ಚಿಂಚೋಳಿ ಶಾಸಕರ ವಿರುದ್ಧ ವಾಗ್ಧಾಳಿ

0
47

ಕಾಳಗಿ: ನೂತನ ಕಾಳಗಿ ತಾಲುಕಿಗೆ ಶಾಸಕರ ಕೊಡುಗೆ ಏನು, ಚಿಂಚೋಳಿ ಶಾಸಕರ ನಿರ್ಲಕ್ಷ್ಯದಿಂದ ಹಾಗೂ ಮಲತಾಯಿ ಧೋರಣೆಯಿಂದ ಕಾಳಗಿ ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದೆ, ಘೋಷಣೆಗಷ್ಟೇ ಸಿಮೀತವಾಗಿದೆ, ಪರಂತೂ ತಾಲೂಕಿಗೆ ಅಗತ್ಯ ವಿರುವ ಮೂಲ ಸೌಲಬ್ಯಗಳಾಗಲಿ ಹಾಗೂ ಕಛೇರಿಗಳಾಗಲಿ ಸ್ಥಾಪನೆಯಾಗಿಲ್ಲ ಎಂದು ಕಾಂಗ್ರೆಸ ವಕ್ತಾರ ರಾಘವೇಂದ್ರ ಗುತ್ತೇದಾರ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಶನಿವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕಾಳಗಿ ಪಟ್ಟಣ ಪಂಚಾಯತಿ ಅನುದಾನದಲ್ಲಿ ಕಾಮಗಾರಿಗಳು ಚಾಲ್ತಿಯಲ್ಲಿವೆ, ಆದರೆ ಶಾಸಕರ ಅನುದಾನ ನಯಾ ಪೈಸೆ ಇಲ್ಲ, ಮತ್ತು 10 ಪರ್ಸೆಂಟ್ ಕಮಿಷನ್ ವ್ಯವಹಾರ ನಡೆದಿದೆ ಎಂದು ಕೇಳಿ ಬರುತ್ತಿದೆ, ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿವೆ, ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲದರ್ಜೇಗೇರಿಸಿದ್ದು ಕಾಂಗ್ರೆಸ ಸರಕಾರದಲ್ಲಿ ವಿನಹ ಈ ಶಾಸಕರ ಅವದಿಯಲ್ಲಿ ಅಲ್ಲಾ, 6 ಕೋಟಿ ರೂ. ವೆಚ್ಚದಲ್ಲಿ ರೌದ್ರಾವತಿ ನದಿ ಅಡ್ಡಲಾಗಿ ನಿರ್ಮಿಸಿದ ಬ್ರಿಜ್ ಕಮ್ ಬ್ಯಾರೆಜ್ ತಡೆಗೋಡೆಯಿಲ್ಲದೆ ಸಂಪೂರ್ಣವಾಗಿ ಅವ್ಶೆಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ನಗರ ಅಧ್ಯಕ್ಷ ವೇದಪ್ರಕಾಶ ಮೋಟಗಿ ಮಾತನಾಡಿ, ಪಟ್ಟಣದಲ್ಲಿ ಶಾಸಕರ ಅನುದಾನದಲ್ಲಿ ಯಾವೂದೇ ರಸ್ತೆ ಮತ್ತು ವಿದ್ಯುತ್ ಕಾಮಗಾರಿಗಳು ನಡೆದಿಲ್ಲ, ಕಾಂಗ್ರೆಸ ಪಕ್ಷ ಅಧಿಕಾರದಲ್ಲಿದ್ದಾಗ ಆಗಿದ ಕೆಲಸವನ್ನು ತಮ್ಮ ಕೆಲಸವೆಂದು ಹೇಳಿಕೊಳ್ಳುತ್ತಿದ್ದಾರೆ, 5 ನೇ ಮತ್ತು 6 ನೇ ವಾರ್ಡಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನಿರ್ಲಕ್ಷ್ಯ ತೋರಿಸುತಿದ್ದು ಇದರ ಹಿಂದೆ ಕಾಣದ ಕೈ ಇದೆ ಎಂದು ತೋರುತ್ತದೆ, ತಾಲೂಕಿನಲ್ಲಿ ತೊಗರಿ ಬೆಳೆ ನೆಟೆ ರೋಗದಿಂದ ಸಂಪೂರ್ಣವಾಗಿ ಹಾಳಾದರೂ ಶಾಸಕರು ಬೆಳೆ ಪರಿಹಾರದ ಬಗ್ಗೆ ಎಲ್ಲಿಯೂ ಮಾತಾಡಿಲ್ಲ. ಅಧಿವೇಶನದಲ್ಲಿ ಕೆಚ್ಛೆದೇಯಿಂದ ಮಾತನಾಡಿ ಅಸರಿಪಡಿಸುವ ತಾಕತ್ತು ಶಾಸಕರಲ್ಲಿಲ, ರೈತರ ಕಾಳಜಿ ಇವರಿಗೇ ಶೂನ್ಯವಾಗಿದೆ. ಇದರಿಂದ ಗೊತ್ತಾಗುತ್ತೆ ಶಾಸಕರಿಗೆ ರೈತರ, ಜನಸಾಮನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ತಿಳಿಸಿದರು.

ಕೆಪಿಸಿಸಿ ವಕ್ತಾರ ರಾಘವೇಂದ್ರ ಗುತ್ತೇದಾರ, ಶಿವಕುಮಾರ ಕಮಲಾಪೂರ, ಸಂತೋಷ ಪತಂಗೆ, ವಿಠ್ಠಲ್ ಸೇಗಾಂವಕರ್, ರವಿದಾಸ ಪತಂಗೆ, ಜಗನ್ನಾಥ ಚಂದನಕೇರಿ, ಅಸ್ಲಾಂ ಬೇಗ ಬಿಜಾಪೂರ, ಜಿಯಾವೋದ್ದಿನ ಸೌದಾಗರ್, ಮುನೀರ ಬೇಗ ಬಿಜಾಪೂರ, ಸಂತೋಷ ನರನಾಳ, ಶರಣಯ್ಯ ಸ್ವಾಮಿ ಚಿಕ್ಕಮಠ. ಬಸವರಾಜ ಕಲಶೆಟ್ಟಿ, ರೇವಣಸಿದ್ದ ಕಲಶೆಟ್ಟಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here