ಸಂತ್ರಸ್ತರ ಬೇಡಿಕೆಗೆ ಆಗ್ರಹಿಸಿ ಬೃಹತ್ ವಹಿಕಲ್ ಜಾಥಾ

0
30

ಕಲಬುರಗಿ: ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರೀಯಾ ಸಮಿತಿ ಮತ್ತು ಕಾರಂಜಾ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿ ಸೇರಿ, ಕಾರಂಜ ಸಂತ್ರಸ್ತರ ಬೇಡಿಕೆಗಳ ಒತ್ತಾಯಿಸಿ ಇದೇ ಜನವರಿ 5ನೇ ತಾರೀಖು ಬೀದರ ಬಂದ್ ಕರೆಗೆ ಎಚ್ಚೆತ್ತ ಜಿಲ್ಲಾಡಳಿತ ಕಳೆದ ಎರಡು ದಿನಗಳಿಂದ ರೈತರ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಬಂದ್ ಕರೆಯನ್ನು ಹಿಂತೆಗೆದುಕೊಳ್ಳಲು ವಿನಂತಿಸಿದರು. ಈ ಹೋರಾಟದ ಎಲ್ಲಾ ಮುಖಂಡರು ಪರಸ್ಪರ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು.

ಜಿಲ್ಲಾಧಿಕರಿಗಳಾದ, ಗೋವಿಂದ್ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಡಿ. ಕಿಶೋರ್ ಬಾಬು ಅವರು ಸಂತ್ರಸ್ತರ ಸತ್ಯಾಗ್ರಹದ ಸ್ಥಳಕ್ಕೆ ಬಂದು ಬೀದರ್ ಬಂದ್ ಕರೆ ಕೈಬಿಡಬೇಕೆಂದು ಬಹಿರಂಗವಾಗಿ ವಿನಂತಿಸಿದರು. ಅವರ ವಿನಂತಿಗೆ ಪರಿಗಣಿಸಿ ಹೋರಾಟದ ಮುಂದಾಳತ್ವ ವಹಿಸಿರುವ ಹಿರಿಯ ಹೋರಾಟಗಾರರಾದ ಲಕ್ಷ್ಮಣ್ ದಸ್ತಿ ಅವರು ಎಲ್ಲರ ಪರವಾಗಿ ಬಂದ್ ಕರೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದು, ಅದೇ ದಿನ ಅಂದರೆ ಜನವರಿ 5 ನೇ ತಾರೀಖು, ಎಲ್ಲ 28 ಹಳ್ಳಿಯ ಸಂತ್ರಸ್ತರು, ಸಂಘ ಸಂಸ್ಥಗಳೊಡನೆ ಸೇರಿ ಸಹಸ್ರ ಸಂಖ್ಯೆಯ ಬೃಹತ್ ವಾಹನಗಳ ಜಾಥಾ ಆಯೋಜಿಸಲು ನಿರ್ಧಾರ ತೆಗೆದುಕೊಂಡು ಘೋಷಣೆ ಮಾಡಲಾಯಿತು.

