ಕೊರೋನಾ ಸೋಂಕಿನಿಂದ ಕಲಬುರಗಿ ನಗರದ ಮತ್ತಿಬ್ಬರು ನಿಧನ

0
109

ಕಲಬುರಗಿ: ಕೊರೋನಾ‌ ಸೋಂಕಿನಿಂದ ಕಲಬುರಗಿ ನಗರದ 72 ವರ್ಷದ ವೃದ್ಧ ಮತ್ತು 50 ವರ್ಷದ ವ್ಯಕ್ತಿ ಮೃತಪಟ್ಡಿದ್ದು, ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ ‌17ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ಜ್ವರ, ಉಸಿರಾಟ ತೊಂದರೆ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ ಮದಿನಾ ಕಾಲೋನಿಯ 72 ವರ್ಷದ ವೃದ್ಧ (P-9833) ಕಳೆದ ಜೂನ್ 23 ರಂದು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಜೂ.24 ರಂದು ಕೊರೋನಾ ಸೊಂಕು ಕಂಡುಬಂದು ಜೂ. 26 ರಂದು ನಿಧನ ಹೊಂದಿರುತ್ತಾರೆ.

Contact Your\'s Advertisement; 9902492681

ಇನ್ನು ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಗಾಜಿಪೂರ ಪ್ರದೇಶದ 50 ವರ್ಷದ ಪುರುಷ (P-11278) ಜೂನ್ 25 ರಂದು ಇಲ್ಲಿನ ಜಿಮ್ಸ್ ನಲ್ಲಿ ದಾಖಲಾಗಿ ಜೂ.26 ರಂದು ನಿಧನ ಹೊಂದಿದ್ದು, ಶನಿವಾರ ಇವರಿಗೆ ಕೋವಿಡ್-19 ದೃಢವಾಗಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here