ಸುರಪುರ: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಒಂದು ದಿನದ ಕಾರ್ಯಗಾರ ಆಯೋಜಿಸಲಾಗಿತ್ತು. ಮಹಾವಿದ್ಯಾಲಯದ ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ನಿಷ್ಠಿಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕು. ತೇಜಸ್ವಿನಿ ಆಗರಗಿ ಟೆಕ್ನಿಕಲ್ ರೆಕ್ರೂಟರ್, ಮೈಂಡ್ ಸಾಲ್ವಿಟ್ ಪ್ರೈವೇಟ್ ಲಿಮಿಟೆಡ್ ಕಲಬುರ್ಗಿಯವರು ಐಟಿ ಸೊಲ್ಯೂಷನ್, ಸಾಫ್ಟ್ವೇರ್ ಟೆಸ್ಟಿಂಗ್ ಇನ್ನು ಮುಂತಾದ ಟೆಕ್ನಿಕಲ್ ಮತ್ತು ಇಂಜಿನಿಯರ್ ಬಗ್ಗೆ ಬಹಳ ದಿರ್ಘಕಾಲ ಇಂಜಿನಿಯರಿಂಗ್ ಮತ್ತು ಎಂಬಿಎ ವಿದ್ಯಾರ್ಥಿಗಳ ಜೊತೆ ಚರ್ಚಿಸಿದರು ಮತ್ತು ಐಟಿ ಸ್ಕಿಲ್ಸ್ & ಟೆಕ್ನಿಕಲ್ ಸ್ಕಿಲ್ಸ್ ಕಲಿಯುವುದು ಮತ್ತು ಅಳವಡಿಸಿಕೊಳ್ಳುವ ವಿಧಾನ ಜೊತೆಗೆ ಸಾಫ್ಟ್ ಸ್ಕಿಲ್ಸ್ ಬಗ್ಗೆ ಬಹಳ ಹಚ್ಚುಕಟ್ಟಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಶರಣಬಸಪ್ಪ ಸಾಲಿಯವರು ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿಗಳು ಇನ್ನೂ ಹೆಚ್ಚು ಹೆಚ್ಚು ಸಂಶೋಧನಾ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಹಾಗೂ ಹೊಸ ಹೊಸ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳಬೇಕು ಹಾಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತೇವೆ ಎಂದು ಭರವಸೆ ನೀಡುತ್ತಾ ಪ್ರೇರಣೆ ನೀಡಿದರು.
ಪರೀಕ್ಷಾ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕ್ ಪಾಟೀಲ, ತರಬೇತಿ ಮತ್ತು ಉದ್ಯೋಗ ಅಧಿಕಾರಿಗಳಾದ ಪ್ರೊ. ಮಂಜುನಾಥ ಯಳವಾರ ಹಾಗೂ ಎಲ್ಲಾ ಭಾಗದ ಮುಖ್ಯಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕು.ಪಲ್ಲವಿ ಮತ್ತು ಕು.ನಿತಾ ನಿರೂಪಿಸಿದರು.