ವನಿತೆ ಉಚಿತ ಕೌಶಲ್ಯ ತರಬೇತಿ ಕೇಂದ್ರ ಉದ್ಘಾಟನೆ

0
19

ಕಲಬುರಗಿ; ಚಂದು ಪಾಟೀಲ ಫೌಂಡೇಶನ್ (ರಿ) ವತಿಯಿಂದ ಉತ್ತರ ಮತ ಕ್ಷೇತ್ರದ ಪ್ರಗತಿ ಕಾಲೊನಿಯಲ್ಲಿ ಕ್ರೇಡಲ ಅಧ್ಯಕ್ಷ ಚಂದು ಪಾಟೀಲ ಅವರು ವನಿತೆ ಉಚಿತ ಕೌಶಲ್ಯ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿ ಸ್ತ್ರೀ ಸಬಲೀಕರಣದ ಉದ್ದೇಶದೊಂದಿಗೆ ಕಲಬುರಗಿ ಉತ್ತರ ಕ್ಷೇತ್ರದ ಪ್ರಗತಿ ಕಾಲನಿಯಲ್ಲಿ ಮಹಿಳೆಯರ ಸ್ವಾವಲಂಭಿ ಜೀವನಕ್ಕಾಗಿ ಚಂದು ಪಾಟೀಲ್ ಫೌಂಡೇಶನ್‍ದಿಂದ ಆರಂಭಿಸಿದ ಉಚಿತ ಕೌಶಲ ತರಬೇತಿ ಪ್ರಾರಂಭಿಸಿದ್ದು. ಕ್ಷೇತ್ರದಲ್ಲಿ ಸ್ತ್ರೀ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಗೆ ಮಹಿಳೆಯರಿಗೆ ಆದ್ಯತೆ ನೀಡುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷ ಉಮೇಶ್ ಪಾಟೀಲ, ಮಹಾನಗರ ಪಾಲಿಕೆಯ ಸದಸ್ಯರಾದ ಶಾಂತಾಬಾಯಿ ಹಾಲಮಠ, ಯಂಕಮ್ಮ ಜಗದೀಶ ಗುತ್ತೆದಾರ, ಮೇಘನಾ ಮಂಜುನಾಥ್ ಕಳಸ್ಕರ, ಬಿಜೆಪಿ ಮಂಡಲದ ಅಧ್ಯಕ್ಷ ಅಶೊಕ ಮಾನಕರ, ಮುಖಂಡರಾದ ದತ್ತು ಫಡ್ನಿಸ, ಸಾವಿತ್ರಿ ಕುಳಗೆರಿ, ಧರಮ ಪ್ರಕಾಶ ಪಾಟೀಲ, ಫ್ರಭಾವತಿ ದೊಡ್ಮನಿ, ಮಲ್ಲಿಕಾರ್ಜುನ ದೇಶಮುಖ, ರಮಾನಂದ, ದಾನಮ್ಮ ಬಿರಾದರ, ರಾಜಶೇಖರ್ ಮಾಘ, ಶಿವಕುಮಾರ ಕಾಳಗಿ, ಶರಣು ಸಿಗಿ, ಸಂತೋಷ ಹುಡಗಿ, ಜಗದೀಶ್ ಗುತ್ತೆದಾರ, ಮಂಜುನಾಥ್ ಕಳಸ್ಕರ, ಪವನ ತಂಬೂರಿ, ಮಂಜುನಾಥ್ ಚಿಲ್ಲಶೆಟ್ಟಿ, ಸಿದ್ದು ಬಿರಾದರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here