ಸುರಪುರ: ನನ್ನ ಕ್ಷೇತ್ರದ ಜನರ ರಕ್ಷಣೆ ನನ್ನ ಜವಬ್ದಾರಿಯಾಗಿದೆ.ಆದ್ದರಿಂದ ಕ್ರಷ್ಣಾ ನದಿ ಪ್ರವಾಹಕ್ಕೆ ಸಿಲುಕಿದ ಜನರ ರಕ್ಷಣೆಗೆ ಸದಾಕಾಲ ನಿಮ್ಮ ಜೊತೆಗಿರುವುದಾಗಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ ಸಂತ್ರಸ್ತರಲ್ಲಿ ಧೈರ್ಯ ತುಂಬಿದರು.
ತಾಲ್ಲುಕಿನ ಹೆಮ್ಮಡಗಿ,ಸುಗೂರು,ತಿಂಥಣಿ,ಶೆಳ್ಳಿಗಿ ಮತ್ತಿತರೆ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳು ಆಲಿಸಿ ಮಾತನಾಡಿ, ಮಹಾರಷ್ಟ್ರದಲ್ಲಿ ಸುರಿದ ಮಹಾಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ಇದರಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.ಇದಕ್ಕೆ ಸರಕಾರ ನಿಮ್ಮ ಜೊತೆಗಿದ್ದು ಪರಿಹಾರ ಒದಗಿಸಲಿದೆ. ಸಂಕಷ್ಟಕ್ಕೀಡಾದ ಜನರಿಗೆ ಸರಕಾರದಿಂದ ಅಗತ್ಯ ನೆರವು ಕೊಡಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಈಗ ಮನೆ ಕಳೆದುಕೊಂಡವರಿಗೆ ಶಾಸ್ವತ ಮನೆಗಳನ್ನು ಕಲ್ಪಿಸಲು ಮುಂದಾಗುವೆನು.ಅಲ್ಲದೆ ರೈತರ ಬೆಳೆಗಳ ನಷ್ಟವನ್ನು ಸರಕಾರ ಭರಿಸಲಿದೆ ಯಾವುದೆ ಕಾರಣಕ್ಕು ರೈತರು ಮತ್ತು ಸಂತ್ರಸ್ತರು ಎದೆಗುಂದದಂತೆ ಧೈರ್ಯ ತುಂಬಿದರು.
ಚೌಡೇಶ್ವರಿಹಾಳ ಗ್ರಾಮದ ನದಿ ದಂಡೆಯ ಜಮೀನಲ್ಲಿ ಮನೆ ನಿರ್ಮಿಸಿಕೊಂಡಿದ್ದ ರೈತ ವೆಂಕಟರಡ್ಡಿ ಕುಟುಂಬ ನದಿ ಪ್ರವಾಹಕ್ಕೆ ಸಿಲುಕಿ ನಡುಗಡ್ಡೆಯಂತಾದ ಮನೆಯಲ್ಲಿ ಸಿಲುಕಿ ಸಂಕಷ್ಟಕ್ಕೆ ಸಿಲುಕಿರುವ ಸುದ್ದಿ ತಿಳಿದು ನೆರೆಯ ಸ್ಥಳಕ್ಕೆ ಆಗಮಿಸಿದ ಶಾಸಕ ರಾಜುಗೌಡ ಅಗ್ನಿ ಶಾಮಕ ದಳದ ಸಿಬ್ಬಂದಿಯೊಂದಿಗೆ ಸ್ವತಃ ತಾವೇ ರಕ್ಷಣಾ ಜಾಕೇಟ್ ಧರಿಸಿ ಬೋಟ್ ಹತ್ತಿ ವೆಂಕಟರಡ್ಡಿ ಕುಟುಂಬವನ್ನು ಸುರಕ್ಷಿತವಾಗಿ ಕರೆತಂದು ಸಾಹಸ ಮೆರೆದಿದ್ದಾರೆ.ಇವರ ಜೊತೆಗೆ ಜಿಲ್ಲಾ ಪಂಚಾಯತಿ ಸದಸ್ಯ ಮರಿಲಿಂಗಪ್ಪ ಕರ್ನಾಳಕೂಡ ತೆರಳಿದ್ದರು.
ಕಾರ್ಯಾಚರಣೆ ಸಂದರ್ಭದಲ್ಲಿ ತಹಸೀಲ್ದಾರ್ ಸುರೇಶ ಅಂಕಲಗಿ,ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ,ಪಿಐ ಆನಂದರಾವ್,ಆರ್.ಐ ಗುರುಬಸಪ್ಪ ಹಾಗು ಮುಖಂಡರಾದ ಬಿ.ಎಂ.ಅಳ್ಳಿಕೋಟೆ,ದೊಡ್ಡ ದೇಸಾಯಿ ದೇವರಗೋನಾಲ,ಎಸ್.ಎನ್.ಪಾಟೀಲ,ದುರಗಪ್ಪ ಗೋಗಿಕೇರಾ,ಶ್ರೀನಿವಾಸ ನಾಯಕ ದರಬಾರಿ,ಭೀಮಣ್ಣ ಬೇವಿನಹಾಳ,ದೇವರಾಜ ಮಕಾಶಿ,ನರಸಿಂಹಕಾಂತ ಪಂಚಮಗಿರಿ,ಜಗದೀಶ ಪಾಟೀಲ,ವಿರುಪಾಕ್ಷಿ ಕೋನಾಳ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗು ರಾಜುಗೌಡರ ಬೆಂಬಲಿಗರಿದ್ದರು.