ಉದ್ಯಮಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕರಾದ ಅರವಿಂದ ಲಿಂಬಾವಳಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಅಲ್ಲಿನ ಪೆÇಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅವರ ಪಾತ್ರವೇನು ಎಂಬುದು ಗೊತ್ತಾದರೆ ಕ್ರಮ ಕೈಗೊಳ್ಳಲಾಗುವುದು. ಕೇಸ್ ದಾಖಲಾಗಿದೆ,ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ.- ಅಲೋಕಕುಮಾರ, ಎಡಿಜಿಪಿ.
ಕಲಬುರಗಿ: ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದೆಲ್ಲಡೆ ರೌಡಿಗಳು, ಸಮಾಜಘಾತುಕ ಶಕ್ತಿಗಳ ಮೇಲೆ ಈಗಿನಿಂದಲೇ ನಿಗಾ ಇರಿಸಲು ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕಕುಮಾರ ತಿಳಿಸಿದರು.
ಬುಧವಾರ ನಗರದ ಪೆÇಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿದ ಬಳಿಕ ಬೆಂಗಳೂರಿಗೆ ತೆರಳುವ ಮುನ್ನ ಪತ್ರಕರ್ತರ ಜತೆಗೆ ಮಾತನಾಡಿ, ರಾಜಕೀಯ ಪಕ್ಷಗಳ ಜತೆಗೆ ಸಂಬಂಧ ಹೊಂದಿದ ಮತ್ತು ಮೇಲಿಂದ ಮೇಲೆ ದುಷ್ಕøತ್ಯಗಳಲ್ಲಿ ಭಾಗಿಯಾಗಿರುವ ರೌಡಿಗಳ ಬಗ್ಗೆ ಹದ್ದಿನ ಕಣ್ಣು ಇಡಲಾಗುವುದು. ಅವರ ಪ್ರತಿಯೊಂದು ಚಟುವಟಿಕೆಗಳನ್ನು ಗಮನಿಸಲಾಗುವುದು ಎಂದರು.
ಐದಕ್ಕಿಂತಲೂ ಹೆಚ್ಚಿನ ಕೇಸ್‍ಗಳು ಕೆಲ ತಿಂಗಳಲ್ಲಿ ದಾಖಲಾಗಿದ್ದರೆ, ಅಂತಹ ರೌಡಿಗಳನ್ನು ಗುರುತಿಸಿ ಗಡಿಪಾರು ಮಾಡಲಾಗುವುದು. ಹೆಚ್ಚಿನ ಕೇಸ್‍ಗಳಿದ್ದು ಮೇಲಿಂದ ಮೇಲೆ ಜನರಿಗೆ ತೊಂದರೆ ನೀಡುವ ಕೆಲಸ ಮಾಡುತ್ತಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಗುಂಡಾ ಕಾಯ್ದೆಯನ್ನು ಬಳಕೆ ಮಾಡಿ ಅವರನ್ನು ಜೈಲಿನಲ್ಲಿ ಇಲ್ಲವೇ ಆಯಾ ಜಿಲ್ಲೆಯಿಂದ ಹೊರಗಿಡುವಂತೆ ಮಾಡಲಾಗುವುದು ಎಂದು ಅಲೋಕಕುಮಾರ ಹೇಳಿದರು.
ಐದು ವರ್ಷಗಳಿಂದ ಹೆಚ್ಚು ಸಕ್ರಿಯವಾಗಿರುವ ರೌಡಿಗಳನ್ನು ಮಟ್ಟ ಹಾಕಲಾಗುವುದು. ಪ್ರತಿಯೊಂದು ಸೂಕ್ಷ್ಮ ಪ್ರದೇಶದಲ್ಲಿ ಸಿಬ್ಬಂದಿ ಮೇಲಿಂದ ಮೇಲೆ ತಿರುಗಾಡಿ ಸಮಾಜಘಾತುಕ ಚಟುವಟಿಕೆಗಳನ್ನು ನಡೆಸುವ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಸಾಮಾಜಿಕ ಜಾಲ ತಾಣಗಳನ್ನು ಗಮನಿಸಲಾಗುವುದು. ಇದರಿಂದಾಗಿ ಅನಗತ್ಯ ಸುಳ್ಳು ವಿಷಯಗಳನ್ನು ಹರಡಿಸುವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುಲಿದೆ ಎಂದು ತಿಳಿಸಿದರು.
