ಸುರಪುರ: ಈಗಾಗಲೇ ರಾಜ್ಯಾದ್ಯಂತ ಪ್ರವಾಹ ಮತ್ತು ಮಹಾ ಮಳೆಯಿಂದಾಗಿ ಸಾವಿರಾರು ಕುಟುಂಬಗಳು ಸಂತ್ರಸ್ತಗೊಂಡಿದ್ದು,ಸರಕಾರ ಸರಿಯಾದ ರೀತಿಯಲ್ಲಿ ಪರಿಹಾರ ಕೈಗೊಳ್ಳದೆ ನಿರ್ಲಕ್ಷ್ಯತೆ ವಹಿಸಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಬೇಸರ ವ್ಯಕ್ತಪಡಿಸಿದರು.
ಕೃಷ್ಣಾ ಪ್ರವಾಹದಿಂದ ಹಾನಿಗೊಳಗಾದ ತಾಲ್ಲೂಕಿನ ಶೆಳ್ಳಿಗಿ,ತಿಂಥಣಿ,ದೇವಾಪುರ ಮತ್ತಿತರೆ ಸ್ಥಳಗಳಿಗೆ ಕೆಪಿಸಿಸಿ ನೆರೆ ವೀಕ್ಷಣೆ ತಂಡದೊಂದಿಗೆ ಆಗಮಿಸಿದ ಅವರು ಮಾತನಾಡಿ,ಸರಕಾರ ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ತ್ವರಿತ ನೆರವಿನ ಹಸ್ತ ಚಾಚಬೇಕಿತ್ತು.ಆದರೆ ಸಂಪುಟವಿಲ್ಲದೆ ಬರೀ ಮುಖ್ಯಮಂತ್ರಿ ಮಾತ್ರ ಕಾಟಾಚರಕ್ಕೆ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ ವಿನಃ ಸಂತ್ರಸ್ತರಲ್ಲಿ ಯಾವುದೆ ಧೈಂii ತುಂಬುವ ಕೆಲಸ ಮಾಡುತ್ತಿಲ್ಲ.ಸರಕಾರ ಈ ಸಂತ್ರಸ್ತರಿಗೆ ಶಾಸ್ವತ ಪರಿಹಾರ ಕಲ್ಪಿಸಬೇಕು. ಕೆಪಿಸಿಸಿ ಮೂರು ದಿನಗಳ ಕಾಲ ರಾಜ್ಯಾದ್ಯಂತ ಸಮೀಕ್ಷೆ ನಡೆಸಿ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಿ ನಂತರ ಸರಕಾರ ಕೂಡಲೆ ನೆರವಿಗೆ ಧಾವಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದರು.
ಮಾಜಿ ರಾಯಚೂರು ಸಂಸದ ಬಿ.ವಿ.ನಾಯಕ ಮಾತನಾಡಿ,ಕೇಂದ್ರ ಸರಕಾರ ರಾಜ್ಯದಲ್ಲಿನ ನೆರೆ ಪರಸ್ಥಿತಿ ನಿರ್ವಹಣೆಗೆ ಕೇವಲೆ ಇನ್ನೂರು ಕೋಟಿ ಬಿಡುಗಡೆ ಮಾಡಿರುವುದಾಗಿ ತಿಳಿದು ಬಂದಿದೆ.ಆದರೆ ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಪಾಸ್ತಿ ಮತ್ತು ರೈತರ ಬೆಳೆಗಳು ನಷ್ಟಗೊಂಡಿದ್ದು,ಕೇಂದ್ರ ಹೆಚ್ಚಿನ ನೆರವು ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ,ಎ.ವಸಂತಕುಮಾರ,ಕೆಪಿಸಿಸಿ ಯಾದಗಿರಿ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್,ಮುಖಂಡರಾದ ವಿಠ್ಠಲ ಯಾದವ್,ರಾಜಾ ವೇಣುಗೋಪಾಲ ನಾಯಕ,ಸೂಲಪ್ಪ ಕಮತಗಿ,ಅಬ್ದುಲ ಗಫೂರ ನಗನೂರಿ,ಅಬ್ದುಲ್ ಅಲೀಂ ಗೋಗಿ,ಪ್ರಕಾಶ ಗುತ್ತೇದಾರ,ನಿಂಗಣ್ಣ ಬಾದ್ಯಾಪುರ,ನಿಂಗರಾಜ ಬಾಚಿಮಟ್ಟಿ,ಮುದಿಗೌಡ ಕುಪ್ಪಿ,ಹಣಮಂತ್ರಾಯ ಮಕಾಶಿ ಸೇರಿದಂತೆ ಅನೇಕರಿದ್ದರು.