ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆ ಆಯುಕ್ತರಿಗೆ ಮನವಿ

0
15

ಕಲಬುರಗಿ: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ನಗರದ ಟೌನ್ ಮಹಾತ್ಮಾಗಾಂಧೀಜಿ ಹಾಲ್ ಅವರ ಮುಂದಿರುವ ಪುತ್ಥಳಿಯ ಪಕ್ಕದಲ್ಲಿ ಕೋಲಿ ಸಮಾಜದ ಗುರುಗಳಾದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿ ಶ್ರೀ ಅಂಬಿಗರ ಸೇವಾ ದಳದ ಕಾರ್ಯಕರ್ತರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಪಾಲಿಕೆ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಕಳೆದ 2017 ರಿಂದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗಾಗಿ ಕಳೆದ 2017ರಿಂದ ಪ್ರತಿಭಟನೆ ಹಾಗೂ ಮನವಿಗಳನ್ನು ಸಲ್ಲಿಸಲಾಗಿತ್ತು. ಅದರ ಫಲವಾಗಿ ಅಂದಿನ ಮಹಾಪೌರರು ಸ್ಪಂದಿಸಿ 2019ರ ಫೆಬ್ರವರಿ 6ರಂದು ಜರುಗಿದ ಮಹಾನಗರ ಪಾಲಿಕೆಯ ಕರ, ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ ಸಭೆಯಲ್ಲಿ ಹಣಕಾಸು ಬಜೆಟ್‍ನಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಹಣ ಮೀಸಲಿಟ್ಟಿದ್ದರು ಎಂದರು.

Contact Your\'s Advertisement; 9902492681

2019ರ ಮಾರ್ಚ್ 7ರಂದು ಮಹಾಪೌರರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಟೌನ್ ಹಾಲ್ (ಇಂದಿರಾ ಸ್ಮಾರಕ ಭವನ) ಬಳಿ ಇರುವ ಮಹಾತ್ಮಾಗಾಂಧೀಜಿ ಮೂರ್ತಿ ಪಕ್ಕದಲ್ಲಿ ಪ್ರತಿಷ್ಠಾಪಿಸಲು ಜಾಗವನ್ನು ಸಹ ನಿಗದಿಪಡಿಸಲಾಗಿತ್ತು. 2020ರ ಕೋವಿಡ್ ಸಂದರ್ಭದಲ್ಲಿ ಸದರಿ ವಿಷಯವನ್ನು ಸ್ಥಗಿತಗೊಳಿಸಲಾಗಿತ್ತು. ತದನಂತರ ಮಹಾನಗರ ಪಾಲಿಕೆಯ ಅವಧಿಯು ಮುಕ್ತಾಯ ಗೊಂಡಿದ್ದ ರಿಂದ ಸದರಿ ವಿಷಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಮೂರ್ತಿ ಪ್ರತಿಷ್ಠಾಪನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸಂಘಟನೆಯ ಅಧ್ಯಕ್ಷ ಸಂತೋಷ್ ಎಸ್. ಬೆಣ್ಣೂರ್ ಹಾಗೂ ಸಂದೇಶ ಟಿ.ಕಮಕನೂರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶರಣು ಕಿರಸಾವಳಗಿ, ರಾಜು ಸೊನ್ನ, ಆನಂದ್ ಕದರಗಿ, ಮಹಾತೇಶ್ ಹರವಾಳ, ಮಲ್ಲು ಗಾಜಿಪುರ, ಶರಣು ಶಿವಾಜಿನಗರ, ವೆಂಕಟೇಶ ಮರತೂರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here