ಸುರಪುರ: ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಾಲ್‍ಗೆ ಮಾಜಿ ವಿಧಾನಸಭೆ ವಿರೋಧ ಪಕ್ಷದ ನಾಯಕ,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಭೇಟಿ ನೀಡಿದರು.ದೇವದುರ್ಗ ತಾಲೂಕಿನ ತಿಂಥಣಿ ಬ್ರೀಡ್ಜ್ ಬಳಿಯ ಕಾಗಿನೆಲೆ ಗುರುಪೀಠದಲ್ಲಿನ ಹಾಲುಮತ ಸಂಸ್ಕøತಿ ವೈಭವ ಕಾರ್ಯಕ್ರಮದ ನಿಮಿತ್ಯವಾಗಿ ಹೆಲಿಕಾಪ್ಟರ್ ಮೂಲಕ ನಗರದ ಟೈಲರ್ ಮಂಜಿಲ್ ಬಳಿಯ ಹೆಲಿಪ್ಯಾಡ್‍ಗೆ ಆಗಮಿಸಿ ನಂತರ ಕಾಂಗ್ರೆಸ್ ಕಚೇರಿಗೆ ಔಪಚಾರಿಕ ಭೇಟಿಯನ್ನು ನೀಡಿದರು.
ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಯನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಹೆಲಿಪ್ಯಾಡ್‍ನಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿದರು.ನಂತರ ವಸಂತ ಮಹಲ್‍ನಲ್ಲಿ ಕೆಲಸಮಯವಿದ್ದು ಚಹಾ ಸೇವನೆ ನಂತರ ಹಾಲುಮತ ಸಂಸ್ಕøತಿ ವೈಭವ ಕಾರ್ಯಕ್ರಮ್ಕಕೆ ತೆರಳಿದರು.ಆದರೆ ಮಾದ್ಯಮದವರಿಗೆ ಯಾವುದೇ ಹೇಳಿಕೆ ನೀಡದೆ ತೆರಳಿದ ಘಟನೆಯೂ ನಡೆಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ,ಮಾಜಿ ಸಂಸದ ಬಿ.ವಿ ನಾಯಕ ಸೇರಿದಂತೆ ಅನೇಕ ಮುಖಂಡರು ಜೊತೆಗಿದ್ದರು.
ವಸಂತ ಮಹಲ್‍ನಿಂದ ನಗರದ ಪ್ರಮುಖ ಬೀದಿಗಳ ಮೂಲಕ ತಿಂಥಣಿಯ ಕಾಗನೆಲೆ ಕನಕ ಗುರುಪೀಠದ ವರೆಗೆ ಬೃಹತ್ ಬೈಕ್ ರ್ಯಾಲಿಯ ಮೂಲಕ ಕರೆದುಕೊಂಡು ಹೋಗಲಾಯಿತು.ಈ ಸಂದರ್ಭದಲ್ಲಿ ಅನೇಕ ಮುಖಂಡರು ಹಾಗೂ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.