ಮೈಸೂರು: ವಿದ್ಯಾರ್ಥಿಗಳಿಗೆ ಮಾದಕವಸ್ತುಗಳ ಮಾರಾಟ; ಕಡಿವಾಣಕ್ಕೆ ಆಗ್ರಹ

0
81

ಮೈಸೂರು: ಶಾಲಾಕಾಲೇಜಿನ ವಿದ್ಯಾರ್ಥಿಗಳಿಗೆ  ಕೆಲವು ಕಿಡಿಗೇಡಿಗಳು ಮಾದಕ ಪದಾರ್ಥಗಳನ್ನು ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ವ್ಯಸನಿಗಳನ್ನಾಗಿ ಮಾಡುವ ದಂಧೆ ಹೆಚ್ಚಾಗಿ ನಡೆಯುತ್ತಿದ್ದು, ಶಾಲಾಕಾಲೇಜಿನ ಆವರಣದಲ್ಲಿ ಅಪ್ರಾಪ್ತ ರಿಗೆ ದ್ವಿಚಕ್ರವಾಹನ ಮೊಬೈಲ್ ಗೆ ಅವಕಾಶ ನೀಡದಂತೆ ಹಗೂ ಶಾಲಾ ಕಾಲೇಜಿನ ಸುತ್ತಮುತ್ತಲು ಸಿಗರೇಟ್ ವ್ಯಾಪಾರ  ಸ್ಥಗಿತಗೊಳಿಸಿ  ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಂತೆ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷರಾದ ಜಾಕೀರ್ ಹುಸೇನ್ ಅವರ ನೇತೃತ್ವದಲ್ಲಿ ಮೈಸೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಸಾಂಸ್ಕೃತಿಕ ನಗರಿ ಮೈಸೂರು ಇಡೀ ವಿಶ್ವದಲ್ಲಿ ಪ್ರವಾಸ ಮತ್ತು ವಿದ್ಯಾಭ್ಯಾಸಕ್ಕೆ ಹೆಸರುವಾಸಿಯಾಗಿದ್ದು, ದೇಶ ವಿದೇಶಗಳಿಂದ ರಾಜ್ಯ ಹೊರರಾಜ್ಯಗಳಿಂದ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಬಂದು ನೆಲೆಸಿದ ಕೆಲವು ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಈ ರೀತಿಯ ಮಾದಕವಸ್ತುಗಳ ಮಾರಾಟ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮುಖಾಂತರ ಜಗತ್ಜಾಹೀರಾಗಿದ್ದು, ಇದಕ್ಕೆ ಬಲಿಯಾಗುತ್ತಿರುವ ಅಮಾಯಕ ವಿದ್ಯಾರ್ಥಿಗಳ  ಭವಿಷ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಸದೃಢಗೊಳ್ಳಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಮುಂದಿನ ಭವಿಷ್ಯದ ವಾರಸುದಾರರಾದ ಯುವ ಪೀಳಿಗೆಗಳಿಗೆ ಗಾಂಜ, ಅಫೀಮ್ ನಂತಹ ನಶೆ ಹತ್ತಿಸುವ ಕೃತ್ಯ ನಡೆಯುತ್ತಿದ್ದು, ಅವರಲ್ಲಿರುವ ಕ್ರಿಯಾಶೀಲತೆಯನ್ನು ಕಳೆದುಕೊಂಡು ಜಗತ್ತಿನ ಪರಿವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.  ಶ್ರೀಮಂತ ಮನೆತನದ ವಿದ್ಯಾರ್ಥಿಗಳ ಹಾದಿಯಾಗಿ ಈ ರೀತಿಯ ಹೀನ ಕೃತ್ಯಗಳು ಬಡ ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೂ  ತಲುಪಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.

ಈ ಸಂದರ್ಭದಲ್ಲಿ ಸಮಿತಿಯ ಗೌರವಧ್ಯಕ್ಷ  ಎಂ. ಚಂದ್ರಶೇಖರ್, ಪಾಲಿಕೆ ಮಾಜಿ ಮಹಾಪೌರರು ಪುರುಷೋತ್ತಮ್, ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ರಾಜ್ಯ ಕಾರ್ಯದರ್ಶಿ ಪ್ರಶಾಂತ್ ಆರ್ಯ, ಕಮಲ ಅನಂತರಾಮು, ಅರವಿಂದ ಶರ್ಮ, ರದಿವುಲ್ಲ ಖಾನ್, ಪ್ರಗತಿಪರ ಹೋರಾಟಗಾರರು ದ್ಯಾವಪ್ಪ ನಾಯ್ಕ, ಸಮಾಜಪರ  ಚಿಂತಕರು ಶಿವಪ್ಪ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here