ತಾಂಡಗಳಲ್ಲಿರುವ ಅರ್ಚಕರಿಗೆ ಗೌರವಧನ ನೀಡಲು ಶಾಸಕ ಪ್ರಿಯಾಂಕ್ ಆಗ್ರಹ

0
24

ಕಲಬುರಗಿ: ಕರ್ನಾಟಕದಲ್ಲಿ ಬಂಜಾರ ಸಮುದಾಯದ ತಾಂಡಗಳಲ್ಲಿರುವ ಅರ್ಚಕರಿಗೆ ಮಾಸಿಕ 10 ಸಾವಿರ ರು. ಗೌರವಧನ ನೀಡಬೇಕು ಎಂದು ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಪತ್ರದ ಮೂಲಕ ಆಗ್ರಹಿಸಿದ್ದಾರೆ.

ನಮ್ಮ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಬಂಜಾರ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿತ್ತು ಆದರೆ, ಇಂದಿನ ಬಿಜೆಪಿ ಸರಕಾರ ಬಂಜಾರ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕಿಡಿಕಾರಿದರು.

Contact Your\'s Advertisement; 9902492681

ತೆಲಂಗಾಣ ರಾಜ್ಯ ಸರಕಾರವು ಅಲ್ಲಿನ ಬಂಜಾರಾ ಸಮುದಾಯದವರ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಂಡು ತಾಂಡಗಳಲ್ಲಿನ ವಿವಿಧ ದೇವಾಲಯಗಳ ಆರ್ಚಕರಿಗೆ “ಧೂಪ, ದೀಪ, ನೈವೇದ್ಯಮ್” ಯೋಜನೆ ರೂಪಿಸಿ ಮಾಸಿಕ ಗೌರವಧನ ನೀಡಲಾಗುತ್ತಿದೆ. ಅದೇ ರೀತಿ ನಮ್ಮ ಕರ್ನಾಟಕದಲ್ಲಿರುವ ಸಾವಿರಾರು ಬಂಜಾರಾ ತಾಂಡಾಗಳ ಆರಾಧ್ಯ ದೇವರುಗಳ ದೇವಸ್ಥಾನಗಳಲ್ಲಿ ಪೂಜೆ, ಅರ್ಚನೆ, ಭಜನೆ ಮುಂತಾದ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಆದರೆ, ಇಲ್ಲಿನ ತಾಂಡಾಗಳ ಅರ್ಚಕರುಗಳು ಸೌಲಭ್ಯ ವಂಚಿತರಾಗಿದ್ದಾರೆ ಎಂದಿದ್ದಾರೆ.

ಸರಕಾರವು ಸಮಾಜ ಕಲ್ಯಾಣ ಇಲಾಖೆ, ತಾಂಡಾ ಅಭಿವೃದ್ಧಿ ನಿಗಮ, ಅಥವಾ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ಮೂಲಕ ಕರ್ನಾಟಕದಲ್ಲಿರುವ ಬಂಜಾರಾ ಸಮಾಜದವರ ಸಾವಿರಾರು ತಾಂಡಾಗಳಲ್ಲಿರುವ ಅರ್ಚಕರಿಗೆ ಮಾಸಿಕ ರೂ. 10 ಸಾವಿರ ಗಳಂತೆ ಗೌರವಧನ ನೀಡಲು, ವಿಶೇಷ ಯೋಜನೆ ರೂಪಿಸಿ ಸಹಸ್ರಾರು ಬಂಜಾರಾ ಸಮಾಜದವರಿಗೆ ಸೌಲಭ್ಯ ಕಲ್ಪಸುವಂತೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಚಿವರಿಗೆ ಪತ್ರದ ಮೂಲಕ ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here