ನಿರಂತರ ನೀರು ಪೂರೈಕೆ ಕಾಮಗಾರಿ ನಡೆಸಲು ಡಾ. ಚುಲಬುಲ್ ಒತ್ತಾಯ

0
16

ಕಲಬುರಗಿ: ಇಲ್ಲಿನ ಕುಸನೂರ್ ಮತ್ತು ಹಾಗರಗಾ ಪ್ರದೇಶದ ನಡುವೆ ಇರುವ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಲೇಔಟ್ ಗಳ ಜಮೀನಿನಲ್ಲಿ ನಿರಂತರ ನೀರು ಸರಬರಾಜು ಸಂಪರ್ಕ ಕಾಮಗಾರಿ ಕೈಗೊಳ್ಳಬೇಕೆಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಮೊಹಮ್ಮದ್ ಅಜಗರ್ ಚುಲಬುಲ್ ಹಿರಿಯ ಅಧಿಕಾರಿ ಸೇರಿದಂತೆ ಇಲಾಖೆಯ ವ್ಯವಸ್ಥಾಪಕರಿಗೆ ಭೇಟಿ ನೀಡಿ ಮನವಿ ಮಾಡಿದ್ದಾರೆ.

KUIDFC ಸಿಇ ಕಾಂತರಾಜು, KUDA ಅಧ್ಯಕ್ಷ ಅವೀನಾಶ್ ಕುಲಕರ್ಣಿ EE KUIDFC ಶಿವಕುಮಾರ ಪಾಟೀಲ್ ಅವರಿಗೆ ಭೇಟಿ ಮಾಡಿದರು.

Contact Your\'s Advertisement; 9902492681

ಇಲ್ಲಿನ ಇಎಸ್ಐ, ಗುಲಬರ್ಗಾ ವಿವಿ ಮತ್ತು ವಿಮಾನ ನಿಲ್ದಾಣಕ್ಕೆ ಎಲ್ಆ್ಯಂಡಟಿ ಕಂಪನಿ ನಿರಂತರ ನೀರು ಪೂರೈಕೆ ಕಾಮಗಾರಿ ನಡೆಸುತ್ತಿದೆ. ಆದರೆ ಪ್ರಾಧಿಕಾರದ ವ್ಯಾಪ್ತಿಯ ಹಾಗರಗಾ ಮತ್ತು ಕುಸನೂರ್ ಗ್ರಾಮಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 2000 ಮತ್ತು 1800 ಮನೆಗಳ ನಿರ್ಮಾಣಕ್ಕೆ ಲೇಔಟ್ ಗೆ ಸರಕಾರ ಅನುಮೋದನೆ ಸಿಕ್ಕಿದೆ. ಇಲ್ಲಿ ನಿರಂತರ ನೀರು ಪುರೈಕೆ ಕಾಮಗಾರಿ ನಡೆಸದೇ ಪ್ರಾಧಿಕಾರಗಳ ಲೇಔಟ್ ಗಳಿಂದ ಗುವಿವಿ, ವಿಮಾನ ನಿಲ್ದಾಣ ಸಂಪರ್ಕ ಹೋಗುತ್ತಿದೆ. ಆದರೆ ಇಲ್ಲಿ ಸಂಪರ್ಕ ಕಲ್ಪಸಿದಿರುವುದಕ್ಕೆ ಅಜಗರ್ ಚುಲಬಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕುಡಾ ಲೇಔಟ್ ನಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಹಾದು ಹೋಗುತ್ತಿರುವ ನಿರಂತರ ನೀರು ಪೂರೈಕೆ ಸಂಪರ್ಕ ಜೋಡಣೆ ಮಾಡಬೇಕೆಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಎಲ್ಆ್ಯಂಡಟಿ ಕಂಪನಿಯ ಅಧಿಕಾರಿ ಮತ್ತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಭೇಟಿ ನೀಡಿ ಕಾಮಗಾರಿ ನಡೆಸಬೇಕೆಂದು ಮನವರಿಕೆ ಮಾಡಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here