ಕಲಬುರಗಿ: ಆಶಾ ಕಾರ್ಯಕರ್ತರಿಗೆ ಮಾಸಿಕ 12 ಸಾವಿರ ಗೌರವ ಧನ ನಿಗದಿ ಮಾಡಿ ಪ್ರತಿ ತಿಂಗಳು ಪಾವತಿ, ನಿವೃತ ಹೊಂದುವ ಆಶಾಗಳಿಗೆ ನಿವೃತ್ತ ಪರಿಹಾರಧನ 3 ಲಕ್ಷ ನಿಗದಿ, 2 ವರ್ಷದ ಬಾಕಿರುವ ಕೇಂದ್ರದ ಪೋತ್ಸಾಹ ಧನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಬೃಹತ್ ಪ್ರತಿಭಟನೆ ಜರುಗಿತು.
ಇಲ್ಲಿನ ಜಿಲ್ಲಾ ಅಧಿಕಾರಿಗಳ ಕಚೇರಿ ಮುಂದೆ ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನಾ ಧರಣಿ ನಡೆಸಿ ರಾಜ್ಯ ಸರಕಾರಕ್ಕೆ ತಮ್ಮ ಹಕ್ಕೊತ್ತಾಯಗಳ ಈಡೇರಿಕೆ ಘೋಷಣೆಗಳು ಹಾಕುವ ಮೂಲಕ ಆಗ್ರಹಿಸಿದರು.
ಆಶಾ ಕಾರ್ಯಕರ್ತರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಪತ್ರ ರವಾನಿಸಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಸಂಚಾಲಕರಾದ ವಿ.ಜಿ ದೇಸಾಯಿ, ಜಿಲ್ಲಾ ಮುಖಂಡರಾದ ಶಿವಲಿಂಗಮ್ಮ, ನೇತೃತ್ವ ಎಸ್.ಎಮ್ ಶರ್ಮಾ, ರಾಘವೆಂದ್ರ, ಎಮ್,ಜಿ ಮಲ್ಲಮ್ಮ, ಜಯಶ್ರೀ, ಲಕ್ಷ್ಮೀ, ತಾಯಮ್ಮ ಜೇವರ್ಗಿ, ಕವಿತಾ ಅಫಜಲಪೂರ, ನಾಗವೇಣಿ ಚಿಂಚೋಳಿ, ಭಾಗ್ಯಶ್ರೀ ಆಳಂದ, ಸಾವಿತ್ರಿ ಚಿತ್ತಾಪುರ, ನಾಗಮ್ಮ ಸೇಡಂ, ಜ್ಯೊಲ ಶಹಾಬಾದ ಸೇರಿದಂತೆ ಹಲವರು ಇದ್ದರು.