ಅನನ್ಯ ಮಹಾವಿದ್ಯಾಲಯದಲ್ಲಿ “ರಸ್ತೆ ಸುರಕ್ಷತಾ ಸಪ್ತಾಹ”

0
46

ಕಲಬುರಗಿ: ನಗರದ ಅನನ್ಯ ಪದವಿ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಭಾರತೀಯ ರೆಡ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಪೊಲೀಸ್ ಇಲಾಖೆ (ಸಂಚಾರ ವಿಭಾಗ) ಮತ್ತು ಸಾರಿಗೆ ಇಲಾಖೆ ಕಲಬುರಗಿ ಇವರ ಸಹಯೋಗದೊಂದಿಗೆ “ರಸ್ತೆ ಸುರಕ್ಷತಾ ಸಪ್ತಾಹ” ಕಾರ್ಯಕ್ರಮವನ್ನು ಜಿಲ್ಲಾ ರೆಡ್‍ಕ್ರಾಸ್ ಸಭಾಪತಿ ಅಪ್ಪಾರಾವ ಅಕ್ಕೋಣಿ ಅವರು ಉದ್ಘಾಟಿಸಿ ಮಾತನಾಡಿ ನೇತ್ರದಾನ, ರಕ್ತದಾನ ಮಹತ್ವ ಎಂದು ತಿಳಿಸಿದರು.

ಟ್ರಾಫಿಕ್ ಎ.ಎಸ್.ಐ ರಾಜಕುಮಾರ ಕೋಬಾಳ ಮಾತನಾಡಿ ಸಂಚಾರಿ ನಿಯಮಗಳ ಬಗ್ಗೆ ತಿಳಿಸಿದ್ದರು. ಕಾಲೇಜಿನ ಅಧ್ಯಕ್ಷೆ ಸುಷ್ಮಾವತಿ ಎಸ್. ಹೊನ್ನಗೆಜ್ಜಿ ಮಾತನಾಡುತ್ತಾ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಡಾ.ಶರಣಬಸಪ್ಪ ವಡ್ಡನಕೇರಿ, ಅರುಣಕುಮಾರ ಲೋಯಾ, ಕಾಲೇಜಿನ ಪ್ರಾಂಶುಪಾಲ ಡಾ. ಶರಣಪ್ಪ ಜಿ. ಹೊನ್ನಗೆಜ್ಜಿ, ಕಾರ್ಯಕ್ರಮ ಅಧಿಕಾರಿಗಳಾದ ಆಶಾರಾಣಿ ವಿ ಕಲಕೋರೆ, ಗೌರಿ ಬೆಟಗೇರಿ, ರಾಜೇಶ್ವರಿ ಕಿರಣಗಿ, ಡಾ. ಸರಿತಾ ಕರಿಗುಡ್ಡ, ಶಿಲ್ಪಾ ಲಿಂಗದ, ಮೇಘಾ ಪಾಟೀಲ, ಪೂರ್ಣಿಮಾ ಸಾಳೊಂಕೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here