Contact Your\'s Advertisement; 9902492681

ಅದರಂತೆ ಜನೆವರಿ 5 ರಂದು ಸಹಸ್ರ ಸಹಸ್ರ ಆಯಾ ವಾಹನಗಳ ಬೃಹತ್ ವಾಹನ ಜಾಥಾ ನಡೆಸಲಾಗುವುದು. ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರೀಯಾ ಸಮಿತಿ ಮುಖಂಡರು ಮತ್ತು ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿ ಅವರ ನೇತೃತ್ವದಲ್ಲಿ ಆಯಾ ಪಕ್ಷಗಳ ಸಂಘ, ಸಂಸ್ಥೆಗಳ, ಮುಖಂಡರ ಸಾಮೂಹಿಕ ನಾಯಕತ್ವದಲ್ಲಿ ಈ ಹೋರಾಟದ ಸ್ವರೂಪ ಬದಲಾಗಿದ್ದು, ಬರುವ ಜನೆವರಿ 5 ರಂದು ಗುರುವಾರ, ಬೆಳಿಗ್ಗೆ 9.00 ಗಂಟೆಗೆ 28 ಹಳ್ಳಿಯ ಸಂತ್ರಸ್ತರು ತಮ್ಮ ತಮ್ಮ ವಾಹನಗಳ ಜೊತೆ ನಗರದ ನೆಹರೂ ಕ್ರೀಡಾಂಗಣದ ಹೈತ್ತಿರ ಬರುವ ಸಾಯಿ ಸ್ಕೂಲ್ ಗ್ರೌಂಡ್‍ದಲ್ಲಿ ಸೇರಿ, ಬೀದರ ನಗರದ ಕನ್ನಡಾಂಬೆ – ರೋಟರಿ ವೃತ್ತ, ಮಡಿವಾಳ ಸರ್ಕಲ್, ಹೊಸ ಬಸ ನಿಲ್ದಾಣ, ಶಿವನಗರ ಟ್ರಾಫಿಕ ಸಿಗ್ನಲ್, ಪಾಮ್ ರೋಡ್, ರೈಲ್ವೆ ಅಂಡರ್ಪಾಸ್, ನ್ಯೂ ಆದರ್ಶ ಕಾಲೊನಿ, ಚಿದ್ರಿ ರಿಂಗ್ರೋಡ್, ಮೈಲೂರು, ಗುಂಪಾ ರಸ್ತೆ, ಭೂಮಾರೆಡ್ಡಿ ಕಾಲೇಜ್, ಮೈಲೂರ ಕ್ರಾಸ್, ಬೋಮಗೊಂಡೆಶ್ವರ ವೃತ್ತ, ಬಸವೇಶ್ವರ ವೃತ್ತ, ನಯಾಕಮಾನ್, ಚೌಬಾರ, ಗವಾನ್ವಿತ, ಉಸ್ಮಾನ ಗಂಜ ಗಂಜ, ಶಾಹ ಗಂಜದಿಂದ ಅಂಬೇಡ್ಕರ ವೃತ್ತದಲ್ಲಿ ಕೆಲ ಕ್ಷಣ ವಾಹನಗಳ ಸರಪಳಿ ನಡೆಸಿ ನಂತರ ಶಿವಾಜಿ ವೃತ್ತದ ಬಳಿ ಸಂತ್ರಸ್ತರ ಸತ್ಯಾಗ್ರಹ ಸ್ಥಳದ ಎದುರಿನ ರಸ್ತೆಯಲ್ಲಿ ಭಾರಿ ಸಭೆ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಕಾರಂಜಾ ಸಂತ್ರಸ್ತ ಹೋರಾಟ ಸಮಿತಿಯ ಅಧ್ಯಕ್ಷರು ಮತ್ತು ಬೀದರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿಯ ಕ್ರಿಯಾ ಸದಸ್ಯರಾದ ಚಂದ್ರಶೇಕರ್ ಪಾಟೀಲ್ ಹೋಚಕನಳ್ಳಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲು ಎಲ್ಲ ಸಂಘ, ಸಂಸ್ಥೆ, ಸಂಘಟನೆಗಳು, ಆಯಾ ಪಕ್ಷದ ಮುಖಂಡರು, ಬೆಂಬಲ ವ್ಯಕ್ತಪಡಿಸಿ, ಹೋರಾಟದಲ್ಲಿ ಭಾಗವಹಿಸಲು ತಿಳಿಸಿರುತ್ತಾರೆ.

ಈ ವಾಹನಗಳ ಜಾಥಾಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಸಮಸ್ತ ಜನತೆ ಭಾಗವಹಿಸಿ ಈ ಜಾಥಾವನ್ನು ಯಶಸ್ವಿಗೊಳಿಸಲು ಮನವಿ ಮಾಡಲಾಯಿತು.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸತ್ಯಾಗ್ರಹಕ್ಕೆ ಸ್ಥಳಕ್ಕೆ ಆಗಮಿಸಿದ ಸಭೆಯ ಸಂದರ್ಭದಲ್ಲಿ ಸಭೆಯಲ್ಲಿ 28 ಹಳ್ಳಿಯ ಪ್ರತಿನಿಧಿಗಳ ಜೊತೆ, ದಯಾನಂದ ಸ್ವಾಮಿ, ವಿನಯ ಮಾಳ್ಗೆ, ಅನತರೆಡ್ಡಿ, ರೋಹನಕುಮಾರ್,ಸೋಮನಾಥ ಮುದೊಳ್ಕರ್, ಶಿವ ಕುಮಾರ್ ತುಂಗಾ, ಮಹೇಶ ಗೋರನಾಳಕರ್, ಹಣ್ಮು ಪಾಜಿ, ಅಭಿಷೇಕ ಮಠಪತಿ, ಅನಿಲ ಜಾಧವ್, ಸಿದ್ದಪ್ಪ ಡಾಕುಳಗಿ, ಮಹೇಶ ಮಡಕಿ, ಪ್ರದೀಪ ನಾಟೇಕರ್ ಸೇರಿದಂತೆ ನೂರಾರು ಸಂತ್ರಸ್ತ ರೈತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here