ಪುಣ್ಯಕೋಟಿಗೆ ಕಲಬುರಗಿ ನೌಕರರಿಂದ 1.17 ಕೋಟಿ‌ ವಂತಿಗೆ: ರಾಜು ಲೇಂಗಟಿ

0
115

ಕಲಬುರಗಿ: ರಾಜ್ಯ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆ ಸಾಕಾರಕ್ಕೆ ಕಲಬುರಗಿ ಜಿಲ್ಲೆಯ ಸರ್ಕಾರಿ ನೌಕರರು 1.17 ಕೋಟಿ ರೂ. ವಂತಿಗೆ ನೀಡುವ ಮೂಲಕ ಗೋಮಾತೆಯ ಸೇವೆಗೆ ಕೈಜೋಡಿಸಿದ್ದಕ್ಕಾಗಿ ಸಮಸ್ತ ನೌಕರ ಬಂಧುಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಧನ್ಯವಾದ ತಿಳಿಸಿದ್ದಾರೆ.

ದೇಶದ‌ ಸಂಸ್ಕೃತಿ ಮತ್ತು ಸಂಪತ್ತಿನ‌ ಪ್ರತೀಕವಾಗಿರುವ ಗೋವುಗಳ ಸಂತತಿ ಸಂರಕ್ಷಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಣ್ಯಕೋಟಿ ಯೋಜನೆ ಜಾರಿಗೆ ತಂದು, ಗೋವುಗಳ ದತ್ತು ಪಡೆಯಲು ರಾಜ್ಯದ ಸಮಸ್ತ ಜನತೆಗೆ ಕರೆ ನೀಡಿದರು.

Contact Your\'s Advertisement; 9902492681

ಮುಖ್ಯಮಂತ್ರಿಗಳ ಕರೆಗೆ ಓಗೊಟ್ಟು ಕಲಬುರಗಿ ಜಿಲ್ಲೆಯ ಸಮಸ್ತ ಸರ್ಕಾರಿ ಅಧಿಕಾರಿಗಳು-ನೌಕರರು ಕಳೆದ ನವೆಂಬರ್ ಮತ್ತು ಡಿಸೆಂಬರ್ ಮಾಹೆಯ ವೇತನದಿಂದ ನಿರ್ದಿಷ್ಟ ಮೊತ್ತ ಕಡಿತ ಮಾಡಿದ್ದು, ಒಟ್ಟಾರೆ 1,17,73,400 ರೂ. ವಂತಿಗೆ‌ ನೀಡುವ‌ ಮೂಲಕ ಯೋಜನೆಯ ಸುಗಮ‌ ಅನುಷ್ಟಾನಕ್ಕೆ ನೆರವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಲೂಕುವಾರು ನೌಕರರ ವಂತಿಗೆ ಮೊತ್ತ;

  • ಕಲಬುರಗಿ-49,61,700 ರೂ.,
  • ಆಳಂದ-12,09,600 ರೂ.,
  • ಜೇವರ್ಗಿ-10,00,400 ರೂ.,
  • ಚಿತ್ತಾಪೂರ-9,27,400.,
  • ಸೇಡಂ-8,96,000 ರೂ.,
  • ಅಫಜಲಪೂರ-8,68,400 ರೂ., 
  • ಚಿಂಚೋಳಿ-8,16,100 ರೂ.,
  • ಕಮಲಾಪೂರ-3,49,600 ರೂ., 
  • ಕಾಳಗಿ-3,45,000 ರೂ.,
  • ಯಡ್ರಾಮಿ-2,18,800 ರೂ.
  • ಶಹಾಬಾದ-1,80,400 ರೂ. ವಂತಿಗೆ ನೀಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here