ಲಕ್ಷ್ಮೀಪುರ:ಸಿಸಿ ರಸ್ತೆ ಕಾಮಗಾರಿಗೆ ಶಾಸಕ ರಾಜುಗೌಡ ಚಾಲನೆ

0
20

ಸುರಪುರ: ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕ ರಾಜುಗೌಡ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು,ಕಳೆದ ಕೆಲ ತಿಂಗಳುಗಳ ಹಿಂದೆ ಗ್ರಾಮದಲ್ಲಿನ ರಸ್ತೆ ಸುಧಾರಣೆ ಕುರಿತು ಸಾರ್ವಜನಿಕರು ಮನವಿಯನ್ನು ಮಾಡಿದ್ದರು,ಅಲ್ಲದೆ ಈ ಹಿಂದೆಯೂ ನಾನು ಗ್ರಾಮದಲ್ಲಿನ ರಸ್ತೆ ಕಾಮಗಾರಿಯನ್ನು ನಿರ್ಮಿಸುವುದಾಗಿ ಭರವಸೆಯನ್ನು ನೀಡಿದ್ದೆ,ಅದರಂತೆ ಇಂದು ಸುಮಾರು 50 ಲಕ್ಷ ರೂಪಾಯಿಗಳ ಅನುದಾನದಲ್ಲಿ ಉತ್ತಮವಾದ ಸಿ.ಸಿ ರಸ್ತೆ ನಿರ್ಮಿಸಲಾಗುತ್ತಿದ್ದು,ಶೀಘ್ರದಲ್ಲಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ಹನುಮಪ್ಪ ನಾಯಕ (ತಾತಾ),ಡಾ:ಸುರೇಶ ಸಜ್ಜನ್,ಬಿಜೆಪಿ ಜಿಲ್ಲಾಧ್ಯಕ್ಷ ಡಾ:ಶರಣ ಭೂಪಾಲರೆಡ್ಡಿ,ಭೀಮಣ್ಣ ಬೇವಿನಾಳ,ಶರಣು ನಾಯಕ ಬೈರಿಮಡ್ಡಿ,ರಾಜಾ ರಂಗಪ್ಪ ನಾಯಕ ಸೇರಿದಂತೆ ಸ್ಥಳಿಯ ಅನೇಕ ಜನ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here