ಚಿಟಗುಪ್ಪ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ: ಪೂಜ್ಯ ಮೈತ್ರಾದೇವಿ ತಾಯಿ ಸರ್ವಾಧ್ಯಕ್ಷರಾಗಿ ಆಯ್ಕೆ

0
22

ಚಿಟಗುಪ್ಪ: ತಾಲೂಕಿನ ಪ್ರಥಮ ಶರಣ ಸಾಹಿತ್ಯ ಪರಿಷತ್ತಿನ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪೂಜ್ಯ ಮೈತ್ರಾದೇವಿ ತಾಯಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಮನ್ನಾಎಖೇಳಿ ಬಸವಮಾಹಾಮಠದ ಎಸ್ ಬಿ ಶೇರಿಕಾರ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಬಸವ ಧರ್ಮ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಸರ್ವರ ಸಮಕ್ಷಮದಲ್ಲಿ ಪೂಜ್ಯ ಮೈತ್ರಾದೇವಿ ತಾಯಿ ಯವರನ್ನು ಶರಣ ಸಾಹಿತ್ಯ ಪರಿಷತ್ತಿನ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿ, ಅಧಿಕೃತವಾಗಿ ಘೋಷಿಸಿ, ಗೌರವ ಸನ್ಮಾನ ಮಾಡಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಪರಮ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ ಸುಮಾರು ವರ್ಷಗಳಿಂದ ಬಸವ ತತ್ವವನ್ನು ಒಪ್ಪಿಕೊಂಡು ತನು ಮನ ಧನದಿಂದ ದುಡಿಯುತ್ತಿರುವ ಈ ಭಾಗದ ಶರಣ ತತ್ವ ಪ್ರಚಾರಕರಾದ ಪೂಜ್ಯ ಮೈತ್ರಾದೇವಿ ತಾಯಿ ಯವರ ಸೇವೆ ಅನನ್ಯ ಮತ್ತು ಅಪಾರವಾಗಿದೆ. ಹಾಗಾಗಿ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಹಾಗೂ ಬಸವಾಭಿಮಾನಿಗಳ ಬಯಕೆಯಂತೆ ಪೂಜ್ಯ ಮೈತ್ರಾದೇವಿ ತಾಯಿ ಯವರು ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಬಹಳ ಸಂತೋಷ ತಂದಿದೆ ಎಂದರು.

ನೇತೃತ್ವ ವಹಿಸಿದ ಪೂಜ್ಯ ಗುರುಬಸವ ಪಟ್ಟಿದ್ದೇವರು ಮಾತನಾಡಿ ಶಿಕ್ಷಣ, ಸಾಮಾಜಿಕ, ದಾಸೋಹ ಸೇವೆಯಲ್ಲಿ ತಮ್ಮದೇ ಆದ ವಿಶಿಷ್ಟ ಸೇವಾ ಚಟುವಟಿಕೆಗಳ ಕೈಂಕರ್ಯಗಳು ಕೈಗೊಳ್ಳುವ ಮೂಲಕ ಹತ್ತು ಹಲವು ವಿನೂತನ ಕಾರ್ಯಕ್ರಮಗಳು ಈ ಭಾಗದಲ್ಲಿ ಕೈಗೊಂಡು, ಬಸವ ತತ್ವ ಬೆಳೆಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೂಜ್ಯ ಮೈತ್ರಾದೇವಿ ತಾಯಿ ಯವರನ್ನು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಆಗಿದ್ದು ನಮ್ಮೆಲ್ಲರಿಗೂ ಗೌರವ ಮತ್ತು ಹೆಮ್ಮೆ ಪಡುವ ಸಂಗತಿಯಾಗಿದೆ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸಂಗಮೇಶ ಎನ್ ಜವಾದಿ ಮಾತನಾಡಿ ಬಸವ ಧರ್ಮ ಸಮಾವೇಶದ ಜೊತೆಗೆ ಪ್ರಥಮ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನವನ್ನು ನಡೆಸಲು ಸರ್ವರೂ ಸಹಕರಿಸುವ ಮೂಲಕ ಶರಣ ತತ್ವ ಬೆಳೆಸುವ ಕೆಲಸ ಮಾಡೋಣ ಎಂದರು.

ಇದೆ ಸಮಯದಲ್ಲಿ ಡಾ.ನಾಗರಾಜ್ ಶೇರಿಕಾರ ರವರನ್ನು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿ, ಅಭಿನಂದಿಸಿ, ಸನ್ಮಾನಿಸಲಾಯಿತು.

ಹಿರಿಯರಾದ ಶಂಕರರಾವ್ ಪಾಟೀಲರು ಕಾರ್ಯಕ್ರಮದ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಸಭೆಯಲ್ಲಿ ಪ್ರಮುಖರಾದ ನಾಗೇಂದ್ರ ವರವಟ್ಟಿ,ಸುಭಾಷ ಖಾಶೆಂಪೂರ, ಸಂಗಪ್ಪ ಮಾಲಿ ಪಾಟೀಲ, ಬಕ್ಕಪ್ಪ ಬಸರಡ್ಡಿ,ಚಂದ್ರಶೇಖರ ತಂಗಾ, ಶಿವರಾಜ ನೀಲಾ,
ಶಿವಕುಮಾರ ಸ್ವಾಮಿ, ರೇವಣ್ಣಸಿದ್ದ ಬಾವಿಗೆ, ವೈಜನಾಥ ಹಾಲಹಳ್ಳಿ, ಭೀಮರಾವ ಪಾಟೀಲ್ ಉಪಸ್ಥಿತರಿದ್ದರು.

ನವಲಿಂಗ ಪಾಟೀಲರು ನಿರೂಪಿಸಿದರು. ಶಿವರಾಜ ಬನ್ನಳ್ಳಿ ವಂದಿಸಿದರು. ಬಸವ ಮಾಹಾಮಠದ ಭಕ್ತರು, ಬಸವಾಭಿಮಾನಿಗಳು, ಪರಿಷತ್ತಿನ ಪದಾಧಿಕಾರಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here