ಗನ್ ಲೈಸನ್ಸ್ ಪರಿಶೀಲನೆ: ಕಲಬುರಗಿ ಸೇರಿದಂತೆ ರಾಜ್ಯದೆಲ್ಲಡೆ ಕೆಲವರು ಅನಗತ್ಯವಾಗಿ ಗನ್ ಲೈಸನ್ಸ್ ಹೊಂದಿದ್ದಾರೆ. ಅಲ್ಲದೆ ಅವರ ತಂದೆ ಇನ್ನಿತರರ ಹೆಸರಿನಲ್ಲಿರುವ ಪರವಾನಿಗೆಗಳನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಡಲು ಹಲವಾರು ಅರ್ಜಿಗಳು ಬಂದಿವೆ, ಅಂತಹ ಎಲ್ಲವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಎಸ್ಪಿ ಮತ್ತು ಆಯುಕ್ತರಿಗೆ ಸೂಚಿಸಲಾಗಿದೆ. ಅಲ್ಲದೆ ಎಲ್ಲ ಲೈಸನ್ಸ್ಗಳನ್ನು ಪರಿಶೀಲನೆ ಮಾಡುವ ಕೆಲಸ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಹೇಳಿದರು.
ಕರಾವಳಿ ಜಿಲ್ಲೆಯಲ್ಲಿ ನೈತಿಕ ಪೆÇಲೀಸ್‍ಗಿರಿ ಮಾಡುವ ಸಂಖ್ಯೆ ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಅಂಹತ ಎಲ್ಲ ವ್ಯಕ್ತಿಗಳು ಮತ್ತು ಸಂಘಟನೆಗಳ ಮೇಲೆ ಕಣ್ಣಿಡಲಾಗಿದೆ. ಈಚೆಗೆ ಅಲ್ಲೊಂದು ಕೊಲೆ ನಡೆದ್ದರಿಂದ ಸೂಕ್ಷ್ಮ ವಾತಾವರಣ ಉಂಟಾಗಿತ್ತು. ಹೀಗಾಗಿ ಶೀಘ್ರದಲ್ಲಿಯೇ ಮಂಗಳೂರಿಗೆ ತಾವು ಭೇಟಿ ನೀಡುವುದಾಗಿ ಅಲೋಕಕುಮಾರ ತಿಳಿಸಿದರು.
ಇದಕ್ಕೂ ಮುನ್ನ ಪೆÇಲೀಸ್ ಅಧಿಕಾರಿಗಳ ಸಭೆಯನ್ನು ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಈಶಾನ್ಯ ವಲಯ ಐಜಿಪಿ ಅನುಪಮ್ ಅಗರವಾಲ್, ಪೆÇಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಎಸ್ಪಿ ಇಶಾ ಪಂತ್, ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಹಿರಿಯ ಎಸಿಪಿ ದೀಪನ್ ಎಂ.ಎನ್, ಬೀದರ್ ಎಸ್ಪಿ ಡಿ.ಕಿಶೋರಬಾಬು, ಯಾದಗಿರಿ ಎಸ್ಪಿ ವೇದಮೂರ್ತಿ, ಕ್ರೈಂ ಡಿಸಿಪಿ ಶ್ರೀಕಾಂತ ಕಟ್ಟಿಮನಿ, ಹೆಚ್ಚುವರಿ ಎಸ್ಪಿಗಳಾದ ಶ್ರೀನಿಧಿ, ಮಹೇಶ ಮೇಘಣ್ಣನವರ, ಎಸಿಪಿಗಳಾದ ಸುಧಾ ಆದಿ, ಎಸ್.ವಿ.ಪಾಟೀಲ್, ಜೆ.ಎಚ್.ಇನಾಮದಾರ ಇತರರಿದ್ದರು.