ರಾಷ್ಟ್ರೀಯ ಚಾಂಪಿಯನ್ ಶಿಪ್‍ಗಳಲ್ಲಿ ಆರು ಜನ ಕರ್ನಾಟಕ ರಾಜ್ಯ ಪ್ರತಿನಿಧಿಗಳಾಗಿ ಭಾಗಿ

0
88

ಕಲಬುರಗಿ: ಹ್ಯಾಂಡ್‍ಬಾಲ್ ಫೌಂಡೇಶನ್ ಆಫ್ ಇಂಡಿಯಾ ಅವರು ವಿವಿಧ ವಯೋಮಾನಗಳೆಯಲ್ಲಿ ಆಯೋಜಿಸಿದ ರಾಷ್ಟ್ರೀಯ ಚಾಂಪಿಯನ್ ಶಿಪ್‍ಗಳಲ್ಲಿ ಕಲಬುರಗಿ ಜಿಲ್ಲೆಯ ಹ್ಯಾಂಡ್‍ಬಾಲ್ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ.

ಮೊದಲಿಗೆ ಆಂಧ್ರಪ್ರದೇಶದ ನಂದ್ಯಾಳ್‍ನಲ್ಲಿ ನಡೆದ 51ನೇ ಹಿರಿಯ ರಾಷ್ಟ್ರೀಯ ಮಹಿಳಾ ಹ್ಯಾಂಡ್‍ಬಾಲ್ ಚಾಂಪಿಯನ ಶಿಪ ನಲ್ಲಿ ಅಪೂರ್ವ ಪಾಟೀಲ್ ಮತ್ತು ಅಶ್ಮಿತಾ ಇಂಗನಕರ್ ಎರಡನೇದಾಗಿ ಬಿಹಾರ್ ರಾಜ್ಯದ ಚಾಪ್ರಾನಗರದ ಸರಾಂನಲ್ಲಿ ನಡೆದ 37ನೇ ಸಬ್ ಜೂನಿಯರ್ ಗಲ್ರ್ಸ್ ಚಾಂಪಿಯನ್ಶಿಪ್ ನಲ್ಲಿ ಶ್ರೇಯಾ ಆನಂದ್ ಮತ್ತು ಲಕ್ಷ್ಮಿ ಆರ್ ಡಿ 3ನೇದಾಗಿ ಗುಜರಾತ್ ರಾಜ್ಯದ ಅಹ್ಮದಾಬಾದ್ ನಲ್ಲಿ ನಡೆದ 51ನೇ ಹಿರಿಯ ಪುರುಷರ ರಾಷ್ಟ್ರೀಯ ಹ್ಯಾಂಡ್‍ಬಾಲ್ ಚಾಂಪಿಯನ ಶಿಪ್ ನಲ್ಲಿ ಉಮೇಶ್ ಶರ್ಮಾ ಮತ್ತು ಶಶಾಂಕ್ ಎಸ್ ಪಾಟೀಲ್ ಅವರು ಭಾಗವಹಿಸಿ ಆರು ಜನ ಕರ್ನಾಟಕ ರಾಜ್ಯ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.

Contact Your\'s Advertisement; 9902492681

ಜಿಲ್ಲಾ ಹ್ಯಾಂಡ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಈರಣ್ಣ ಪಾಟೀಲ್ ಜಳಕಿ, ಜಿಲ್ಲಾ ಒಲಂಪಿಕ್ಸ್ ಅಧ್ಯಕ್ಷ ಶಶಿಲ್ ಜಿ.ನಮೋಶಿ, ಪೆÇಲೀಸ್ ತರಬೇತಿ ಕೇಂದ್ರ ನಾಗನಹಳ್ಳಿ ಪ್ರಾಚಾರ್ಯರು ಹಾಗೂ ಜಿಲ್ಲಾ ಒಲಿಂಪಿಕ ಅಸೋಸಿಯೇಷನ್ ಮುಖ್ಯ ಸಲಹೆಗಾರರಾದ ಯಡಾ ಮಾರ್ಟಿನ್, ಜಿಲ್ಲಾ ಸರ್ಕಾರಿ ನೌಕರ ಸಂಘ ಅಧ್ಯಕ್ಷ ರಾಜು ಲೆಂಗಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ ಗಾಯತ್ರಿ, ಪ್ರವೀಣ್ ಪುಣೆ, ಶೀಲಾ ದೇವಿ, ಅಶೋಕ್ ನಿಂಬೂರ್, ಸಂಜಯ್ ಬಾಣದ್ ಇವರು ಶುಭ ಹಾರೈಸಿದ್ದಾರೆ ಎಂದು ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಮುಖ್ಯ ಕಾರ್ಯದರ್ಶಿಯಾದ ದತ್ತಾತ್ರೇಯ ಕೆ ಜೆವರ್ಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here