ್ನವೀರ ಅಟ್ಟೂರ,ಮಾಯಾ ನಿಂಬಾಳ, ಭೂಮಿಕಾ ಬಿರಾದಾರ,ಶೃತಿ,ಸಂಗಮೇಶ, ಪೃಥ್ವಿರಾಜ,ಸನ್ನಿಧಿ, ಸಂಗಮನಾಥ ನಿಂಬಾಳ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here