ಹಿರಿಯ ಸಾಹಿತಿ ಮಲ್ಲಿಕಾರ್ಜುನ ಪಾಟೀಲ ನಿಧನ

0
21

ಸೊಲ್ಲಾಪುರ: ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದ ಜತ್ತ ತಾಲ್ಲೂಕಿನ ಉಟಗಿ ಗ್ರಾಮದ ಕನ್ನಡದ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಪಾಟೀಲ (50) ಅವರು ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಪಾಟೀಲರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗಡಿನಾಡಿನ ಅಪ್ಪಟ ಕನ್ನಡಿಗರಾದ ಇವರು ಗಡಿ ಕವಿಗಳೆಂದು ಪ್ರಸಿದ್ಧರು. ಮಹಾನೆಲದಲ್ಲಿ ಕನ್ನಡ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ನಾಲ್ಕು ಕವನ ಸಂಕಲನ  ಪ್ರಕಟಿಸಿದ್ದಾರೆ.  ಮಕ್ಕಳ ಸಾಹಿತ್ಯ, ಜಾನಪದ ಸಾಹಿತ್ಯ, ನಾಟಕ  ಮತ್ತು ಹಲವು  ಪ್ರಬಂಧಗಳನ್ನು ಮಂಡಿಸಿದ್ದಾರೆ.

Contact Your\'s Advertisement; 9902492681

ಸೃಜನಾತ್ಮಕ ಕಥೆ, ಕಾದಂಬರಿ ಲೇಖಕರಾಗಿ ಸಾಹಿತ್ಯಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರಿಗೆ ವಿವಿಧ ಪ್ರಶಸ್ತಿಗಳು ಲಭಿಸಿವೆ. ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚಿಸುವ ಮೂಲಕ ಗಡಿನಾಡಿನ ಪ್ರಾತಿನಿಧಿಕ ತೋರಿಸಿದ್ದರು. ಗಡಿಭಾಗದಲ್ಲಿ ಹಲವು ಸಾಹಿತ್ಯ, ಸಾಂಸ್ಕೃತಿ ಸಮ್ಮೇಳನದಲ್ಲಿ ಕವಿ, ಉಪನ್ಯಾಸಕರಾಗಿ  ಸಹಭಾಗ ತೋರಿಸಿ ಇಲ್ಲಿನ ಕನ್ನಡ ಅಭಿವೃದ್ಧಿಗಾಗಿ ಸದಾ ಮೂಂಚುಣಿಯಾಗಿ ಕಾರ್ಯ ನಿರ್ವಹಿಸಿದ್ದರು.

ಕನ್ನಡ ನಾಡಿನ ಹೊರಗಿದ್ದು ಸದಾ ಕನ್ನಡಕ್ಕಾಗಿ ಸಿದ್ಧರಿರುವ ಮಲ್ಲಿಕಾರ್ಜುನ ಪಾಟೀಲರನ್ನು ಕಳೆದುಕೊಂಡಿದ್ದು ಗಡಿನಾಡ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಗಡಿನಾಡು ಘಟಕ, ಆದರ್ಶ ಕನ್ನಡ ಬಳಗ, ಕನ್ನಡ ಶಿಕ್ಷಕ ಬಳಗ ಸೇರಿದಂತೆ ಗಡಿನಾಡಿನ ಕನ್ನಡಿಗರು ಸಂತಾಪ ವ್ಯಕ್ತಪಡಿಸಿದ್ದಾರೆ.

ಚೌಕಟ್ಟಿನಲ್ಲಿ : ಹಿರಿಯ ಸಾಹಿತಿ ಮಲ್ಲಿಕಾರ್ಜುನ ಪಾಟೀಲರ ನಿಧನದಿಂದ ಗಡಿನಾಡ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅವರ ಅಭಿಮಾನಿ ಮತ್ತು ಶಿಷ್ಯರಿಗೆ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. – ಸೋಮಶೇಖರ್ ಜಮಶೆಟ್ಟಿ, ಅಧ್ಯಕ್ಷರು, ಕಸಾಪ ಮಹಾರಾಷ್ಟ್ರ ಘಟಕ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here